Friday, Dec 13 2019 | Time 10:48 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Sports Share

ಭಾರತ ಮಹಿಳಾ ಹಾಕಿ ತಂಡಕ್ಕೆ ನಾಲ್ಕು ವಾರಗಳ ರಾಷ್ಟ್ರೀಯ ಶಿಬಿರ

ನವದೆಹಲಿ, ಜು 14 (ಯುಎನ್‌ಐ) ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್‌ ಚಾಂಪಿಯನ್‌ ಆದ ಖುಷಿಯಲ್ಲಿರುವ ಭಾರತ ಮಹಿಳಾ ತಂಡಕ್ಕೆ ನಾಳೆಯಿಂದ ನಾಲ್ಕು ವಾರಗಳ ರಾಷ್ಟ್ರೀಯ ಶಿಬಿರ ಶುರುವಾಗಲಿದೆ.
ಹಿರೋಶಿಮಾದಲ್ಲಿ ನಡೆದಿದ್ದ ಮಹಿಳಾ ಹಾಕಿ ಸೀರೀಸ್‌ ಫೈನಲ್‌ನಲ್ಲಿ ಭಾರತ ತಂಡ 3-1 ಅಂತರದಲ್ಲಿ ಜಪಾನ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿತ್ತು. ರಾಷ್ಟ್ರೀಯ ಶಿಬಿರ ನಾಳೆಯಿಂದ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗಲಿದೆ.
ಶನಿವಾರ ಹಾಕಿ ಇಂಡಿಯಾ ಶಿಬಿರಕ್ಕೆ 33 ಪ್ರಮುಖ ಸಂಭಾವ್ಯ ಆಟಗಾರ್ತಿಯರನ್ನು ಪ್ರಕಟಿಸಿದೆ. ಭಾರತ ತಂಡದ ಕೋಚ್‌ ಸ್ಜೊರ್ಡ್ ಮಾರಿಜ್ನೆ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಆಗಸ್ಟ್‌ 11 ಕ್ಕೆ ಶಿಬಿರ ಮುಕ್ತಾಯವಾಗಲಿದೆ. ಮುಂಬರುವ 2020ರ ಟೋಕಿಯೊ ಒಲಿಂಪಿಕ್ಸ್‌ ಪೂರ್ವ ನಿಯೋಜಿತ ಪರೀಕ್ಷೆ ಸರಣಿಯಲ್ಲಿ ಭಾರತ, ಜಪಾನ್‌, ಆಸ್ಟ್ರೇಲಿಯಾ ಹಾಗೂ ಚೀನಾ ತಂಡಗಳು ಸೆಣಸಲಿವೆ.
ಸಂಭಾವ್ಯ ಆಟಗಾರರು:
ಗೋಲ್‌ಕೀಪರ್ಗಳು: ಸವಿತಾ, ರಜನಿ ಎಟಿಮರ್ಪು,ಬಿಚು ದೇವಿ ಖಾರಿಬಮ್‌
ಡಿಫೆಂಡರ್‌ಗಳು: ದೀಪ ಗ್ರೇಸ್‌ ಎಕ್ಕಾ, ರೀನಾ ಖೋಖರ್‌, ಸುಮನ್‌ ದೇವಿ ಥೌಡಮ್‌, ಸುನಿತಾ ಲಕ್ರಾ, ಸಲಿಮಾ ಟೆಟೆ, ಮನ್‌ಪ್ರೀತ್‌ ಕೌರ್‌, ಗುರುಜೀತ್‌ ಕೌರ್‌, ರಶ್ಮಿತಾ ಮಿನ್ಜ್‌, ಮಹಿಮಾ ಚರ್ಧರಿ, ನಿಶಾ.
ಮಿಡ್‌ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್‌, ಮೊನಿಕಾ, ನೇಹಾ ಗೋಯಲ್‌, ಲಲಿಮಾ ಮಿನ್ಜ್‌, ಸುಶೀಲ ಚಾನು, ಚೆತ್ನಾ, ರೀತ್‌, ಅನುಜ ಸಿಂಗ್‌, ಕರಿಷ್ಮಾ ಯಾದವ್‌, ಸೋನಿಕಾ
ಮುಂಚೂಣಿ ಆಟಗಾರ್ತಿಯರು: ರಾಣಿ ರಾಂಪಾಲ್‌, ಲಾಲ್ರೆಮ್‌ಸಿಯಾಮಿ, ವಂದನಾ ಕಟಾರಿಯಾ, ನವಜೀತ್‌ ಕೌರ್‌, ರಾಜವಿಂದರ್‌ ಕೌರ್‌, ಜ್ಯೂತಿ, ಶರ್ಮಿಲಾ ದೇವಿ, ಅಮನ್‌ದೀಪ್‌ ಕೌರ್‌, ಪ್ರಿಯಾಂಕ ವಾಂಖೆಡೆ.
ಯುಎನ್‌ಐ ಆರ್‌ಕೆ ಎಎಚ್‌ 1151