Wednesday, Sep 23 2020 | Time 21:34 Hrs(IST)
 • ಡಿಜೆ ಹಳ್ಳಿ ಗಲಭೆ; ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ
 • ಆಯುಷ್ಮಾನ್ ಭಾರತ್ ಯೋಜನೆಯಡಿ 1 26 ಕೋಟಿ ರೋಗಿಗಳಿಗೆ ಚಿಕಿತ್ಸೆ, 12 5 ಕೋಟಿಗೂ ಹೆಚ್ಚು ಜನರಿಗೆ ಇ-ಕಾರ್ಡ್‌ ಉಚಿತ ವಿತರಣೆ
 • ಗಂಗಾ ಕಲ್ಯಾಣ ಯೋಜನೆ ಅಕ್ರಮ ತನಿಖೆಗೆ ಸದನ ಸಮಿತಿ ರಚನೆ; ಶ್ರೀನಿವಾಸ ಪೂಜಾರಿ
 • ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವೀಡಿಯೋ ಸಂವಾದ: ಮರಣ ದರ ತಗ್ಗಿಸುವಂತೆ ಸೂಚನೆ
 • ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಗುಲಾಂ ನಬೀ ಆಜಾದ್ ಜ್ಞಾಪಕ ಪತ್ರ ಸಲ್ಲಿಕೆ
 • ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್
 • ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ 15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ
 • ಐಪಿಎಲ್ 2020: ಸೈಡ್‌ ಸ್ಟ್ರೈನ್‌ನಿಂದ ಚೇತರಿಸಿಕೊಂಡ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌
 • ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಸಚಿವ ಮಾಧುಸ್ವಾಮಿ v/s ಎಚ್‌ ಕೆ ಪಾಟೀಲ್ ಜಟಾಪಟಿ
 • ವಿಧಾನ ಸಭೆಯಲ್ಲಿ ಆರ್ಥಿಕ ಹೊಣೆಗಾರಿಕೆ ಸೇರಿ 12 ವಿಧೇಯಕಗಳು,3 ವರದಿಗಳ ಮಂಡನೆ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್‌ ಮುಖಾಮುಖಿ ನಾಳೆ
 • ಕೊನೆಗೂ ಭೌತಿಕ ವಿಚಾರಣೆಗೆ ತೆರೆದುಕೊಂಡ ಹೈಕೋರ್ಟ್‌; ಭಾಗಶಃ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ
 • ಸೆನ್ಸೆಕ್ಸ್ 65 66 ಅಂಕ ಕುಸಿತ
 • ರಾಯಚೂರು ಐಐಐಟಿಗೆ ಕೇಂದ್ರದ ಅಸ್ತು: ಡಿಸಿಎಂ ಸವದಿ ಅಭಿನಂದನೆ
 • ಕೊರೋನಾ ಸೋಂಕು ಎಷ್ಟೇ ಹೆಚ್ಚಾದರೂ ನಿಯಂತ್ರಣಕ್ಕೆ ಸರ್ಕಾರ ಸಿದ್ಧ: ಜಾವೆದ್ ಅಖ್ತರ್
Special Share

ಭಾರತ, ಚೀನಾ, ಇರಾನ್ ಹಾಗೂ ಇಥಿಯೋಪಿಯಾ ದೇಶಗಳಲ್ಲಿ ಅಂತರ್ಜಾಲ ಸ್ಥಗಿತ ಪ್ರವೃತ್ತಿ ಹೆಚ್ಚು; ಸಮೀಕ್ಷೆ

ವಾಷಿಂಗ್ಟನ್, ಡಿ ೧೩( ಯುಎನ್‌ಐ) ಪೌರತ್ವ ತಿದ್ದುಪಡಿ ವಿಧೇಯಕ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ದೇಶದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆ ಸಿಗುವುದಿಲ್ಲ ಎಂಬ ಕಳವಳ ವ್ಯಕ್ತಪಡಿಸಿ ಜನರು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ತ್ರಿಪುರದಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅಸ್ಸಾಂನಲ್ಲಿ ವಿಧೇಯಕದ ವಿರುದ್ದ ದಿನ ದಿನಕ್ಕೂ ಜನರ ವಿರೋಧ ತೀವ್ರಗೊಳ್ಳುತ್ತಿದ್ದು ೧೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ೨೪ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೨೦೧೮ರಲ್ಲೂ ದೇಶದಲ್ಲಿ ಹಲವು ಸಂದರ್ಭಗಳಲ್ಲಿ ೧೦೦ ಕ್ಕೂ ಹೆಚ್ಚು ಬಾರಿ ಇಂಟರ್ ನೆಟ್ ಸೇವೆ ಬಂದ್ ಮಾಡಲಾಗಿತ್ತು.
ಭದ್ರತಾ ಕಾರಣಗಳಿಗಾಗಿ ಇಂಟರ್ ನೆಟ್ ಸ್ಥಗಿತಗೊಳಿಸುವುದು ಇಂದು ಹಲವು ದೇಶಗಳು ಅನುಸರಿಸುತ್ತಿರುವ ಪ್ರವೃತ್ತಿಯಾಗಿದ್ದು, ಪ್ರತಿಭಟನೆಯ ವೇಳೆ ಶಾಂತಿ ಮೂಡಿಸಲು, ಸಾರ್ವಜನಿಕರ ಆತಂಕಗಳ ನಿವಾರಿಸಲು, ಇನ್ನಿತರ ಪ್ರದೇಶಗಳ ಜತೆ ಸಂಪರ್ಕ ಸಾಧಿಸಿವುದನ್ನು ತಡೆಯುವ ಉದ್ದೇಶದಿಂದ ಸರ್ಕಾರಗಳು ಇಂಟರ್ ನೆಟ್ ಸ್ಥಗಿತ ಆಸ್ತ್ರ ಬಳಸುತ್ತಿವೆ. ಭಾರತ ಸೇರಿ ಚೀನಾ, ಇರಾನ್ ಮತ್ತು ಇಥಿಯೋಪಿಯ ದೇಶಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ.
ಅಮೆರಿಕ ಮೂಲದ ಸ್ವಯಂ ಸೇವಾ ಸಂಸ್ಥೆ ಫ್ರೀಡಂ ಹೌಸ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಹೊರಹಾಕಿದೆ. ಸಂಸ್ಥೆ ಜಗತ್ತಿನ ೬೫ ಕ್ಕೂ ಹೆಚ್ಚು ದೇಶಗಳಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಮಾಧ್ಯಮದ ಸ್ವಾತಂತ್ರ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿದೆ.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ, ೨೦೧೦ರಲ್ಲಿ ಗಣರಾಜ್ಯೋತ್ಸಕ್ಕೆ ಮುನ್ನ ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಮತ್ತು ದೂರವಾಣಿ ಸೇವೆಗಳನ್ನು ನಿಲ್ಲಿಸಲಾಗಿತ್ತು.
೨೦೧೬ ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬರ್ಹಾನ್ ವಾನಿಯನ್ನು ಹತ್ಯೆ ನಂತರ ಕಾಶ್ಮೀರದೊಂದಿಗಿನ ಅಂತರ್ಜಾಲದ ಮೂಲಕ ಬಾಹ್ಯ ಸಂಪರ್ಕವನ್ನು ೧೩೩ ದಿನಗಳ ಕಾಲ ಕಡಿತಗೊಳಿಸಲಾಗಿತ್ತು.
ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುತ್ತಿದ್ದ ಸಂವಿಧಾನ ವಿಧಿ ೩೭೦ ರದ್ದು ಗೊಳಿಸಿದ ಹಿಂದಿನ ದಿನ ಆಗಸ್ಟ್ ೪ ರಿಂದ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ದೂರವಾಣಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ದೂರವಾಣಿ ಸೇವೆಗಳನ್ನು ಮತ್ತೆ ಆರಂಭಿಸಲಾಗಿದ್ದರೂ, ಸೇವೆ ೧೩೦ ದಿನಗಳು ಕಳೆದಿದ್ದರೂ ಇನ್ನೂ ಸಂಪರ್ಕ ಕಲ್ಪಿಸಿಲ್ಲ.
೨೦೧೬ ರಲ್ಲಿ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ಪ್ರತ್ಯೇಕ ಗೂರ್ಖಾಲ್ಯಾಂಡ್ ಚಳುವಳಿಯ ಸಂದರ್ಭದಲ್ಲಿ ೧೦೦ ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು.
೨೦೧೫ ರಲ್ಲಿ, ಗುಜರಾತ್ ನಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ಪಾಟೀದಾರ್ ಸಮುದಾಯ ನಡೆಸಿದ ಹೋರಾಟದ ಸಂದರ್ಭದಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು
ಕಳೆದ ತಿಂಗಳು ಸುಪ್ರೀಂ ಕೋರ್ಟ್ ರಾಮಜನ್ಮ ಭೂಮಿ ಬಾಬ್ರಿ ಮಸೀದಿ ವಿವಾದಿತ ನಿವೇಶನ ಕುರಿತ ಐತಿಹಾಸಿಕ ತೀರ್ಪು ನೀಡುವ ಒಂದು ದಿನದ ಮುಂಚೆ ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಅಂತರ್ಜಾಲ ಬಂದ್ ಮಾಡಲಾಗಿತ್ತು.
ದೇಶದಲ್ಲಿ ಎದುರಾಗುವ ಅನಿಶ್ಚಿತ ಪರಿಸ್ಥಿತಿಗಳಲ್ಲೂ ಸರ್ಕಾರ ತನ್ನ ಅಧಿಕಾರ ಬಳಸಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುತ್ತದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇರಳ ಹೈಕೋರ್ಟ್, ಅಂತರ್ಜಾಲ ಸೌಲಭ್ಯ ಹೊಂದುವುದು ಮೂಲಭೂತ ಹಕ್ಕು ಎಂದು ತೀರ್ಪು ನೀಡಿತ್ತು.
ಯುಎನ್‌ಐ ಕೆವಿಆರ್
More News
ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

23 Sep 2020 | 5:12 PM

ಲಖನೌ, ಸೆ 23 (ಯುಎನ್‍ಐ) ಸಂಸತ್ತಿನ ಮಿತಿಗಳನ್ನು ಮೀರಿ ಪ್ರಸ್ತುತ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

 Sharesee more..
ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

23 Sep 2020 | 5:07 PM

ನವದೆಹಲಿ, ಸೆ 23(ಯುಎನ್ಐ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ( ಎನ್ ಸಿ ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ತಾನು ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿರಲಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

 Sharesee more..
ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

23 Sep 2020 | 4:51 PM

ಬೀಜಿಂಗ್, ಸೆ 23(ಯುಎನ್ಐ) ಚೀನಾ ಎಂದಿಗೂ ಆಧಿಪತ್ಯ ಸಾಧಿಸಲು ಬಯಸುವುದಿಲ್ಲ... ಶೀತಲ ಸಮರ ಇಲ್ಲವೇ ಉಷ್ಣ ಸಮರಗಳ ಅಗತ್ಯ ತಮಗಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

 Sharesee more..