Friday, Feb 28 2020 | Time 07:54 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಭಾರತೀಯರ ರಕ್ಷಣೆಗೆ ಐಎನ್ ಎಸ್ ತ್ರಿಖಂಡ್ : ರವೀಶ್ ಕುಮಾರ್

ಭಾರತೀಯರ ರಕ್ಷಣೆಗೆ  ಐಎನ್ ಎಸ್ ತ್ರಿಖಂಡ್ : ರವೀಶ್ ಕುಮಾರ್
ಭಾರತೀಯರ ರಕ್ಷಣೆಗೆ ಐಎನ್ ಎಸ್ ತ್ರಿಖಂಡ್ : ರವೀಶ್ ಕುಮಾರ್

ನವದೆಹಲಿ, ಜನವರಿ 8 (ಯುಎನ್ಐ ) ಇರಾನ್ ನಲ್ಲಿ ಉಂಟಾಗಿರುವ ಪ್ರಕ್ಷಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಗತ್ಯವೆನಿಸಿದರೆ ಭಾರತೀಯರನ್ನು ಸ್ಥಳಾಂತರಿಸಲು ಐಎನ್ ಎಸ್ ತ್ರಿಖಂಡ್ ಅನ್ನು ಅಲ್ಲಿಗೆ ಕಳುಹಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ ವರ್ಷದ ನವೆಂಬರ್ ನಿಂದ ಭಾರತೀಯ ನೌಕಾ ಪಡೆಯ ಹಡಗು ಐಎನ್ ಎಸ್ ತ್ರಿಖಂಡ್ ಗಲ್ಫ್ ಆಫ್ ಒಮಾನ್ ನಲ್ಲಿದೆ.

ಒಂದು ವೇಳೆ ಅಗತ್ಯಬಿದ್ದರೆ ಇರಾನ್ ನಿಂದ ಭಾರತೀಯರನ್ನು ಸ್ಥಳಾಂತರಿಸಲು ತ್ರಿಖಂಡ್ ನೌಕೆಯನ್ನು ಕಳುಹಿಸಲಾಗುವುದು ಎಂದರು.

ಅಮೆರಿಕ ಇರಾನ್ ನಡುವಿನ ಭೌಗೋಳಿಕ-ರಾಜಕೀಯ ಸಂಘರ್ಷದ ಪರಿಸ್ಥಿತಿ ಬಗ್ಗೆ ಭಾರತ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಅಮೆರಿಕ ವಾಯುಪಡೆ ದಾಳಿ ನಡೆಸುವ ಮೂಲಕ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆ ಮಾಡಿದ ಕಾರಣ ಎರಡು ದೇಶಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿದೆ.

ಆದರೆ ಉಭಯ ದೇಶಗಳು ಯುದ್ಧಕ್ಕೆ ಮುಂದಾಗದೆ ಮಾತುಕತೆ ಮೂಲಕ ತಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದೂ ಕೇಂದ್ರ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ಯುಎನ್ಐ ಕೆಎಸ್ಆರ್ 2026