Monday, Aug 3 2020 | Time 23:58 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Special Share

ಭಾರತ ಔಷಧಿ ತಯಾರಿಕ ವಲಯದ ಬಗ್ಗೆ ಬಿಲ್ ಗೇಟ್ಸ್ ಪ್ರಶಂಸೆ

ಭಾರತ ಔಷಧಿ ತಯಾರಿಕ ವಲಯದ ಬಗ್ಗೆ ಬಿಲ್ ಗೇಟ್ಸ್ ಪ್ರಶಂಸೆ
ಭಾರತ ಔಷಧಿ ತಯಾರಿಕ ವಲಯದ ಬಗ್ಗೆ ಬಿಲ್ ಗೇಟ್ಸ್ ಪ್ರಶಂಸೆ

ವಾಷಿಂಗ್ಟನ್, ಜುಲೈ ೧೬(ಯುಎನ್‌ಐ) ಕೊರೊನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದ ಹಲವು ದೇಶಗಳು ಪ್ರಸ್ತುತ ಕಾರ್ಯೋನ್ಮುಖವಾಗಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಲಸಿಕೆ ಮಾನವರ ಮೇಲೆ ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಆಸಕ್ತಿ ದಾಯಕ ಹೇಳಿಕೆ ನೀಡಿದ್ದಾರೆ.

ಭಾರತ ದೇಶದ ಔಷಧಿ ವಲಯ ಗಗನದೆತ್ತರದಲ್ಲಿದೆ. ತಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸಾಕಾಗುವಷ್ಟು ಪ್ರಮಾಣದ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಈಗಾಗಲೇ ಪ್ರಮುಖ ಸಂಶೋಧನೆಗಳು ನಡೆದಿವೆ. ಇತರ ರೋಗಗಳಿಗೆ ಉಪಯೋಗಿಸುವ ಹಲವು ಸಮ್ಮಿಶ್ರಣದೊಂದಿಗೆ ಕೊರೊನಾಗೆ ಲಸಿಕೆ ರೂಪಿಸಲು ಭಾರತೀಯ ಔಷಧಿ ತಯಾರಿಕಾ ಕಂಪನಿಗಳು ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ. ’ ಇಂಡಿಯಾಸ್ ವಾರ್ ಎಗೆನೆಸ್ಟ್ ದಿ ವೈರಸ್’ ಎಂಬ ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಬಿಲ್ ಗೇಟ್ಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಾಕ್ಷ್ಯಚಿತ್ರ ಇಂದು ಸಂಜೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಬಿಲ್ ಗೇಟ್ಸ್ ಮಾತನಾಡಿ, ‘ ಕೊರೊನಾ ಪರಿಣಾಮ ಭಾರತದ ಮೇಲೂ ದೊಡ್ಡದಾಗಿದೆ. ಏಕೆಂದರೆ ಇಲ್ಲಿ ಜನಸಂಖ್ಯೆ ಹೆಚ್ಚು. ನಗರ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚು. ಭಾರತದಲ್ಲಿ ಔಷಧಿ ಹಾಗೂ ಲಸಿಕೆ ತಯಾರಿಕಾ ಕಂಪನಿಗಳು ಹೆಚ್ಚುಇವೆ. ಭಾರತದಲ್ಲಿನ ಫಾರ್ಮಾ ಕಂಪನಿಗಳು ಜಗತ್ತಿಗೆ ಅಗತ್ಯವಿರುವಷ್ಟು ಪ್ರಮಾಣದ ಲಸಿಕೆಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿವೆ. ಸೀರಮ್ ಇನ್ಸ್ಟಿಟ್ಯೂಟ್ ಪ್ರಾರಂಭವಾದಾಗಿನಿಂದ ಭಾರತದಲ್ಲಿ ಉತ್ಪಾದಿಸಲ್ಪಟ್ಟಷ್ಟು ಲಸಿಕೆಗಳನ್ನು ವಿಶ್ವದ ಬೇರೆ ಯಾವುದೇ ಪ್ರದೇಶದಲ್ಲೂ ತಯಾರಿಸಲಾಗಿಲ್ಲ. ಇದಲ್ಲದೆ, ಭಾರತದಲ್ಲಿ ಬಯೋ ಇ, ಭಾರತ್ (ಬಯೋಟೆಕ್) ನಂತಹ ಅನೇಕ ಪ್ರಸಿದ್ಧ ಫಾರ್ಮಾ ಕಂಪನಿಗಳಿವೆ.

ಒಂದು ವಿಷಯವನ್ನು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಭಾರತ ಕೇವಲ ತನ್ನ ಜನರಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಸಾಕಾಗುವಷ್ಟು ಕೊರೊನಾ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ’ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಭಾರತ ‘ ಕೊಯಲೇಷನ್ ಫಾರ್ ಎಪಿಡೆಮಿಕ್ ಪ್ರಿಪರೇಷನ್ ಇನ್ನೋವೇಷನ್ಸ್ ( ಸಿಈಪಿಐ) ಸೇರ್ಪಡೆಗೊಂಡಿರುವುದನ್ನು ಗೇಟ್ಸ್ ಸ್ವಾಗತಿಸಿದರು. ಇದು ವಿಶ್ವದಾದ್ಯಂತ ಲಸಿಕೆಗಳನ್ನು ತಯಾರಿಸುವ ಕಂಪನಿಗಳ ಒಕ್ಕೂಟವಾಗಿದೆ.

ಯುಎನ್‌ಐ ಕೆವಿಆರ್ ೧೬೧೯