Sunday, Mar 29 2020 | Time 00:19 Hrs(IST)
National Share

ಭುವನೇಶ್ವರದಲ್ಲಿ ನಾಳೆ 24 ನೇ ಪೂರ್ವ ವಲಯ ಮಂಡಳಿ ಸಭೆ, ಅಮಿತ್ ಷಾ ಅದ್ಯಕ್ಷತೆ

ನವದೆಹಲಿ, ಫೆ 27(ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ , ನಾಳೆ ಭುವನೇಶ್ವರದಲ್ಲಿ ನಡೆಯಲಿರುವ 24 ನೇ ಪೂರ್ವ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಒಳಗೊಂಡ ಪೂರ್ವ ವಲಯ ಮಂಡಳಿಯು ಸುಮಾರು ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದೆ.
ಇದರಲ್ಲಿ ಅಂತಾರಾಜ್ಯ ನೀರಿನ ಸಮಸ್ಯೆಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಕಲ್ಲಿದ್ದಲು ಗಣಿಗಳ ಗೌರವಧನ ಕಾರ್ಯಾಚರಣೆ, ಭೂಮಿ ಮತ್ತು ರೈಲು ಯೋಜನೆಗಳ ಅರಣ್ಯ ತೆರವು, ಭೀಕರ ಅಪರಾಧಗಳ ತನಿಖೆ, ದೇಶದ ಗಡಿಯುದ್ದಕ್ಕೂ ಜಾನುವಾರು ಕಳ್ಳಸಾಗಣೆ, ದೂರದ ಪ್ರದೇಶಗಳಲ್ಲಿ ಟೆಲಿಕಾಂ ಮತ್ತು ಬ್ಯಾಂಕಿಂಗ್ ಮೂಲಸೌಕರ್ಯಗಳ ಕೊರತೆ, ಪೆಟ್ರೋಲಿಯಂ ಯೋಜನೆಗಳು ಮತ್ತು ಹಿರಿಯ ಅಧಿಕಾರಿಗಳ ಭಾಗವಹಿಸುವಿಕೆಯಿಂದ, ಸಭೆಯಲ್ಲಿ ಒಮ್ಮತದಿಂದ ಅನೇಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉಪಾಧ್ಯಕ್ಷರು ಮತ್ತು ಆತಿಥಿಯಾಗಿದ್ದಾರೆ ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು ಪ್ರತಿ ರಾಜ್ಯದ ತಮ್ಮ ಇಬ್ಬರು ಸಂಪುಟ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪೂರ್ವ ವಲಯ ಮಂಡಳಿಯ ಕೊನೆಯ ಸಭೆ ಕೊಲ್ಕತ್ತಾದಲ್ಲಿ ಕೊನೆಯದಾಗಿ ಅಕ್ಟೋಬರ್ 1, 2018 ರಂದು ನಡೆದಿತ್ತು .
1956 ರಲ್ಲಿ ರಾಜ್ಯಗಳ ಮರುವಿಂಗಡನೆ ಕಾಯಿದೆ ಕಾಯ್ದೆ, ಸೆಕ್ಷನ್ 15-22 ರ ಅಡಿಯಲ್ಲಿ ಐದು ವಲಯ ಮಂಡಳಿಗಳನ್ನು ಸ್ಥಾಪಿಸಲಾಗಿದ್ದು ಕೇಂದ್ರ ಗೃಹ ಸಚಿವರು ಈ ಐದು ವಲಯ ಮಂಡಳಿಗಳ ಅಧ್ಯಕ್ಷರಾಗಿರುತ್ತಾರೆ .
ವಲಯ ಪರಿಷತ್ತುಗಳು ಗಡಿ ಸಂಬಂಧಿತ ವಿವಾದಗಳು, ಭದ್ರತೆ, ರಸ್ತೆ, ಸಾರಿಗೆ, ಕೈಗಾರಿಕೆಗಳು, ನೀರು ಮತ್ತು ವಿದ್ಯುತ್ ಮುಂತಾದ ಮೂಲಸೌಕರ್ಯ ಸಂಬಂಧಿತ ವಿಷಯಗಳು, ಕಾಡುಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳು, ವಸತಿ, ಶಿಕ್ಷಣ, ಆಹಾರ ಭದ್ರತೆ, ಪ್ರವಾಸೋದ್ಯಮ, ಸಾರಿಗೆ ಸೇರಿದಂತೆ ವ್ಯಾಪಕ ವಿಷಯಗಳನ್ನು ಚರ್ಚೆಯಾಗಲಿವೆ .
ಯುಎನ್ಐ ಕೆಎಸ್ಆರ್ 2208
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..