Tuesday, Nov 12 2019 | Time 03:29 Hrs(IST)
Sports Share

ಬಾರ್ಸಿಲೋನಾ ಕ್ಲಬ್‌ ಸೇರಿದ 16ರ ಪೋರ ಲೂಯಿ ಬ್ಯಾರಿ

ಬಾರ್ಸಿಲೋನಾ, ಜು 12 (ಯುಎನ್‌ಐ) 16ರ ಪ್ರಾಯದ ಪ್ರತಿಭಾವಂತ ಫುಟ್ಬಾಲ್‌ ಆಟಗಾರರನ್ನು ಬಾರ್ಸಿಲೋನಾ ತನ್ನ ಕ್ಲಬ್‌ಗೆ ಸೇರ್ಪಡೆ ಮಾಡಿಕೊಳ್ಳವ ಮೂಲಕ ಪ್ಯಾರಿಸ್‌ ಸೈಂಟ್‌ ಜರ್ಮನ್‌ ತಂಡವನ್ನು ಹಿಂದಿಕ್ಕಿತು.
ವೆಸ್ಟ್ ಬ್ರೊಮ್‌ವಿಚ್‌ ಅಲ್ಬಿಯನ್‌ ಸ್ಟ್ರೈಕರ್‌ ಲೂಯಿ ಬ್ಯಾರಿ ಅವರು ಬಾರ್ಸಿಲೋನಾಗೆ ಸಹಿ ಮಾಡುವ ಮೊದಲು ಪ್ಯಾರಿಸ್‌ ಸೈಂಟ್‌ ಜರ್ಮನ್‌ ತಂಡದ ಪರ ಆಡಲು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಪಿಎಸ್‌ಜಿ ಬ್ಯಾರಿ ಅವರನ್ನು ಲಾ ಮ್ಯಾಸಿಯಾ ವಿರುದ್ಧ ಆಡುವಂತೆ ಮನವರಿಕೆ ಮಾಡಿತ್ತು.
ಇದನ್ನು ನಿರಾಕರಿಸಿದ ಲೂಯಿ ಬ್ಯಾರಿ ಅವರನ್ನು ಮೂರು ವರ್ಷಗಳ ಗುತ್ತಿಗೆಗೆ ಬಾರ್ಸಿಲೋನಾ ಕ್ಲಬ್‌ ಸಹಿ ಮಾಡಿಸಿಕೊಂಡಿದೆ. 2022ರ ವರೆಗೂ ಬಾರ್ಸಿಲೋನಾ ಜತೆಗೆ 19 ವಯೋಮಿತಿ ತಂಡದಲ್ಲಿ ಆಡಲಿದ್ದು, ಜತೆಗೆ, ವೆಸ್ಟ್‌ ಬ್ರೂಮ್‌ಗೂ ಆಡಲಿದ್ದಾರೆ. ಬ್ಯಾರಿ ಅವರ ಗುತ್ತಿಗೆಗೆ 295 ಸಾವಿರ ಯುಎಸ್‌ ಡಾಲರ್‌ ನೀಡಲಾಗುತ್ತಿದೆ.

ಲೂಯಿ ಬ್ಯಾರಿ ಇಂಗ್ಲೆಂಡ್ ಪರ 16 ವಯೋಮಿತಿ ತಂಡದ ಪರ 9 ಪಂದ್ಯಗಳಿಂದ ಏಳು ಗೋಲು ಗಳಿಸಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಅವರು ಬಾರ್ಕಾ ಪರ ಆಡಲಿದ್ದಾರೆಂದು ಬಾರ್ಸಿಲೋನಾ ಕ್ಲಬ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯುಎನ್‌ಐ ಆರ್‌ಕೆ ಎಎಚ್‌ 1414
More News

ಎನ್ ಸಿಎ ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ

11 Nov 2019 | 10:58 PM

 Sharesee more..
“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

11 Nov 2019 | 10:02 PM

ನಾಗಪುರ, ನ.11 (ಯುಎನ್ಐ)- ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಬಗ್ಗೆ ಕನಸಿನಲ್ಲಿಯೂ ಕಂಡಿರಲಿಲ್ಲ ಎಂದು ಟೀಮ್ ಇಂಡಿಯಾದ ಯುವ ವೇಗಿ ದೀಪಕ್ ಚಹಾರ್ ತಿಳಿಸಿದ್ದಾರೆ.

 Sharesee more..