Friday, Dec 6 2019 | Time 21:43 Hrs(IST)
 • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
Sports Share

ಭಾರತ ಕಿರಿಯರ ಫುಟ್ಬಾಲ್‌ ತಂಡ ಟರ್ಕಿ ಪ್ರವಾಸ

ನವದೆಹಲಿ, ಜು 4 (ಯುಎನ್‌ಐ) ಎಎಫ್‌ಸಿ19 ವಯೋಮಿತಿ ಚಾಂಪಿಯನ್‌ಶಿಪ್‌ ಅರ್ಹತಾ ಸುತ್ತಿನ ಪಂದ್ಯಗಳಿಗೆ ಪೂರ್ವ ತಯಾರಿಗಾಗಿ ಭಾರತ(19) ಕಿರಿಯರ ಫುಟ್ಬಾಲ್‌ ತಂಡ ಜುಲೈ 19 ರಂದು ಟರ್ಕಿ ಪ್ರವಾಸ ಕೈಗೊಳ್ಳಲಿದ್ದು, ಜೋರ್ಡನ್‌ ಹಾಗೂ ಓಮನ್ ವಿರುದ್ಧ ಕಾದಾಟ ನಡೆಸಲಿದೆ.
ಭಾರತ 19 ವಯೋಮಿತಿ ತಂಡದ ಕೆಲ ಆಟಗಾರರು ರಾಷ್ಟ್ರೀಯ ಹಿರಿಯರ ತಂಡದೊಂದಿಗೆ ಅಭ್ಯಾಸ ನಡೆಸಿದ ಅನುಭವ ಹೊಂದಿದ್ದಾರೆ. ಅಮರಜೀತ್‌ ಸಿಂಗ್‌, ಸುರೇಶ್‌ ಸಿಂಗ್‌, ಬೊರಿಸ್‌ ಸಿಂಗ್‌ ಹಾಗೂ ನರೇಂದ್ರ ಅವರು ರಾಷ್ಟ್ರೀಯ ಶಿಬಿರದಲ್ಲಿ ನಿರಂತರವಾಗಿ ಭಾಗವಹಿಸಿದ್ದರು. 17 ವಯೋಮಿತಿ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಿದ್ದ ಅಮರ್‌ಜೀತ್‌ ಸಿಂಗ್‌ ಕೂಡ ತಂಡದಲ್ಲಿದ್ದಾರೆ.
"ಸಾಧ್ಯವಾದಷ್ಟು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಾಡುವ ಮೂಲಕ ತಂಡವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಕಡೆ ಗಮನ ಹರಿಸಲಾಗುವುದು. ಟರ್ಕಿ ಪ್ರವಾಸ ನಮ್ಮ ತಂಡದ ಸಾಮಾರ್ಥ್ಯ ಪರೀಕ್ಷೆ ಮಾಡಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ತಂಡದ ಕೋಚ್‌ ಫ್ಲೋಯ್ಡ್‌ ಪಿಂಟೋ ತಿಳಿಸಿದ್ದಾರೆ.
ಭಾರತ ತಂಡ ಜುಲೈ 19 ಹಾಗೂ 22 ರಂದು ಓಮನ್‌ ವಿರುದ್ಧ ಹಾಗೂ 24 ರಂದು ಜೋರ್ಡನ್‌ ವಿರುದ್ಧ ಆಡಲಿದೆ. ಜತೆಗೆ, ಸ್ಥಳೀಯ ಕ್ಲಬ್‌ವೊಂದರ ವಿರುದ್ಧ ಒಂದು ಪಂದ್ಯವಾಡಲಿದೆ.
ಆಯ್ಕೆಯಾದ 23 ಆಟಗಾರರು:
ಗೋಲ್ ಕೀಪರ್‌ಗಳು: ಪ್ರಭಾಸುಖನ್‌ ಸಿಂಗ್‌ ಗಿಲ್‌, ನೀರಜ್‌ ಕುಮಾರ್‌, ಲಾಲ್ಬಿಯಾಂಕುಲ್‌ ಜೊಂಗ್ಟೆ
ಡಿಫೆಂಡರ್‌ಗಳು: ಜಿತೇಂದ್ರ ಸಿಂಗ್‌, ನರೇಂದರ್‌,ಗುರುಕೀರತ್‌ ಸಿಂಗ್‌, ಸುಮಿತ್‌ ರತಿ, ಮುಹಮ್ಮದ್‌ ರಫಿ, ಆಕಾಶ್‌ ಮಿಶ್ರಾ, ಬಿಕಾಶ್‌ ಯುಮ್ನಾಮ್‌, ಮನೀಶ್‌ ಚೌಧರಿ, ತೋಯ್ಬಾ ಸಿಂಗ್‌
ಮಿಡ್‌ಫೀಲ್ಡರ್‌ಗಳು: ಅಮರ್‌ಜೀತ್‌ ಸಿಂಗ್‌, ಜೀಕ್ಸನ್‌ ಸಿಂಗ್‌, ನಿಂಥೊಯ್‌ಗಂಬ ಮಿತೀಯ್‌, ಗಿವ್ಸನ್‌ ಸಿಂಗ್‌, ರಿಕ್ಕಿ ಶಬಾಂಗ್‌, ಸೈಲೊ ಲಾಲ್ಚನ್ಹಿಮಿಯಾ, ರಾಬಿನ್‌ ಯಾದವ್‌
ಮುಂಚೂಣಿ ಆಟಗಾರರು: ಹರ್ಮನ್‌ಪ್ರೀತ್‌ ಸಿಂಗ್‌, ವಿಕ್ರಮ್‌ ಪ್ರತಾಪ್‌ ಸಿಂಗ್‌, ರೋಹಿತ್‌ ಧನು, ರಿಡ್ಜೆ ದೆಮೆಲ್ಲೊ
ಯುಎನ್‌ಐ ಆರ್‌ಕೆ ಎಎಚ್‌ 1423