Thursday, Nov 21 2019 | Time 03:10 Hrs(IST)
Karnataka Share

ಮುಖ್ಯಮತ್ರಿ ಅವರ ಆಪ್ತ ಮಿತ್ರ ಬಿಜೆಪಿ ಜೊತೆ ಸಾರಾ ಮಹೇಶ್ ಮಾತುಕತೆ ?

ಬೆಂಗಳೂರು,ಜು 11(ಯುಎನ್ಐ) ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡಲು ಮುಂದೆ ಬಂದಿದೆಯೇ ಎಂಬ ಶಂಕೆ ಉದ್ಬವಿಸಿದೆ.

ನಗರದ ಕುಮಾರ ಕೃಪಾ ಅಥಿತಿ ಗೃಹದಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಲಗೈ ಎಂದೇ ಗುರುತಿಸಿರುವ ಸಚಿವ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿದ್ದಾರೆಂಬ ಕುತೂಹಲಕಾರಿ ಮಾಹಿತಿ ಹೊರಬಂದಿದೆ.

ಕೆಕೆ ಅತಿಥಿ ಗೃಹದ ನೂತನ ಕಟ್ಟಡಕ್ಕೆ ಸಚಿವ ಸಾರಾ ಮಹೇಶ್ ಪರಿಶೀಲನೆಗಾಗಿ ತೆರಳಿದ್ದರು.ಈ ವೇಳೆ ಸಾರಾ ಮಹೇಶ್ ಹಾಗೂ ಬಿಜೆಪಿ ರಾಜ್ಯ ಉಸ್ತುವಾರು ಮುರಳೀಧರ ರಾಜ್ ಹಾಗೂ ಕೆಎಸ್ ಈಶ್ವರಪ್ಪ ಭೇಟಿಯಾಗಿದ್ದಾರೆ ಅತಿಥಿಗೃಹದಲ್ಲಿ ಅರ್ಧ ಗಂಟೆಗೂ ಹಚ್ಚು ಸಮಯ ಚರ್ಚೆ ನೆಡೆಸಿದ್ದಾರೆ ಎನ್ನಲಾಗಿದೆ.

ಕೆಲ ಹೊತ್ತು ಸಾರಾ ಮಹೇಶ್ ಜೊತೆ ಚರ್ಚೆ ನಡೆಸ ಮುರಳೀಧರ ಬಳಿಕ ಈಶ್ವರಪ್ಪ ಕಾರನ್ನು ಹತ್ತಿ ಹೋಟೇಲಿನಡೆ ತೆರಳಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಮಾತನಾಡಲು ಬಂದಿದ್ದೇವು. ನನಗೂ ಸಾ.ರಾ.ಮಹೇಶ್ ಅವರಿಗೂ ಏನ್ ಸಂಬಂಧ ಎಂದು ಹೇಳಿದರು ಕೆ.ಎಸ್.ಈಶ್ವರಪ್ಪ ಅವರು ಕೆ.ಕೆ.ಗೆಸ್ಟ್ ಹೌಸ್‍ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಸಚಿವ ಸಾರಾ ಮಹೇಶ್ ಅವರು ಹೊರ ಬಂದರು. ಈ ವೇಳೆ ಮಾತನಾಡಿದ ಸಚಿವರು, ಈಶ್ವರಪ್ಪನವರು ಕ್ಷೇತ್ರದ ಬಗ್ಗೆ ವಿಚಾರಿಸಲು ಬಂದಿದ್ದರು. ನಾನು ಸಚಿವ, ಹೀಗಾಗಿ ಭೇಟಿಯಾಗಲು ಬಂದಿದ್ದೆ. ಅದರಲ್ಲ ತಪ್ಪೇನಿಗೆ ಎಂದು ಪ್ರಶ್ನೆ ಮಾಡಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ಜೆಡಿಎಸ್, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ.ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್.ಈಶ್ವರಪ್ಪ, ಮುರಳೀಧರ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವಿಟ್ ಮಾಡಬಹುದು

ಯುಎನ್ಐ ಎಸ್ಎಂಆರ್ ವಿಎನ್ 0112
More News

ಜಾನಪದ ಗಾಯನದ ಬಗ್ಗೆ ತರಬೇತಿ: ಅರ್ಜಿ ಆಹ್ವಾನ

20 Nov 2019 | 7:25 PM

 Sharesee more..
ಉಪ ಚುನಾವಣೆಯಲ್ಲಿ ಸೋಲಾದರೆ ಮಂತ್ರಿಯಾಗಿ ಮುಂದುವರೆಯುವುದು ಕಷ್ಟವಾದೀತು: ಯಡಿಯೂರಪ್ಪ

ಉಪ ಚುನಾವಣೆಯಲ್ಲಿ ಸೋಲಾದರೆ ಮಂತ್ರಿಯಾಗಿ ಮುಂದುವರೆಯುವುದು ಕಷ್ಟವಾದೀತು: ಯಡಿಯೂರಪ್ಪ

20 Nov 2019 | 7:13 PM

ಬೆಂಗಳೂರು, ನ 20 []ಯುಎನ್ಐ] ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಿಜೆಪಿ ಸರ್ಕಾರದ ಅಳಿವು - ಉಳಿವು ನಿರ್ಧರಿಸಲಿದ್ದು, ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

 Sharesee more..