Monday, Jun 1 2020 | Time 02:56 Hrs(IST)
Special Share

ಮಹಾರಾಷ್ಟ್ರ: ಅತ್ಯಾಚಾರಿಗೆ 7 ವರ್ಷ ಕಠಿಣ ಸಜೆ

ಥಾಣೆ, ಮಾ 11 (ಯುಎನ್‍ಐ) ವಿವಾಹವಾಗುತ್ತೇನೆಂದು ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 7 ವರ್ಷಗಳ ಕಠಿಣ ಸಜೆ ವಿಧಿಸಿದೆ.
ಅಪರಾಧಿಯನ್ನು ನಿತಿನ್ ಮರೆ (32) ಎಂದು ಗುರುತಿಸಲಾಗಿದ್ದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ನಿತಿನ್ ತನ್ನ ಜತೆ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ನಿತ್ಯ ಕೆಲಸಕ್ಕೆ ಹೋಗುತ್ತಿದ್ದು, ಹಲವು ದಿನಗಳ ಬಳಿಕ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ.
ಅಲ್ಲದೆ, ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಆದರೆ, ಆತನಿಗೆ ಬೇರೊಬ್ಬ ಮಹಿಳೆಯೊಡನೆ ನಿಶ್ಚಿತಾರ್ಥವಾಗಿರುವ ವಿಷಯ ತಿಳಿದು ಕಂಗಲಾದ ಮಹಿಳೆ ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾನೆ. ಹೀಗಾಗಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ, 7 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಯುಎನ್ಐ ಎಸ್‍ಎ ವಿಎನ್ 1339