Wednesday, Feb 26 2020 | Time 08:46 Hrs(IST)
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Special Share

ಮಧ್ಯಪ್ರದೇಶದಲ್ಲಿ ಸಿಎಎ ಎಫೆಕ್ಟ್ ; ಬಿಜೆಪಿಗೆ ೮೦ ಕ್ಕೂ ಮುಸ್ಲಿಂ ನಾಯಕರ ರಾಜೀನಾಮೆ

ಭೋಪಾಲ್, ಜ ೨೪ (ಯುಎನ್‌ಐ) ಮಧ್ಯಪ್ರದೇಶದ ೮೦ ಕ್ಕೂ ಹೆಚ್ಚು ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಈ ನಾಯಕರು ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಕಾಯ್ದೆ ತರಲಾಗಿದೆ ಎಂದು ಆರೋಪಿಸಿದ್ದಾರೆ. ಸಿಎಎ ಈಗಾಗಲೇ ಜಾರಿಗೆ ಬಂದಿರುವ ಕಾರಣ ನಮ್ಮ ಧರ್ಮಕ್ಕೆ ಸೇರಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮಗೆ ಕಷ್ಟಕರವಾಗಿದೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಎ ನಂತಹ ವಿಭಜಕ ಕಾಯ್ದೆಗಳ ಬಗ್ಗೆ ಎಲ್ಲಿಯವರೆಗೆ ಮೌನವಾಗಿರಬೇಕು ಎಂದು ಜನರು ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನಿರಾಶ್ರಿತರಿಗೆ ಯಾವುದೇ ಧರ್ಮದವರಾಗಿರಲಿ, ಅವರಿಗೆ ಭಾರತೀಯ ಪೌರತ್ವ ನೀಡಬೇಕು, ಆದರೆ ಧರ್ಮದ ಆಧಾರದ ಮೇಲೆ ಅವರು ಭಯೋತ್ಪಾದಕರೇ? ಬಂಡಾಯಗಾರರೇ? ಎಂದು ಹೇಗೆ ನಿರ್ಧರಿಸುತ್ತಾರೆ ಎಂದು ಅವರು ಪ್ರಶ್ನಿಸಿದರು. ರಾಜೀನಾಮೆ ನೀಡಿದವರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಅವರಿಗೆ ಆಪ್ತರಾಗಿರುವ ನಾಯಕರುಗಳು ಇದ್ದಾರೆ. ಈ ಬಗ್ಗೆ ವಿಜಯ ವರ್ಗೀಯ ಅವರನ್ನು ಪ್ರಶ್ನಿಸಿದಾಗ, ರಾಜೀನಾಮೆ ನೀಡಿರುವ ವಿಷಯ ತನ್ನ ಗಮನಕ್ಕೆ ಬಂದಿಲ್ಲ ಎಂದು ಎಂದು ಉತ್ತರಿಸಿದ್ದಾರೆ.
ಯುಎನ್‌ಐ ಕೆವಿಆರ್ ೨೧೪೬
More News
ದೆಹಲಿ ಹಿಂಸಾಚಾರ; ವದಂತಿಗಳಿಗೆ ಕಿವಿಕೊಡಬೇಡಿ, ಶಾಂತಿ ಕಾಪಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

ದೆಹಲಿ ಹಿಂಸಾಚಾರ; ವದಂತಿಗಳಿಗೆ ಕಿವಿಕೊಡಬೇಡಿ, ಶಾಂತಿ ಕಾಪಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

25 Feb 2020 | 7:09 PM

ನವದೆಹಲಿ, ಫೆ 25(ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನಕಾರ ನಡುವಣ ಘರ್ಷಣೆ ನಂತರ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಿನ್ನಲೆಯಲ್ಲಿ ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಷಾ ಮಂಗಳವಾರ ಮನವಿ ಮಾಡಿದ್ದಾರೆ.

 Sharesee more..
ಹೈದ್ರಾಬಾದ್ ಹೌಸ್ ನಲ್ಲಿ ಮೋದಿ - ಟ್ರಂಪ್ ದ್ವಿಪಕ್ಷೀಯ ಮಾತುಕತೆ

ಹೈದ್ರಾಬಾದ್ ಹೌಸ್ ನಲ್ಲಿ ಮೋದಿ - ಟ್ರಂಪ್ ದ್ವಿಪಕ್ಷೀಯ ಮಾತುಕತೆ

25 Feb 2020 | 5:53 PM

ನವದೆಹಲಿ, ಫೆ ೨೫ (ಯುಎನ್‌ಐ) ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೆಹಲಿಯ ಹೈದರಾಬಾದ್ ಹೌಸ್ ಭವನದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗ ಮಾತುಕತೆ ನಡೆಸುತ್ತಿದ್ದಾರೆ.

 Sharesee more..
ಭಾರತ- ಅಮೆರಿಕಾ ಬಾಂಧವ್ಯ ಸಮಗ್ರ ಜಾಗತಿಕ ಕಾರ್ಯತಂತ್ರ ಸಹಭಾಗಿತ್ವ ಮಟ್ಟಕ್ಕೆ; ಪ್ರಧಾನಿ ಮೋದಿ

ಭಾರತ- ಅಮೆರಿಕಾ ಬಾಂಧವ್ಯ ಸಮಗ್ರ ಜಾಗತಿಕ ಕಾರ್ಯತಂತ್ರ ಸಹಭಾಗಿತ್ವ ಮಟ್ಟಕ್ಕೆ; ಪ್ರಧಾನಿ ಮೋದಿ

25 Feb 2020 | 5:28 PM

ನವದೆಹಲಿ, ಫೆ 25(ಯುಎನ್ಐ)- ಭಾರತ ಮತ್ತು ಅಮೆರಿಕಾ ದೇಶಗಳು ತಮ್ಮ ನಡುವಣ ಬಾಂಧವ್ಯಗಳನ್ನು ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಕೊಂಡೊಯ್ಯಲು ಮಂಗಳವಾರ ನಿರ್ಧರಿಸಿದೆ.

 Sharesee more..