Friday, Oct 30 2020 | Time 07:17 Hrs(IST)
Special Share

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು

ಥಾಣೆ, ಸೆಪ್ಟೆಂಬರ್ 21 (ಯುಎನ್‌ಐ) ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ಮುಂಜಾನೆ ಬಹುಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಧಮಂಕರ್ ನಾಕಾ ಬಳಿಯ ನಾರ್ಪೋಲಿಯ ಪಟೇಲ್ ಕಾಂಪೌಂಡ್‌ನಲ್ಲಿರುವ ನೆಲ ಮತ್ತು ಮೂರು ಅಂತಸ್ತಿನ ಕಟ್ಟಡವು ಇಂದು ಮುಂಜಾನೆ ಕುಸಿದಿದೆ ಎಂದು ಟಿಎಂಸಿಯ ಆರ್‌ಡಿಎಂಸಿಯ ಮುಖ್ಯಸ್ಥ ಸಂತೋಷ್ ಕದಮ್ ಯುಎನ್‌ಐ ವರದಿಗಾರರಿಗೆ ತಿಳಿಸಿದ್ದಾರೆ.

ಕಟ್ಟಡದ ಒಂದು ಭಾಗ ಕುಸಿದಿದ್ದು, ಕುಸಿದ ಕಟ್ಟಡದ ಭಗ್ನಾವಶೇಷದಲ್ಲಿ ಅನೇಕ ನಿವಾಸಿಗಳು ಸಿಲುಕಿದ್ದಾರೆ ಎನ್‌ಆರ್‌ಡಿಎಫ್‌ನ ತಂಡ ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಕದಮ್ ಹೇಳಿದ್ದಾರೆ.

ಥಾಣೆ ಮುನ್ಸಿಪಲ್ ಕಮಿಷನರ್ ಡಾ.ವಿಪಿನ್ ಶರ್ಮಾ ಅವರ ನಿರ್ದೇಶನದ ಮೇರೆಗೆ ಟಿಡಿಆರ್ಎಫ್ ತಂಡವನ್ನೂ ಸಹ ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಎಂಟು ಮೃತದೇಹಗಳನ್ನು ಅವಶೇಷಗಳಿಂದ ತೆಗೆಯಲಾಗಿದ್ದು, ಐವರನ್ನು ರಕ್ಷಣಾ ತಂಡಗಳು ರಕ್ಷಣೆ ಮಾಡಿವೆ. ಕಟ್ಟಡವು ಅಪಾಯಕಾರಿ ಕಟ್ಟಡದ ಪಟ್ಟಿಯಲ್ಲಿದೆಕುಸಿದ ಕಟ್ಟಡದಲ್ಲಿ ವಾಸ ಮಾಡುತ್ತಿದ್ದವರ ನಿಖರ ಸಂಖ್ಯೆ ಎಷ್ಟು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಯುಎನ್ಐ ಕೆಎಸ್ಆರ್ 0759