Wednesday, Feb 26 2020 | Time 10:28 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಭಯೋತ್ಪಾದನೆ ಪ್ರಾಯೋಜಿಸುವ ಪಾಕ್ ವಿರುದ್ಧ ಸಿಡಿಎಸ್ ರಾವತ್ ವಾಗ್ದಾಳಿ

ಭಯೋತ್ಪಾದನೆ ಪ್ರಾಯೋಜಿಸುವ ಪಾಕ್ ವಿರುದ್ಧ ಸಿಡಿಎಸ್ ರಾವತ್ ವಾಗ್ದಾಳಿ
ಭಯೋತ್ಪಾದನೆ ಪ್ರಾಯೋಜಿಸುವ ಪಾಕ್ ವಿರುದ್ಧ ಸಿಡಿಎಸ್ ರಾವತ್ ವಾಗ್ದಾಳಿ

ನವದೆಹಲಿ, ಜನವರಿ 16 (ಯುಎನ್‌ಐ) ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟು,ಪ್ರಾಯೋಜಿಸುವ ದೇಶಗಳನ್ನು ರಾಜತಾಂತ್ರಿಕವಾಗಿ ದೂರವಿಡಬೇಕು ಎಂದು ಪಾಕ್ ವಿರುದ್ಧ ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಗುರುವಾರ ವಾಗ್ದಾಳಿ ಮಾಡಿದ್ದಾರೆ.

9/11 ದಾಳಿಯ ನಂತರದ ಭಯೋತ್ಪಾದಕ ಗುಂಪುಗಳ ಮೇಲೆ ಅಮೆರಿಕ ತೆಗೆದುಕೊಂಡ ರೀತಿಯಲ್ಲಿ ಅವರು ಕಠಿಣ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದರು.ರೈಸಿನಾ ಡೈಲಾಗ್ 2020 ರಲ್ಲಿ ಮಾತನಾಡಿದ ಜನರಲ್ ರಾವತ್, ' ಭಯೋತ್ಪಾದನೆ ವಿರುದ್ಧ ಜಾಗತಿಕವಾಗಿ ಮಾತನಾಡುವುದು ಮತ್ತೊಂದೆಡೆ ಭಯೋತ್ಪಾದನೆ ಪ್ರಾಯೋಜಿಸುವ ರೀತಿಯ ನಿಲುವು ಹೊಂದಲು ಸಾಧ್ಯವಿಲ್ಲ ಎಂದರು.

ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಸಮುದಾಯ ದೂರವಿಡಬೇಕು ಎಂದು ಅವರು ಒತ್ತಿ ಹೇಳಿದರು.

ಸಾಂಪ್ರದಾಯಿಕ ಯುದ್ಧದಂತೆಯೇ ಭಯೋತ್ಪಾದನೆಯ ಭವಿಷ್ಯ ಕೊಳಕಿನಿಂದ ಕೂಡಿದೆ. . ಸುಖಾಂತ್ಯವಿದೆ ಎಂದು ನಾವು ಭಾವಿಸಬಹುದು, ಆದರೆ ಇರುವುದಿಲ್ಲ. ಆದ್ದರಿಂದ ಭಯೋತ್ಪಾದನೆ ವಿರುದ್ಧದ ಯುದ್ಧ ಕೊನೆಯಾಗಲಿದೆ ಎಂದು ನಾವು ಭಾವಿಸುವುದೇ ತಪ್ಪು ಎಂದು ಅವರು ಹೇಳಿದರು.

ಭಯೋತ್ಪಾದನೆಗೆ ಕುಮ್ಮಕ್ಕು, ಪ್ರಾಯೋಜಕತ್ವ ನೀಡುವ ತನಕ ಭಯೋತ್ಪಾದನೆ ಇರುತ್ತದೆ. ನಾವು ಬುಲ್ ಅನ್ನು ಕೊಂಬಿನಿಂದ ತೆಗೆದು ಮೂಲ ಕಾರಣಕ್ಕೆ ಹೊಡೆಯಬೇಕು ಎಂದರು.

9/11 ದಾಳಿಯ ನಂತರದ ಭಯೋತ್ಪಾದಕ ಗುಂಪುಗಳ ಮೇಲೆ ಅಮೆರಿಕ ತೆಗೆದುಕೊಂಡ ರೀತಿಯಲ್ಲಿಯೂ ಅವರು ಕಠಿಣ ಮಾರ್ಗವನ್ನು ಅನುಸರಿಸಿದರು.

ಭಯೋತ್ಪಾದನೆಯನ್ನು ಕೊನೆಗೊಳಿಸಬೇಕಾದರೆ ಅದು 9/11 ರ ನಂತರ ಅಮೆರಿಕ ತೆಗೆದುಕೊಂಡ ಕ್ರಮದ ರೀತಿಯಲ್ಲೇ ಸಾಗಬೇಕಾಗಬಹದು ಎಂದರು.

ಮೂಲಭೂತವಾದವನ್ನು ನಾವು ಮೊಳಕೆಯಲ್ಲೆ ಚಿವುಟಿ ಹಾಕಬೇಕು ಏಕೆಂದರೆ ಇಲ್ಲದೆ ಹೋದರೆ ಶಾಲೆಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಸ್ಥಳಗಳಿಂದ ಪ್ರಾರಂಭವಾಗಿಬಿಡುತ್ತದೆ. ಕಾಶ್ಮೀರದಲ್ಲಿ, 10-12 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಲ್ಲೂ ಮೂಲಭೂತ ವಾದವಿದೆ ಈ ಚಿಕ್ಕ ಮಕ್ಕಳನ್ನು ಮೂಲಭೂತವಾದಿಂದ ಪ್ರತ್ಯೇಕಿಸಬೇಕು ಎಂದರು.

ತಾಲಿಬಾನ್ ಜೊತೆಗಿನ ಮಾತುಕತೆಗಳನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಜನರಲ್ ರಾವತ್ ಅವರು "ಭಯೋತ್ಪಾದನೆಯ ಆಯುಧ ಬಿಟ್ಟುಕೊಟ್ಟರೆ ಎಲ್ಲರೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಬಹದು ಹೇಳಿದರು.

ತಾಲಿಬಾನ್ ಅಥವಾ ಯಾವುದೇ ಸಂಘಟನೆಯು ಭಯೋತ್ಪಾದನೆಯನ್ನು ಆಲೋಚಿಸುತ್ತಿದೆ ಎಂದರೆ ಆ ಭಯೋತ್ಪಾದನೆಯ ಆಯುಧವನ್ನು ಮೊದಲು ತ್ಯಜಿಸಿ, ರಾಜಕೀಯ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಹೇಳಿದರು.

ಸಿಡಿಎಸ್ ರಚನೆಯ ಬಗ್ಗೆ ಕೇಳಿದ್ದಕ್ಕೆ "ಸಿಡಿಎಸ್ ಸಮಾನರಲ್ಲಿ ಮೊದಲನೆಯದು ಆದರೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಜವಾಬ್ದಾರಿಗಳನ್ನು ಪಡೆಯಲಾಗಿದೆ ಎಂದರು.

ಯುಎನ್ಐ ಕೆಎಸ್ಆರ್ 1225