Friday, Oct 30 2020 | Time 06:31 Hrs(IST)
Special Share

ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ

ನವದೆಹಲಿ, ಸೆ 21(ಯುಎನ್ಐ) ಭಾರತ-ಚೀನಾ ಗಡಿಯಲ್ಲಿ ತೀವ್ರ ಉದ್ವಿಗ್ನತೆ ನೆಲೆಗೊಂಡಿರುವ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವಣ ಸೇನಾ ಮಟ್ಟದ ಮಾತುಕತೆ ಇಂದು ಪುನರಾಂಭಗೊಳ್ಳಲಿದೆ.
ಗಡಿಯಲ್ಲಿನ ಸಂಘರ್ಷಮಯ ಪರಿಸ್ಥಿತಿಯನ್ನು ಶಮನಗೊಳಿಸುವ ಭಾಗವಾಗಿ, ಸೋಮವಾರ ಬೆಳಗ್ಗೆ 9 ಗಂಟೆಗೆ ಸೇನಾ ಕಮಾಂಡರ್ ಮಟ್ಟದ ಅಧಿಕಾರಿಗಳು ಸಭೆ ಸೇರಲಿದ್ದಾರೆ.
ಪೂರ್ವ ಲಡಾಖ್ ಬಳಿಯ ಚೀನಾ ಭೂ ಭಾಗದಲ್ಲಿರುವ ಮಾಲ್ಡೋದಲ್ಲಿ ಈ ಸಭೆ ನಡೆಯಲಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಂತ್ರಣ ರೇಖೆಯ ಬಳಿಯ ಪ್ರವಾಸಿ ತಾಣ ಪಾಂಗೊಂಗ್ ಸರೋವರ ಸೇರಿ ಪರ್ವತ ಶ್ರೇಣಿಗಳಲ್ಲಿ ಪ್ರಸ್ತುತ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದೆ.
ಸಂಘರ್ಷಗಳನ್ನು ತಡೆಯುವ ಭಾಗವಾಗಿ ಈ ಹಿಂದೆ ಮಾಡಿಕೊಂಡ ಹಲವು ಒಪ್ಪಂದಗಳು, ಅವುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇಂದಿನ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿಯಾಗಿವೆ.
ಕಳೆದ ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಸೇನೆಗಳು ಮುಖಾಮುಖಿಗೊಂಡು ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದಿನಿಂದ ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಕ್ರಮವಾಗಿ ಪೂರ್ವ ಲಡಾಕ್‌ನ ಗಡಿಯಲ್ಲಿ ಭಾರತೀಯ ಸೇನೆ ಚೀನಾದ ಪಿಎಲ್‌ಎ ಮೇಲೆ ಮೇಲುಗೈ ಸಾಧಿಸಿದೆ.
ಯುಎನ್ಐ ಕೆವಿಆರ್ 08.37
.