Wednesday, Aug 12 2020 | Time 01:11 Hrs(IST)
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ಓರ್ವ ಸಾವು,ಮೂವರಿಗೆ ಗಾಯ : ತಡರಾತ್ರಿ ಗೃಹ ಸಚಿವರಿಗೆ ದೂರವಾಣಿ ಕರೆ
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
business economy Share

ಭಾರತದಲ್ಲೇ ಪ್ರಥಮ ಬಾರಿಗೆ ಸೋಂಕು ನಿರೋಧಕ ಯಂತ್ರ ಬಿಡುಗಡೆ

ಬೆಂಗಳೂರು, ಮೇ 20 (ಯುಎನ್ಐ) ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಹಾಂಗ್ ಕಾಂಗ್ ಮೂಲದ ಚಿಲ್ಲಿ ಇಂಟರ್ ನ್ಯಾಷನಲ್ ಸಂಸ್ಥೆಯು ಭಾರತಲ್ಲೇ ಮೊದಲ ಬಾರಿಗೆ ಬ್ಲು ರೇ ಡಿಸ್ಇನ್ಫೆಕ್ಷನ್ ಮಷೀನ್ (ಕಿಲ್ಲರ್ 100) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಜಪಾನ್ ನಲ್ಲಿ ಈ ಸಾಧನದ ವಿನ್ಯಾಸವನ್ನು ಮಾಡಲಾಗಿದ್ದು ಚೈನಾದಲ್ಲಿ ಇದರ ಜೋಡಣೆ ಮಾಡಲಾಗಿದೆ. ಈ ಸಾಧನವು ಅತ್ಯಂತ ಹಗುರವಾಗಿದ್ದು ಮನೆ, ಕಚೇರಿ ಮತ್ತು ಮಾಲ್ ಗಳಲ್ಲಿ ಬಳಕೆಗೆ ಸೂಕ್ತವಾಗಿದೆ. 280 ಎಂಎಲ್ ಬಾಟಲ್ ಅನ್ನು ಈ ಸಾಧನಕ್ಕೆ ಜೋಡಿಸಲಾಗಿದ್ದು ಪ್ರತಿ ನಿಮಿಷಕ್ಕೆ 22 ಎಂಎಲ್ ಸ್ಪ್ರೇ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಾರ್ಯನಿರ್ವಹಿಸಲು 1300 ವ್ಯಾಟ್ ವಿದ್ಯುತ್ ಇದಕ್ಕೆ ಬೇಕಾಗಿದ್ದು ಬಳಕೆ ಮಾಡುವ ಮೊದಲು 1 ನಿಮಿಷ ಕಾಲ ಹೀಟ್ ಮಾಡಬೇಕಾಗುತ್ತದೆ. ವೈದ್ಯರ ಸಲಹೆಯ ಮೇರೆಗೆ ಡಿಸ್ಇನ್ಫೆಕ್ಷನ್ ಅನ್ನು ಈ ಸಾಧನಕ್ಕೆ ಅಳವಡಿಸಿ ಸ್ಪ್ರೇ ಮಾಡಬಹುದು.
“ಭಾರತೀಯ ಮತ್ತು ಅಂತಾರಾಷ್ಟ್ರೀಯ ತಜ್ಞರು ಒಟ್ಟಾಗಿ ಮಾಡಿದ ಶ್ರಮ ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಪ್ರಸ್ತುತ ಭಾರತದಲ್ಲಿ ಮುಂದಿನ ಎರಡು ತಿಂಗಳಲ್ಲಿ 100 ಕೆ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ ಮುಂದಿನ ದಿನಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸಿದ ಇಂತಹ ಹೆಚ್ಚು ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಾವು ಪ್ರಾರಂಭಿಸುತ್ತೇವೆ” ಎಂದು ಚಿಲ್ಲಿ ಇಂಟರ್ ನ್ಯಾಷನಲ್ ಹೋಲ್ಡಿಂಗ್ (ಎಚ್ಕೆ) ಲಿವಿಟೆಡ್ ಸಂಸ್ಥೆಯ ಸಿಇಒ ಸುಫಿಯಾನ್ ಮೋತಿವಾಲಾ ತಿಳಿಸಿದ್ದಾರೆ.
ಯುಎನ್ಐ ಎಎಚ್ 1032
More News
ಸೆನ್ಸೆಕ್ಸ್ 141 51 ಅಂಕ ಏರಿಕೆ

ಸೆನ್ಸೆಕ್ಸ್ 141 51 ಅಂಕ ಏರಿಕೆ

10 Aug 2020 | 6:22 PM

ಮುಂಬೈ ಆ 10(ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 141.51 ಅಂಕ ಏರಿಕೆ ಕಂಡು 38,182.08ಕ್ಕೆ ತಲುಪಿದೆ.

 Sharesee more..
ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

09 Aug 2020 | 6:19 PM

ನವದೆಹಲಿ, ಆ 9 (ಯುಎನ್‌ಐ) ರೈಲ್ವೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ)ನೊಂದಿಗೆ ಸಂಯೋಜಿಲು ಎರಡೂ ಇಲಾಖೆಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ತಿಳಿಸಿದ್ದಾರೆ.

 Sharesee more..