Wednesday, Feb 26 2020 | Time 10:29 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಭಾರತದ ಯುವಜನತೆ ಅರಾಜಕತೆ, ಅಸ್ಥಿರತೆಯನ್ನು ದ್ವೇಷಿಸುತ್ತದೆ; ಮೋದಿ

ನವದೆಹಲಿ, ಡಿ 29 (ಯುಎನ್ಐ) ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿರುವ ಬೆನ್ನಲ್ಲೇ ಪ್ರಧಾನಿನರೇಂದ್ರ ಮೋದಿ, ‘ಭಾರತದ ಯುವಜನತೆ ಅರಾಜಕತೆ ಮತ್ತು ಅಸ್ಥಿರತೆಯನ್ನು ದ್ವೇಷಿಸುತ್ತದೆ’ ಎಂಬ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ಆಲ್ ಇಂಡಿಯ ರೇಡಿಯೋದಲ್ಲಿ ಭಾನುವಾರ ಪ್ರಸಾರವಾದ 2019ನೇ ಸಾಲಿನ ಕೊನೆಯ ಮಾಸಿಕ ‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇವಲ ಅದು ಮಾತ್ರ ಅಲ್ಲ, ಯುವಜನತೆ ವ್ಯವಸ್ಥೆಯನ್ನು ಪಾಲಿಸಲು ಆದ್ಯತೆ ನೀಡುತ್ತದೆ. ಮತ್ತು ವ್ಯವಸ್ಥೆ ಅವರಿಗೆ ಸರಿಯಾಗಿ ಸ್ಪಂದಿಸದಿದ್ದಲ್ಲಿ, ಅವರು ಅಸಹನೆಗೊಳಗಾಗುತ್ತಾರೆ ಮತ್ತು ಧೈರ್ಯದಿಂದ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಾರೆ. ನಾನು ಇದನ್ನು ಒಂದು ಸದ್ಗುಣ ಗುಣಲಕ್ಷಣ ಎಂದು ಪರಿಗಣಿಸುತ್ತೇನೆ. ಜೊತೆಗೆ, ದೇಶದ ಯುವಜನರು ಅರಾಜಕತೆಯನ್ನು ದ್ವೇಷಿಸುತ್ತಾರೆ ಎಂದು ಧೈರ್ಯದಿಂದ ಹೇಳಬಹುದು’ ಎಂದಿದ್ದಾರೆ.


ಆಡಳಿತದ ಕೊರತೆ ಮತ್ತು ಅಸ್ಥಿರತೆಯ ಜೊತೆಗೆ, ಯುವ ಜನತೆ ಸ್ವಜನ ಪಕ್ಷಪಾತ, ಜಾತೀಯತೆ, ಪಕ್ಷಪಾತ ಅಥವಾ ಲಿಂಗ ತಾರತಮ್ಯದ ಕುರಿತು ಅಸಹ್ಯದ ಭಾವನೆ ಹೊಂದಿದ್ದಾರೆ ಎಂದರು.

ವಿಮಾನ ನಿಲ್ದಾಣ ಅಥವಾ ಸಿನಿಮಾ ಮಂದಿರಗಳಲ್ಲಿ ಯಾರಾದರೂ ಸರತಿಯನ್ನು ಮುರಿಯಲು ಯತ್ನಿಸಿದರೆ ಮೊದಲು ಆಕ್ರೋಶಗೊಳ್ಳುವುದು ಈ ಯುವಜನತೆ. ನಾವು ಗಮನಿಸಿದಂತೆ, ಅಂಥಹ ಘಟನೆಗಳು ಸಂಭವಿಸಿದರೆ, ಯುವಕರು ಅದನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸುತ್ತಾರೆ. ಅದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಮತ್ತು ಅಪರಾಧಿಗಳಿಗೆ ಅದರ ಪರಿಣಾಮದ ಅರಿವಾಗುತ್ತದೆ ಎಂದು ಅವರು ತಮ್ಮ ಮನದ ಮಾತು ಹಂಚಿಕೊಂಡರು.

ಹೊಸ ಶತಮಾನದ ಸಾಕಷ್ಟು ಯುವಕರು ಮತ್ತು ಯುವ ಭಾರತ, ಮುಂದಿನ ಶತಮಾನದ ಭಾರತವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದ ಅವರು, ತಮ್ಮ ಖರೀದಿಯಲ್ಲಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಯುಎನ್ಐ ಎಸ್ಎಚ್ 1242