Wednesday, Feb 26 2020 | Time 09:44 Hrs(IST)
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 1000 ಬಾಂಗ್ಲಾ ಪ್ರಜೆಗಳ ಬಂಧನ: ಬಾಂಗ್ಲಾದೇಶ

ನವದೆಹಲಿ, ಜ.3 (ಯುಎನ್ಐ) ಭಾರತದಲ್ಲಿ "ಅಕ್ರಮವಾಗಿ" ವಾಸವಾಗಿದ್ದಕ್ಕಾಗಿ ಸುಮಾರು 1,000 ಬಾಂಗ್ಲಾದೇಶ ಪ್ರಜೆಗಳನ್ನು 2019 ರಲ್ಲಿ ಬಾಂಗ್ಲಾದೇಶದಲ್ಲಿ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ (ಬಿಜಿಬಿ)ದ ಮಹಾನಿರ್ದೇಶಕ ಮೇಜರ್ ಜನರಲ್ ಶಫೀನುಲ್ ಇಸ್ಲಾಂ ಗುರುವಾರ ಢಾಕಾದಲ್ಲಿ ಹೇಳಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶವು ಭಾರತದಲ್ಲಿ "ಕಾನೂನುಬಾಹಿರವಾಗಿ" ವಾಸಿಸುತ್ತಿದ್ದ ತನ್ನ ನಾಗರಿಕರ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ.
2019ರ ಡಿಸೆಂಬರ್ 25ರಿಂದ 30ರವರೆಗೆ ನವದೆಹಲಿಯಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಮಹಾನಿರ್ದೇಶಕರು ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ನಡುವಿನ ಮಾತುಕತೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ.
135 ಮಕ್ಕಳು, 258 ಮಹಿಳೆಯರು ಮತ್ತು 606 ಪುರುಷರು ಸೇರಿ 999 ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮೇಜರ್ ಜನರಲ್ ಇಸ್ಲಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರಲ್ಲಿ 312 ಮಂದಿಯನ್ನು ನವೆಂಬರ್‌ನಲ್ಲಿ ಮತ್ತು 133 ಮಂದಿಯನ್ನು ಡಿಸೆಂಬರ್‌ನಲ್ಲಿ ಬಂಧಿಸಲಾಯಿತು. ಭಾರತಕ್ಕೆ ಹೋಗುವಾಗ ಅಥವಾ ಮನೆಗೆ ಹಿಂದಿರುಗುವಾಗ ಅವರನ್ನು ಗಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಗುರುತುಗಳನ್ನು ಪತ್ತೆ ಹಚ್ಚಲಾಗಿದೆ. ಮತ್ತೊಂದು ದೇಶದಲ್ಲಿ "ಕಾನೂನುಬಾಹಿರವಾಗಿ ಪ್ರವೇಶಿಸಲು ಮತ್ತು ಉಳಿಯುವುದನ್ನು ತಡೆಯುವ ಕಾನೂನಿನ ಪ್ರಕಾರ ಅವರ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಯಿತು. ಬಂಧಿತರನ್ನು ಬಂಧನದಲ್ಲಿಡಲಾಗಿದೆ ಅಥವಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೆಲವು ವಾರಗಳ ಹಿಂದೆ, ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ವಿದೇಶಾಂಗ ನೀತಿಯ ಸಲಹೆಗಾರ ಗೌಹರ್ ರಿಜ್ವಿ ಅವರು ಕೋಲ್ಕತ್ತಾದಲ್ಲಿ, ತಮ್ಮ ದೇಶದ ನಾಗರಿಕರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ ಅವರನ್ನು ಮರಳಿ ಕರೆದೊಯ್ಯಲಾಗುವುದು ಎಂದು ಹೇಳಿದ್ದರು. "ಆದರೆ ವ್ಯಕ್ತಿಯು ಬಾಂಗ್ಲಾದೇಶದ ಪ್ರಜೆ ಎಂದು ಸಾಬೀತುಪಡಿಸಬೇಕು" ಎಂದು ಅವರು ಷರತ್ತು ವಿಧಿಸಿದ್ದರು.
ಬಾಂಗ್ಲಾದೇಶದಲ್ಲಿ "ಅಕ್ರಮವಾಗಿ" ಉಳಿದುಕೊಂಡಿರುವ 96 ಭಾರತೀಯರ ಪಟ್ಟಿಯನ್ನು ಬಾಂಗ್ಲಾದೇಶವು ಸಲ್ಲಿಸಿದೆ. ಅವರಲ್ಲಿ 62 ಮಂದಿಯನ್ನು ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಹಸ್ತಾಂತರಿಸಲಾಗಿದ್ದು, ಉಳಿದವರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಕಾನೂನು ಕ್ರಮಗಳನ್ನು ಆರಂಭಿಸಲಾಗಿದೆ. ಗಡಿ ಗುಂಡಿನ ದಾಳಿಯಲ್ಲಿ ಕನಿಷ್ಠ 35 ಬಾಂಗ್ಲಾದೇಶ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಮೇಜರ್ ಜನರಲ್ ಇಸ್ಲಾಂ ಹೇಳಿದ್ದಾರೆ.
ಯುಎನ್ಐ ಎಎಚ್ 1011