Monday, Jun 1 2020 | Time 02:33 Hrs(IST)
International Share

ಬ್ರೆಜಿಲ್ ನಲ್ಲಿ ಕೊರೊನಾ ಸಾವಿನ ಸಂಖ್ಯೆ 21048 ಕ್ಕೆ ಏರಿಕೆ

ರಿಯೋ ಡಿ ಜನೈರೋ, ಮೇ 23 (ಸ್ಫುಟ್ನಿಕ್) ಕೋವಿಡ್ – 19 ರಿಂದ ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ 1001 ಜನರು ಮೃತಪಟ್ಟಿದ್ದು ಒಟ್ಟು ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 21,048 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ 20803 ಜನರಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 3,30,890 ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಅಂಕಿಅಂಶ ನೀಡಿದೆ.
ಇದಕ್ಕೂ ಒಂದು ದಿನ ಮುನ್ನ ಬ್ರೆಜಿಲ್ ನಲ್ಲಿ 18,508 ಹೊಸ ಪ್ರಕರಣಗಳು ವರದಿಯಾಗಿದ್ದು 1,118 ಜನರು ಮೃತಪಟ್ಟಿದ್ದರು.
ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ – 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ ಸುಮಾರು 52 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು 3,37,000 ಕ್ಕೂ ಹೆಚ್ಚು ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ಯುಎನ್ಐ ಜಿಎಸ್ಆರ್ 0811
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..