Friday, Sep 25 2020 | Time 13:17 Hrs(IST)
 • ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಮಸೂದೆ: ಪ್ರಧಾನಿ
 • 19 ವರ್ಷಗಳಿಂದ ರಾಮಸ್ವಾಮಿ ವರದಿ ಕೊಳೆಯುತ್ತಿದೆ: ರಾಮ್ ದಾಸ್
 • ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
 • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
 • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
 • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
Entertainment Share

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವಿಟರ್ ಮೂಲಕ ಮಹಾನ್ ಗಾಯಕನನ್ನು ಸ್ಮರಿಸಿದ್ದು, “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡಿನ ಮೂಲಕ ಮುಖೇಶ್ ಅವರನ್ನು ಸದಾ ಸ್ಮರಿಸುತ್ತಿರುವೆ” ಎಂದು ಹೇಳಿದ್ದಾರೆ

ಮುಕೇಶ್ ಎಂದೇ ಚಿರಪರಿಚಿತರಾಗಿರುವ ಮುಕೇಶ್ ಚಂದ್ ಮಾಥುರ್ 1923ರಲ್ಲಿ ಜನಿಸಿ, ಮೊಹಮ್ಮದ್ ರಫಿ, ಮನ್ನಾ ಡೇ, ಕಿಶೋರ್ ಕುಮಾರ್ ಅವರಂತಹ ದಿಗ್ಗಜ ಗಾಯಕರ ಯುಗದಲ್ಲಿ, ಬಾಲಿವುಡ್ ಚಿತ್ರರಂಗ ಮರೆಯಲಾಗದ ಗೀತೆಗಳನ್ನು ನೀಡಿದರು. ಜನಪ್ರಿಯ ನಟರಾದ ರಾಜ್ ಕಪೂರ್, ಮನೋಜ್ ಕುಮಾರ್, ಫಿರೋಜ್ ಖಾನ್, ಸುನಿಲ್ ದತ್ ಮೊದಲಾದವರ ಹಾಡಿಗೆ ದನಿಯಾದರು.

ಮುಕೇಶ್ ಬಾಲಿವುಡ್ ನಲ್ಲಿ ಹಾಡಿನ ಪಯಣ ಆರಂಭಿಸುವ ಮುನ್ನ, 1941ರಲ್ಲಿ ‘ನಿರ್ದೋಷ್’ ಚಿತ್ರದಲ್ಲಿ ನಟಿಸಿದ್ದಲ್ಲದೆ ಅದೇ ಚಿತ್ರಕ್ಕೆ ‘ದಿಲ್ ಹೈ ಬುಜಾ ಹುವಾ ಹೋ ತೊ” ಹಾಡನ್ನು ಹಾಡಿದರು. ತಮ್ಮ ಸೋದರಿಯ ವಿವಾಹ ಸಮಾರಂಭದಲ್ಲಿ ಹಾಡುತ್ತಿದ್ದ ಮುಕೇಶ್ ಅವರನ್ನು ದೂರದ ಸಂಬಂಧಿ ಮೋತಿಲಾಲ್ ಗುರುತಿಸಿ, ಮುಂಬೈಗೆ ಕರೆತಂದು ಪಂಡಿತ್ ಜಗನ್ನಾಥ್ ಪ್ರಸಾದ್ ಅವರಿಂದ ಸಂಗೀತದ ಪಾಠ ಕಲಿಯಲು ಏರ್ಪಾಡು ಮಾಡಿದ್ದರು

ಮೊಟ್ಟ ಮೊದಲಿಗೆ ‘ಪೆಹಲಿ ನಜರ್’ ಚಿತ್ರದಲ್ಲಿ ಅನಿಲ್ ಬಿಸ್ವಾಸ್ ಸಂಗೀತ ನಿರ್ದೇಶನದ “ದಿಲ್ ಜಲ್ತಾ ಹೈ ತೊ ಜಲ್ನೆ ದೋ” ಹಾಡಿಗೆ ದನಿಯಾದ ಮುಕೇಶ್,

‘ಜೀವನ್ ಸಪ್ನಾಟೂಟ್ ಗಯಾ’, ‘ದಿಲ್ ತಡಪ್ ತಡಪ್ ಕೆ’ ಸೇರಿದಂತೆ 1,300ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿರುವ ದಿವಂಗತ ಮುಕೇಶ್, ಹಾಡುಗಳ ಸಂಖ್ಯೆಗಿಂತಲೂ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದವರು. ನಟ ರಾಜ್ ಕಪೂರ್ ಅವರ ಹಾಡುಗಳನ್ನು ಹೆಚ್ಚಾಗಿ ಹಾಡಿದ್ದಾರೆ.1974ರಲ್ಲಿ ರಜನೀಗಂಧ ಚಿತ್ರದ ‘ಕಯಿ ಬಾರ್ ಯೂಂಹಿ ದೇಖಾ ಹೈ...’ ಹಾಡಿಗೆ. ರಾಷ್ಟ್ರಪ್ರಶಸ್ತಿ ಹಾಗೂ 1975-ಅನಾಡಿ ಚಿತ್ರದ ‘ಸಬ್ ಕುಛ್ ಸಿಖಾ ಹಮ್ನೇ’ 1970ರ ವಹಚಾನ್ ಚಿತ್ರದ ‘ಸಬ್ ಸೆ ಬಡಾ ನಾದಾನ್’, 1972ರಲ್ಲಿ ಬೇಈಮಾನ್ ಚಿತ್ರದ ಜೈ ಬೋಲೋ ಬೆಈಮಾಮಾ ಕೀ, 1976ರಲ್ಲಿ ಕಭೀ ಕಭೀ ಚಿತ್ರದ ‘ಕಭೀ ಕಭೀ ಮೇರೇ ದಿಲ್ ಮೇಂ’ ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳು ಲಭ್ಯವಾಗಿವೆಬಹುಮಖ ಪ್ರತಿಭೆಯಾಗಿದ್ದ ಮುಕೇಶ್ 1976 ಆಗಸ್ಟ್ 27ರಲ್ಲಿ ಅಮೆರಿಕದ ಮಿಚಿಗನ್ ನ ಡೆಟ್ರಾಯಿಟ್ ನಲ್ಲಿ ವಿಧಿವಶರಾದರು.

ಯುಎನ್ಐ ಎಸ್ಎ ಎಸ್ಎಚ್ 1533