Saturday, Jul 4 2020 | Time 17:24 Hrs(IST)
  • ಕರೋನಾ ಮಾರಿಗೆ ಹೆದರಿ ಊರುಗಳಿಗೆ ಪೇರಿ ಕಿತ್ತ ಜನತೆ !!
  • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
  • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
  • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
  • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
  • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
  • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
  • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
  • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
  • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
  • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
  • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
  • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
  • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
  • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
National Share

ಭಾರತವನ್ನು ವೈದಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸಲು ರಾಷ್ಟ್ರಪತಿ ಕರೆ

ಭಾರತವನ್ನು ವೈದಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸಲು ರಾಷ್ಟ್ರಪತಿ ಕರೆ
ಭಾರತವನ್ನು ವೈದಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸಲು ರಾಷ್ಟ್ರಪತಿ ಕರೆ

ಜೋಧ್‍ಪುರ, ಡಿ 7 (ಯುಎನ್‍ಐ)- ಭಾರತವನ್ನು ವೈದ್ಯಕೀಯ ತಂತ್ರಜ್ಞಾನ ಕೇಂದ್ರವನ್ನಾಗಿಸುವುದನ್ನು ಮತ್ತು ಕಡಿಮೆ ವೆಚ್ಚದ ರೋಗ ಪತ್ತೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.

ಇಲ್ಲಿನ ಏಮ್ಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಎರಡನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,

‘ಭಾರತ, ಸ್ವಂತವಾಗಿ ಉಪಕರಣಗಳನ್ನು ತಯಾರಿಸುವುದು ತುಂಬಾ ಮುಖ್ಯವಾಗಿದೆ. ಇದರಿಂದ ಕಡಿಮೆ ದರದಲ್ಲಿ ಆರೋಗ್ಯ ರಕ್ಷಣೆ ಸೇವೆಗಳು ಒದಗುವುದಲ್ಲದೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ವೈದ್ಯಕೀಯ ತಂತ್ರಜ್ಞಾನ ಕೇಂದ್ರವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ವೈದ್ಯಕೀಯ ವಿದ್ಯಾರ್ಥಿಗಳು ಕನಿಕರ ಮನಸ್ಸು ಬೆಳೆಸಿಕೊಳ್ಳಬೇಕು. ಜನರ ಜೀವ ಉಳಿಸಲು ಮತ್ತು ಜನರ ಆರೋಗ್ಯ ಸುಧಾರಿಸಲು ತಮ್ಮ ಕೌಶಲ ಮತ್ತು ಜ್ಞಾನವನ್ನು ಬಳಸಿಕೊಳ್ಳಬೇಕು. ಇಡೀ ವೈದ್ಯ ವೃತ್ತಿ ಜೀವನದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು. ತಮ್ಮ ಸುತ್ತಲಿನ ಸಮಾಜ ಎಂದಿಗೂ ಮರೆಯಲಾಗದಂತೆ ಎಲ್ಲ ವೈದ್ಯರು ಮತ್ತು ನರ್ಸಿಂಗ್ ಪದವೀಧರರು ಸೇವೆಯನ್ನು ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಕಳೆದ ವರ್ಷ ಜೋಧ್‍ಪುರ್‍ನಲ್ಲಿ ಆರಂಭವಾಗಿತ್ತು.

ಯುಎನ್‍ಐ ಎಸ್‍ಎಲ್‍ಎಸ್ 1708