Saturday, Aug 8 2020 | Time 05:44 Hrs(IST)
Sports Share

ಭಾರತದ ನಾಟ್‌ವೆಸ್ಟ್ ಸರಣಿ ಗೆಲುವಿಗೆ 18 ವರ್ಷಗಳು

ನವದೆಹಲಿ, ಜುಲೈ 13 (ಯುಎನ್ಐ)
ಇಂಗ್ಲೆಂಡ್‌ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಇದೇ ದಿನ 2002 ರಂದು ಭಾರತ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಸೌರವ್ ಗಂಗೂಲಿ ನಾಯಕತ್ವದ ಟೀಮ್‌ ಇಂಡಿಯಾ ನಾಟ್‌ವೆಸ್ಟ್‌ ಸರಣಿಯ ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಂದು ದಾದಾ ತಮ್ಮ ಶರ್ಟ್‌ ಬಿಚ್ಚಿ ಸಂಭ್ರಮಿಸಿದ್ದರು. ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ನಾಸೀರ್‌ ಹುಸೇನ್‌ ನಾಯಕತ್ವದ ಇಂಗ್ಲೆಂಡ್‌ ತಂಡ ನೀಡಿದ್ದ 326 ರನ್‌ ಗುರಿ ಹಿಂಬಾಲಿಸಿದ್ದ ಭಾರತ, ಒಂದು ಹಂತದಲ್ಲಿ 146 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿತ್ತು. ನಾಯಕ ಸೌರವ್‌ ಗಂಗೂಲಿ, ವಿರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟ್‌ ಆಗಿ ಪೆವಿಲಿಯನ್‌ ಸೇರಿದ್ದರು.
ಇನ್ನೇನು ಭಾರತಕ್ಕೆ ಸೋಲು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದಿದ್ದೆ ಬೇರೆ. ಯುವರಾಜ್‌ ಸಿಂಗ್‌ 63 ಎಸೆತಗಳಲ್ಲಿ 69 ರನ್‌ ಗಳಿಸಿ ಮೊಹಮ್ಮದ್ ಕೈಫ್‌ ಅವರೊಂದಿಗೆ ಸೇರಿಕೊಂಡು ನಿರ್ಣಾಯಕ ಜತೆಯಾಟವಾಡಿದರು. ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಯುವರಾಜ್‌ ಸಿಂಗ್‌, ಪಾಲ್‌ ಕಾಲಿಂಗ್‌ವುಡ್‌ಗೆ ವಿಕೆಟ್‌ ಒಪ್ಪಿಸಿಬಿಟ್ಟರು.
ಪಂದ್ಯದ ಜವಾಬ್ದಾರಿ ಹೊತ್ತ ಮೊಹಮ್ಮದ್‌ ಕೈಫ್‌ ನಿರೀಕ್ಷೆಯಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೈಫ್‌ 75 ಎಸೆತಗಳಲ್ಲಿ ಅಜೇಯ 87 ರನ್‌ ಗಳಿಸಿ, ಭಾರತದ ಎರಡು ವಿಕೆಟ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
ಐತಿಹಾಸಿಕ ಪಂದ್ಯದ ಗೆಲುವನ್ನು ಸ್ಮರಿಸಿದ ಕೈಫ್‌, "ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಗೆದ್ದು ತವರೂರು ಅಲಹಾಬಾದ್‌ಗೆ ಬಂದಾಗ ಸಂಭ್ರಮ ತಡೆಯಲು ಸಾಧ್ಯವಾಗಲೇ ಇಲ್ಲ. ಅಂದು ನಾಚಿಕೆ ಸ್ವಭಾವದ ವ್ಯಕ್ತಿಯಾಗಿ ಮಾರ್ಪಟ್ಟಿದ್ದೆ. ಮನೆಯ ಬಳಿ ಜನರು ಜಮಾಯಿಸಿ ಬಂದು ಶುಭ ಹಾರೈಸಿದ್ದರು. ಬಂದವರಿಗೆ ತಮ್ಮ ತಾಯಿ ಟೀ ಹಾಗೂ ತಿಂಡಿಯನ್ನು ನೀಡಿ ಉಪಚರಿಸಿದ್ದರು. ಮಾಧ್ಯಮಗಳು ಕೂಡ ಜಯದ ಬಗ್ಗೆ ವಿಶಿಷ್ಠ ರೀತಿಯಲ್ಲಿ ಪ್ರಸಾರ ಮಾಡಿದ್ದವು," ಎಂದರು.
ಯುಎನ್ಐಆರ್ ಕೆ 1633
More News
ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

07 Aug 2020 | 9:55 PM

ಮ್ಯಾಂಚೆಸ್ಟರ್, ಆ.7 (ಯುಎನ್ಐ)- ಪಾಕ್ ಸ್ಪಿನ್ ಬೌಲರ್ ಯಾಸೀರ್ ಶಾ ಅವರ ಬಿಗುವಿನ ದಾಳಿಗೆ ನಲುಗಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 219 ರನ್ ಗಳಿಗೆ ಆಲೌಟ್ ಆಯಿತು.

 Sharesee more..

ಯಾಸೀರ್ ಮಾರಕ ದಾಳಿ, ಪಾಕ್ ಗೆ ಇನಿಂಗ್ಸ್ ಮುನ್ನಡೆ

07 Aug 2020 | 9:06 PM

 Sharesee more..