Wednesday, Aug 21 2019 | Time 23:53 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
business economy Share

ಭಾರತ-ಅಮೆರಿಕ ವ್ಯಾಪಾರವು 2025ರ ವೇಳೆಗೆ 238 ಶತಕೋಟಿ ಡಾಲರ್‌ ತಲುಪಬಹುದು

ನವದೆಹಲಿ, ಜುಲೈ 12 (ಯುಎನ್‌ಐ) ಭಾರತ ಮತ್ತು ಅಮೆರಿಕ ನಡುವಿನ ದ್ವಿಮುಖ ವ್ಯಾಪಾರವು ಪ್ರಸ್ತುತ 143 ಶತಕೋಟಿ ಡಾಲರ್‌ಗಳಿಂದ 2025 ರ ವೇಳೆಗೆ 238 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉಭಯ ದೇಶಗಳ ಅಧಿಕಾರಿಗಳು ಶುಕ್ರವಾರದ ಸಭೆಯಲ್ಲಿ ಅಂದಾಜಿಸಿದ್ದಾರೆ.
ಅಮೆರಿಕ-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ(ಯುಎಸ್‌ಐಎಸ್‌ಪಿಎಫ್) ವರದಿಯಂತೆ ಕಳೆದ ಏಳು ವರ್ಷಗಳಿಂದ ಪ್ರತಿವರ್ಷ ವ್ಯಾಪಾರವು ಶೇ.7.5 ರಷ್ಟು ಏರಿಕೆ ಕಂಡಿದೆ.
ಈ ವರದಿಯಂತೆ ದ್ವಿಪಕ್ಷೀಯ ವ್ಯಾಪಾರ 2025ರ ವೇಳೆಗೆ 283-327 ಶತಕೋಟಿ ಡಾಲರ್‌ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ವಾರ್ಷಿಕ ಸರಾಸರಿ ಶೇ.10 ರಿಂದ 12.5 ರಷ್ಟು ಬೆಳವಣಿಗೆ ನಿರೀಕ್ಷಿತ ಎನ್ನಲಾಗಿದೆ.ರಕ್ಷಣಾ ವ್ಯಾಪಾರ, ವಾಣಿಜ್ಯ ವಿಮಾನ, ತೈಲ ಮತ್ತು ಎಲ್‌ಎನ್‌ಜಿ, ಕಲ್ಲಿದ್ದಲು, ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್‌ನಂತಹ ಕ್ಷೇತ್ರಗಳು ಭಾರತದಲ್ಲಿ ಅಮೆರಿಕ ಹೂಡಿಕೆಗೆ ಮತ್ತು ವಾಣಿಜ್ಯದಲ್ಲಿ ಸಂಭಾವ್ಯ ಬೆಳವಣಿಗೆಯ ಕ್ಷೇತ್ರಗಳಾಗಿವೆ.ಜೊತೆಗೆ, ಅಮೆರಿಕದಲ್ಲಿ ಉದ್ಯಮಕ್ಕೆ ವಾಹನ, ಔಷಧಗಳು, ಸಮುದ್ರಾಹಾರ, ಐಟಿ ಮತ್ತು ಪ್ರಯಾಣ ಸೇವೆಗಳನ್ನು ಉತ್ತೇಜಿಸಲು ಭಾರತೀಯ ಉದ್ಯಮಕ್ಕೆ ಅವಕಾಶವಿದೆ ಎಂದು ವರದಿ ಹೇಳಿದೆ.
ಯುಎಸ್‌ಐಎಸ್‌ಪಿಎಫ್ ಎರಡನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧಗಳಿಗೆ ಬಲವರ್ಧನೆ ಕುರಿತು ಚರ್ಚಿಸಲಾಯಿತು. ಶೃಂಗಸಭೆಯಲ್ಲಿ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ದ್ವಿಪಕ್ಷೀಯ ಸಹಕಾರದ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲಾಯಿತು.ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1824