Sunday, Aug 18 2019 | Time 04:35 Hrs(IST)
Karnataka Share

ಬಿಜೆಪಿಯಲ್ಲಿ ಗುಂಪುಗಳಿಲ್ಲ : ಜಗದೀಶ್ ಶೆಟ್ಟರ್

ಬಿಜೆಪಿಯಲ್ಲಿ ಗುಂಪುಗಳಿಲ್ಲ : ಜಗದೀಶ್ ಶೆಟ್ಟರ್
ಬಿಜೆಪಿಯಲ್ಲಿ ಗುಂಪುಗಳಿಲ್ಲ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ ಮೇ 15 (ಯುಎನ್‌ಐ) ಬಿಜೆಪಿಯಲ್ಲಿ ಯಾವುದೇ ಗುಂಪಿಲ್ಲ, ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಯಿಸಿರುವ ಶೆಟ್ಟರ್, ತಮ್ಮ ಮಾತು ಸಿದ್ದರಾಮಯ್ಯ ಅವರಿಗೆ ನಾಟಿದಂತಿದೆ. ಅವರ ಅನುಕಂಪದ ಅಗತ್ಯವಿಲ್ಲ ಎಂದಿದ್ದಾರೆ.ಸಿದ್ದರಾಮಯ್ಯ ರಾಜಕೀಯ ಚದುರಂಗದಾಟ ನಡೆಸಿ ಸರ್ಕಾರ ಉರುಳಿಸಲು ಪ್ರಯತ್ನಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಿದ್ದು ಬೆಂಬಲಿಗರು ಹೇಳಲು ಆರಂಭಿಸಿದ್ದಾರೆ. ಮುಂದಿನ ಚುನಾವಣೆವರೆಗೆ ಕಾಯುವ ವ್ಯವಧಾನ ಸಿದ್ದರಾಮಯ್ಯ ಅವರಿಗಿಲ್ಲ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಆರ್ ವಿ ದೇಶಪಾಂಡೆ, ಎಂ ಬಿ ಪಾಟೀಲ್ , ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.ಸಿದ್ದರಾಮಯ್ಯ ಅವರನ್ನು ಕಾವೇರಿ ಬಂಗಲೆಯಿಂದ ಕುಮಾರಸ್ವಾಮಿ ಹೊರಗೆ ಹಾಕಲಿ ನೋಡೋಣ ಎಂದು ಸವಾಲು ಹಾಕಿರುವ ಶೆಟ್ಟರ್, ಯಾವ ನೈತಿಕತೆಯಿಂದ ಕಾವೇರಿಯಲ್ಲಿ ಇರುವಿರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ 71 ಪ್ರಕರಣಗಳು ಬಾಕಿ ಇದೆ. ಅರ್ಕಾವತಿ ಡಿನೋಟಿಪಿಕೇಷನ್ ಬಗ್ಗೆ ವರದಿ ಸದನದಲ್ಲಿ ಮಂಡಿಸಿದಲ್ಲಿ ಸಿದ್ದರಾಮಯ್ಯ ಸೆರೆಮನೆವಾಸ ಅನುಭವಿಸಬೇಕಾಗಬಹುದು. ಹೀಗಿರುವಾಗ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಯುಎನ್ಐ ಜಿಎಸ್‌ಆರ್ ವಿಎನ್ 2000