Wednesday, Sep 23 2020 | Time 02:01 Hrs(IST)
Sports Share

ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌

ನವದೆಹಲಿ, ಆಗಸ್ಟ್ 3 (ಯುಎನ್ಐ)
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕಳೆದ ದಶಕದ ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರು. ತಮ್ಮ ನಾಯಕತ್ವದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಜತೆಗೆ, ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮೂರು ಬಾರಿ ಚಾಂಪಿಯನ್‌ ಪಟ್ಟ ತಂದುಕೊಟ್ಟ ನಾಯಕ. ನಾಯಕತ್ವ, ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ ಜತೆಗೆ ಧೋನಿ ಸಾಕಷ್ಟು ಕ್ರಿಕೆಟಿಗರ ಸೂಕ್ತ ಮಾರ್ಗದರ್ಶಕರಾಗಿದ್ದಾರೆ.
ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಐಪಿಎಲ್‌ ಆಡುವ ಸಮಯದಲ್ಲಿ ಮಹೇಂದ್ರ ಸಿಂಗ್‌ ಧೋನಿ ಮಾಡಿದ್ದ ಸಹಾಯವನ್ನು ಇಂಗ್ಲೆಂಡ್‌ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ ಇತ್ತೀಚಿನ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ. ಬಿಲ್ಲಿಂಗ್‌ ಸೆಪ್ಟೆಂಬರ್‌ 19 ರಿಂದ ಆರಂಭವಾಗುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 13ನೇ ಆವೃತ್ತಿಯಿಂದ ವಿಥ್‌ ಡ್ರಾ ಮಾಡಿಕೊಂಡಿದ್ದಾರೆ.
"ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಿದ್ದ ಎರಡು ವರ್ಷಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ದೀರ್ಘಕಾಲ ಯಶಸ್ಸು ಸ್ಥಿರವಾಗಿದ್ದ ಸಿಎಸ್‌ಕೆ ತ,ಡದ ವಾತವರಣ ಅದ್ಭುತವಾಗಿತ್ತು. ಚೆನ್ನೈ ಬಿಟ್ಟರೆ, ದೀರ್ಘಕಾಲ ಯಶಸ್ಸು ಸ್ಥಿರವಾಗಿರುವ ತಂಡವೆಂದರೆ ಮುಂಬೈ ಇಂಡಿಯನ್ಸ್‌. ಐಪಿಎಲ್‌ ವಿಜೇತ ಪದಕ ಪಡೆಯುವುದು ನಿಜವಾಗಿಯೂ ಅಮೋಘವಾದದ್ದು," ಎಂದು ಕ್ರಿಕ್‌ಬಜ್‌ ಸಂದರ್ಶನದಲ್ಲಿ ಇಂಗ್ಲೆಂಡ್‌ ಆಟಗಾರ ತಿಳಿಸಿದರು.
"ವಿದೇಶಿ ಆಟಗಾರರು ಸೇರಿದಂತೆ ಭಾರತೀಯ ಅದ್ಭುತ ಆಟಗಾರರಿಂದ ಸಿಕ್ಕ ಅನುಭವ ಅದ್ಭುತವಾಗಿತ್ತು. ಅದರಲ್ಲೂ, ನನ್ನ ಪಾತ್ರವನ್ನು ತುಂಬಲು ನನಗೆ ನೆರವಾಗಬಲ್ಲ ಎಂ.ಎಸ್‌ ಧೋನಿಗಿಂತ ಬೇರೆ ದೊಡ್ಡ ಸ್ಟಾರ್‌ಗಳು ಅಗತ್ಯವಿಲ್ಲ," ಎಂದು ಬಿಲ್ಲಿಂಗ್ಸ್‌ ಸಿಎಸ್‌ಕೆ ನಾಯಕನನ್ನು ಕೊಂಡಾಡಿದರು.
"ಕಲಿಕೆಗೆ ಎಂ.ಎಸ್‌ ಧೋನಿಗಿಂತ ಅತ್ಯುತ್ತಮ ಆಟಗಾರರು ಇನ್ನೊಬ್ಬರಿಲ್ಲ. ಅವರು ಸೃಷ್ಠಿಸಿದ್ದ ವಾತಾವರಣ ಹಾಗೂ ಅವರ ಜ್ಞಾನ ಪಡೆದ ನಾನು ನಿಜಕ್ಕೂ ಅದ್ಭುತ ಆಟಗಾರ ಎಂದು ಭಾವಿಸುತ್ತೇನೆ. ಯಾವುದೇ ಪಂದ್ಯವಿದ್ದರೂ ನಾವು ಅವರ ಕೊಠಡಿಗೆ ಹೋಗಿ ನೋಡುತ್ತಿದ್ದೆವು. ಅವರೊಂದಿಗೆ ಕ್ರಿಕೆಟ್‌ ಬಗ್ಗೆ ಮಾತನಾಡಲು ಹಾಗೂ ಕಲಿಕೆಗೆ ಅದ್ಭುತವಾಗಿರುತ್ತದೆ," ಎಂದು ಅವರು ಸೇರಿಸಿದರು.
"ಅಭ್ಯಾಸವಾಗಲಿ ಅಥವಾ ಪಂದ್ಯವಾಗಲಿ ಅವರು ಹೇಗೆ ಆಡುತ್ತಾರೆಂಬುದನ್ನು ನೋಡಬೇಕು. ಯುವ ಪ್ರತಿಭೆಗಳು ಸೇರಿದಂತೆ ತಂಡದ ಆಟಗಾರ ಜತೆ ಅವರ ಮಾತು ಸೇರಿದಂತೆ ಹಲವು ವಿಷಯಗಳು ನಂಬಲಾಗದ ವಿಷಯಗಳಾಗಿವೆ. ಅಲ್ಲದೆ, ಧೋನಿ ಮೇಲಿನ ಆಟಗಾರರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸ ಅಪಾರವಾಗಿದೆ. ಅದರಂತೆ ಆಟಗಾರರ ಮೇಲೆಯೂ ಅವರು ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ," ಎಂದು ಸ್ಯಾಮ್ ಬಿಲ್ಲಿಂಗ್ಸ್‌ ತಿಳಿಸಿದರು.
ಯುಎನ್ಐಆರ್ ಕೆ 2140
More News
ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

22 Sep 2020 | 10:32 PM

ಶಾರ್ಜಾ, ಸೆ.22 (ಯುಎನ್ಐ)- ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ರಾಜಸ್ಥಾನ ಸ್ಕೋರ್ ಬೋರ್ಡ್

22 Sep 2020 | 9:34 PM

 Sharesee more..

ಪೀಟ್ ಸಂಪ್ರಾಸ್ ದಾಖಲೆಯನ್ನು ಮೀರಿದ ಜೊಕೊವಿಚ್

22 Sep 2020 | 6:47 PM

 Sharesee more..