Friday, Dec 6 2019 | Time 21:05 Hrs(IST)
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
 • ಡುಮ್ಕಾ ಖಜಾನೆ ಪ್ರಕರಣ: ಜಾರ್ಖಂಡ್ ಹೈ ಕೋರ್ಟ್‍ನಿಂದ ಲಾಲು ಪ್ರಸಾದ್ ಯಾದವ್‍ ಜಾಮೀನು ಅರ್ಜಿ ನಿರಾಕರಣೆ
Election Share

ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ವಿಖೆ ಪಾಟೀಲ್ ರಾಜೀನಾಮೆ

ಮುಂಬೈ, ಜೂ 4 (ಯುಎನ್ಐ) ಮಹಾರಾಷ್ಟ್ರ ಕಾಂಗ್ರೆಸ್ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಶಾಸಕರ ತಂಡದೊಂದಿಗೆ ಬಿಜೆಪಿಗೆ ಸೇರಲಿದ್ದಾರೆ ಎಂಬ ಚರ್ಚೆ ನಡೆದಿರುವಾಗಲೇ ಪಾಟೀಲ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕೆಲ ಬಂಡಾಯ ಶಾಸಕರು ಪಕ್ಷ ತೊರೆಯುತ್ತಿರುವುದನ್ನು ಖಚಿತ ಪಡಿಸಿರುವ ಕಾಂಗ್ರೆಸ್, ಸ್ಥಿತಿಯನ್ನು ನಿಯಂತ್ರಿಸಿ ಅವರ ಮನವೊಲಿಸಲಾಗುವುದು ಎಂದು ಪ್ರತಿಪಾದಿಸಿದೆ.
ಇದಕ್ಕೂ ಮುನ್ನ ರಾಧಾಕೃಷ್ಣ ಅವರ ಮಗ ಸುಜಯ್ ವಿಖೆ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಅಹ್ಮದ್ ನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.
ಬಿಜೆಪಿಯ ಗಿರೀಶ್ ಬಾಪತ್ ಹಾಗೂ ಉಮೇಶ್ ಪಾಟೀಲ್ ಕ್ರಮವಾಗಿ ಪುಣೆ ಮತ್ತು ಜಲಗಾಂವ್ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಅವರು ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಯ ಗಿರೀಶ್ ಬಾಪತ್ ಹಾಗೂ ಉಮೇಶ್ ಪಾಟೀಲ್ ಮತ್ತು ಕಾಂಗ್ರೆಸ್ ನ ರಾಧಾಕೃಷ್ಣ ವಿಖೆ ಪಾಟೀಲ್ ಅವರ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಹರಿಭಾವು ಬಗಾಡೆ ಸ್ವೀಕರಿಸಿದ್ದಾರೆ.
ಯುಎನ್ಐ ಡಿವಿ ವಿಎನ್ 1824