Saturday, Jul 4 2020 | Time 18:01 Hrs(IST)
 • ಕೊರೋನಾ ಸೋಂಕು: ಅಪರಾಧ ನಿಯಂತ್ರಣ ಪೊಲೀಸರಿಗೆ ಸವಾಲು !!!!
 • ಕರೋನಾ ಮಾರಿಗೆ ಹೆದರಿ ಊರುಗಳಿಗೆ ಪೇರಿ ಕಿತ್ತ ಜನತೆ !!
 • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
 • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
 • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
 • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
 • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
 • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
 • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
 • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
 • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
 • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
 • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
 • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
 • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
Special Share

ಬಂದ್ ಕರೆಗೆ ಕಲ್ಯಾಣ - ಕರ್ನಾಟಕ ಆರು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ

ಕಲಬುರಗಿ, ಫೆ 13(ಯುಎನ್ಐ) ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕೆಲ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಗುರುವಾರ ಕರ್ನಾಟಕ ಬಂದ್ ಕರೆಗೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜನರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ
ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಾದಗೀರ್, ರಾಯಚೂರು, ಕೊಪ್ಪಳ ,ಗುಲಬರ್ಗ ಹಾಗೂ ಬಳ್ಳಾರಿಯಲ್ಲಿ ಬಂದ್ ಜನರಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕಲಬುರಗಿ ನಗರದಲ್ಲಿ ಸಾಮಾನ್ಯ ಜನ ಜೀವನದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಸ್ತೆಗಳಲ್ಲಿ ವಾಹನಗಳ ಸಂಚಾರವೂ ಸಾಮಾನ್ಯವಾಗಿತ್ತು.
ಕರ್ನಾಟಕ ಬಂದ್ ಗೆ ನೈತಿಕ ಬೆಂಬಲವನ್ನು ಮಾತ್ರ ವ್ಯಕ್ತಪಡಿಸಿದ್ದೇವೆ, ಬಂದ್ ನಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಹೋಟೆಲ್ ಹಾಗೂ ಬೇಕರಿ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಬಂದ್ ಕರೆಗೆ ಯಾದಗೀರ್ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಬಳ್ಳಾರಿಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಬಂದ್ ಯಾವುದೇ ಪರಿಣಾಮ ಉಂಟು ಮಾಡಲಿಲ್ಲ.
ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದರೂ, ವಾಹನಗಳ ಸಂಚಾರ ಮಾಮೂಲಿನಂತಿತ್ತು. ಕನ್ನಡ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ನಾಯಕರು ನಗರದ ಪ್ರಮುಖ ರಸ್ತೆಯಲ್ಲಿ ಪ್ರತಭಟನಾಮೆರವಣಿಗೆ ನಡೆಸಿದರು
ರಾಯಚೂರು, ಬೀದರ್ ಹಾಗೂ ಕೊಪ್ಪಳದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಗರಗಳಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಲ ಕನ್ನಡ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಸೂಕ್ತವಾಗಿ ಜಾರಿಗೊಳಿಸಲು ಒತ್ತಾಯಿಸಿವೆ. ಈ ನಗರಗಳಲ್ಲಿ ಸಾಮಾನ್ಯ ಜನಜೀವನ ಯಾವುದೇ ರೀತಿಯಲ್ಲಿ ಪರಿಣಾಮ ಉಂಟಾಗಿಲ್ಲ.
ಯುಎನ್ಐ ಕೆವಿಆರ್ 1617
More News
ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ

ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ

04 Jul 2020 | 5:45 PM

ಹೈದ್ರಾಬಾದ್, ಜುಲೈ ೪(ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ತಮ್ಮ ಲಡಾಖ್ ಭೇಟಿಯ ವೇಳೆ ನೆರೆಯ ದೇಶ ಚೈನಾದ ಹೆಸರು ಪ್ರಸ್ತಾಪ ಮಾಡದಿರುವುದಕ್ಕೆ ಏಐಎಂಐಎಂ ಅಧ್ಯಕ್ಷ ಅಸದುದ್ದಿನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಚೈನಾ ಹೆಸರು ಹೇಳಲು ಹಿಂಜರಿಯುತ್ತಿದ್ದಾರೆ ಎಂದು ಸರಣಿ ಟ್ವೀಟ್ ಗಳಲ್ಲಿ ದೂರಿದ್ದಾರೆ.

 Sharesee more..

ರಜೌರಿ : ಉಗ್ರರ ಅಡಗುದಾಣ ಧ್ವಂಸ, ಸ್ಫೋಟಕಗಳ ವಶ

04 Jul 2020 | 2:28 PM

 Sharesee more..