Friday, Feb 28 2020 | Time 08:48 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

ಮತ್ತೆ ಕೈ ಹಿಡಿದ ‘ಗುಂಡ’ : ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ

ಮತ್ತೆ ಕೈ ಹಿಡಿದ ‘ಗುಂಡ’ : ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ
ಮತ್ತೆ ಕೈ ಹಿಡಿದ ‘ಗುಂಡ’ : ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ

ಬೆಂಗಳೂರು, ಜ 22 (ಯುಎನ್ಐ) ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಬಾಂಧ್ಯವದ ಮೇಲೆ ಬೆಳಕು ಚೆಲ್ಲುವ ‘ಗುಂಡ ಮತ್ತು ನಾನು’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, ತಮ್ಮ ಸಿನಿ ಜರ್ನಿಯಲ್ಲಿ ಕಂಡುಂಡ ಕಹಿ, ಸಿಹಿಯ ಬಗ್ಗೆ ಹೇಳಿಕೊಳ್ಳುತ್ತ, ‘ಗುಂಡ’ನ ಕಥೆ ಮತ್ತೆ ತಮ್ಮ ಕೈಹಿಡಿಯಿತು ಎಂದು ತಿಳಿಸಿದ್ದಾರೆ“ದಶಕಗಳ ಸಿನಿಮಾ ಪ್ರಯಾಣದ ಹೋರಾಟದ ವೇಳೆ ಎದುರಾದ ಏಳುಬೀಳು, ಅಪಮಾನದಿಂದ ಕುಗ್ಗಿದ್ದೆ ಮತ್ತೊಂದು ಸಿನಿಮಾಕ್ಕೆ ಕುಂಬಳಕಾಯಿ ಒಡೆಯುವ ಭಾಗ್ಯ ಕಾಣುತ್ತೇನೋ ಇಲ್ಲವೋ ಎಂದುಕೊಂಡಿದ್ದಾಗಲೇ ನಿರ್ಮಾಪಕ ರಘು ಹಾಸನ್‍ ‘ನಾನು ಮತ್ತು ಗುಂಡ’ ಚಿತ್ರಕ್ಕೆ ಬಂಡವಾಳ ಹಾಕಲು ಒಪ್ಪಿದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ“ಇದುವರೆಗೂ ನನ್ನ ಅಮೂಲ್ಯ ಸಮಯ, ಶ್ರಮ ಹಾಳು ಮಾಡಿದ ಜನರ ಮಧ್ಯೆ ರಘು ಹಾಸನ್ ಅವರ ಭರವಸೆ ಆತ್ಮವಿಶ್ವಾಸ ಹೆಚ್ಚಿಸಿತು. ‘ನಾನು ಮತ್ತು ಗುಂಡ’ ಶ್ವಾನದ ಮೇಲೆ ಕೇಂದ್ರೀಕೃತವಾದರೂ, ಕಥೆ ಮತ್ತು ಸಿನಿಮಾ ಮೇಲಿರುವ ಪ್ರೀತಿಯಿಂದ ಶಿವರಾಜ್ ಕೆ ಆರ್ ಪೇಟೆ ಅವರು ಈ ಸಿನಿಮಾದ ನಾಯಕನ ಪಾತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡದ್ದು ಪ್ರಶಂಸನಾರ್ಹ ನಾಯಕಿಯ ಪಾತ್ರಕ್ಕೆ ಸಂಯುಕ್ತ ಹೊರನಾಡು ರವರು ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಅವರಿಗೆ ಕಥೆಯನ್ನು ಒಪ್ಪಿಸಿದಾಗ. ಅವರ ಮನೆಯ ನಾಯಿಯ ಹೆಸರು ‘ಗುಂಡ’ ಎಂಬ ವಿಷಯವನ್ನು ಹಂಚಿಕೊಂಡರು, ಕೊನೆಗೆ ಸಿನಿಮಾಗೆ ‘ನಾನು ಮತ್ತು ಗುಂಡ’ ಶೀರ್ಷಿಕೆಯನ್ನೇ ಫೈನಲ್ಲ ಮಾಡಿದ್ದಾಗಿ ಶ್ರೀನಿವಾಸ್ ತಿಮ್ಮಯ್ಯ ತಿಳಿಸಿದ್ದಾರೆ.ಯುಎನ್‍ಐ ಎಸ್‍ಎ ವಿಎನ್ 1325

More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..