Friday, Feb 28 2020 | Time 09:38 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಐವರು ನಕ್ಸಲರು ಶರಣಾಗತಿ

ನಾಗ್ಪುರ, ಜ 1(ಯುಎನ್‍ಐ)- ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಮಹಿಳೆ ಮೂವರು ಮಹಿಳೆಯರುವ ಸೇರಿದಂತೆ ಐವರು ಕುಖ್ಯಾತ ನಕ್ಸಲರು ಶರಣಾಗತಿಯಾಗಿದ್ದಾರೆ ಎಂದು ಪೊಲೀಸರು ಬುಧವಾರ ಇಲ್ಲಿ ತಿಳಿಸಿದ್ದಾರೆ.
ಈ ನಕ್ಸಲರ ಸುಳಿವು ಕೊಟ್ಟವರಿಗೆ 27 ಲಕ್ಷ ರೂ. ಬಹುಮಾನವನ್ನು ಪ್ರಕಟಿಸಲಾಗಿತ್ತು.
‘ಅಜಯ್ ಅಲಿಯಾಸ್ ಮಾನೆಶಿಂಗ್ ಕುಲ್‍ಯಾಮಿ, ಸುನಿಲ್ ಅಲಿಯಾಸ್ ಫುಲ್‍ಸಿಂಗ್ ಹೊಲಿ, ರಾಜೊ ಅಲಿಯಾಸ್ ಗಂಗಾ ಅಲಿಯಾಸ್ ಶಶಿಕಲಾ ತುಳವಿ, ಸಪ್ನಾ ಅಲಿಯಾಸ್ ರುಕ್ಮಾ ವದ್ದೆ ಮತ್ತು ಗುನ್ನಿ ಅಲಿಯಾಸ್ ವಸಂತಿ ಮಾದವಿ ಬಂಧಿತ ನಕ್ಸಲರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಶೋಧ ಕಾರ್ಯಾಚರಣೆ ಮತ್ತು ಇತರ ಕಾರ್ಯಚಟುವಟಿಕೆಗಳಿಂದ ಗಡ್‍ಚಿರೋಲಿ ಜಿಲ್ಲೆಯ ಅನೇಕ ಭಾಗಗಳಲ್ಲಿ ನಕ್ಸಲರ ಚಟುವಟಿಕೆಗಳು ಕಡಿಮೆಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಬಲ್ಕವಾಡೆ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ನಕ್ಸಲ್ ದಳಂಗಳಿಗೆ ಹೊಸ ನೇಮಕಾತಿ ನಿಂತಿದೆ. ನಕ್ಸಲರ ಶರಣಾಗತಿ ಮುಂದುವರೆದಿದೆ. ಶೀಘ್ರವೇ ಗಡ್‍ಚಿರೋಲಿ ಜಿಲ್ಲೆ ನಕ್ಸಲ್ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ಶರಣಾದ ನಕ್ಸಲರು ಕಳೆದ ಎಂಟು ವರ್ಷಗಳಿಂದ ನಕ್ಸಲ್ ಸಂಬಂಧಿತ ಅಪರಾಧಗಳು, ಪೊಲೀಸ್ ಎನ್‍ಕೌಂಟರ್ ಮತ್ತು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಯುಎನ್‍ಐ ಎಸ್‍ಎಲ್‍ಎಸ್ 1238