Monday, Jul 22 2019 | Time 19:51 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
International Share

ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನ ಪುನರಾರಂಬಿಸಲು ನಾಸಾ ಯತ್ನ

ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನ ಪುನರಾರಂಬಿಸಲು ನಾಸಾ ಯತ್ನ
ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನ ಪುನರಾರಂಬಿಸಲು ನಾಸಾ ಯತ್ನ

ಲಾಸ್ ಏಂಜಲೀಸ್, ಜೂನ್ 23 (ಕ್ಸಿನುಆ) ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಇನ್ ಸೈಟ್ ಲ್ಯಾಂಡರ್ಸ್ ಮಿಷನ್ ತಂಡವು, ಮಂಗಳ ಗ್ರಹದ ಮೇಲಿನ ತಾಪಮಾನ ಅಧ್ಯಯನಕ್ಕೆ ಮತ್ತೆ ಮುಂದಾಗಿದೆ ಎಂದು ಸಂಸ್ಥೆಯ ಜೆಟ್ ಪ್ರೊಪೊಲ್ಶನ್ ಪ್ರಯೋಗಾಲಯ ನಿನ್ನೆ ಮಾಹಿತಿ ನೀಡಿದೆ.

ಕೆಂಪು ಗ್ರಹದಲ್ಲಿನ ಶಾಖದ ಬಗೆಗಿನ ಅಧ್ಯಯನಕ್ಕಾಗಿ ಇನ್ ಸೈಟ್ ಲ್ಯಾಂಡರ್ಸ್ ಮಿಷನ್ ತಂಡವು ಪ್ರಾಥಮಿಕ ಅಂಕಿ ಅಂಶಗಳನ್ನು ಕಲೆ ಹಾಕಲು ಸೀಸ್ಮೋಮೀಟರ್ ನಂತಹ ಅತ್ಯಾಧುನಿಕ ಸಾಧನವನ್ನು ಬಳಕೆ ಮಾಡಿಕೊಳ್ಳಲಿದೆ.

ಈ ತಾಪಮಾನ ತನಿಖೆಯನ್ನು “ಮೋಲ್” ಎಂದು ಕರೆಯಲಾಗುತ್ತಿದ್ದು, ಮಂಗಳನ ಮೇಲ್ಮೈಗಿಂತ ಕೆಳಗೆ ಅಗೆದು, ಉತ್ಪನ್ನವಾಗುವ ಶಾಖದ ಮಾಪನ ಮಾಡಲಿದೆ. ಆದಾಗ್ಯೂ “ಮೋಲ್” ಕಳೆದ ಫೆಬ್ರವರಿ 28ರಿಂದ ಇಲ್ಲಿಯವರೆಗೆ 30 ಸೆಂಟಿಮೀಟರ್ ಗಿಂತ ಕೆಳಗೆ ಅಗೆಯಲು ಸಾಧ್ಯವಾಗಿಲ್ಲ.

“ಮೋಲ್’ ಅಗೆತಕ್ಕೆ ತಡೆಯುಂಟಾಗುತ್ತಿರುವ ಕಾರಣದ ಕುರಿತು ಹಲವು ವಿಜ್ಞಾನಿಗಳು ಅನೇಕ ಪರೀಕ್ಷೆಗಳನ್ನು ನಡೆಸಿ, ವಿಶ್ಲೇಷಣೆಯ ಮೂಲಕ ಅರ್ಥೈಸಿಕೊಳ್ಳಲು ಯತ್ನಿಸಿದ್ದು, ಮಣ್ಣಿನಲ್ಲಿರುವ ಆಂತರಿಕ ಘರ್ಷಣೆಯ ಕೊರತೆಯೇ ಕಾರಣ ಎಂವ ನಿಲುವಿಗೆ ಬಂದಿದ್ದಾರೆ. ಘರ್ಷಣೆಯ ಕೊರತೆಯಿಂದಾಗಿ ಮೋಲ್ ಪುಟಿದೇಳುತ್ತದೆ.

ಮುಂದಿನ ದಿನಗಳಲ್ಲಿ ಮೋಲ್ ನ ಅಗೆಯುವಿಕೆ ರಚನೆಯನ್ನು ಇನ್ನಷ್ಟು ಉತ್ತಮಗೊಳಿಸಲು ನಿರ್ಧರಿಸಿರುವುದಾಗಿ ಇನ್ ಸೈಟ್ ತಂಡವು ಟ್ವೀಟ್ ಮಾಡಿದೆ.

“ಸಮಸ್ಯೆಯನ್ನು ಕಂಡುಕೊಳ್ಳಲು ಇಂಜಿನಿಯರ್ ಗಳು ಸತತ ಪರಿಶ್ರಮ ಪಡುತ್ತಿದ್ದಾರೆ” ಎಂದು ನಾಸಾದ ಗ್ರಹ ವಿಜ್ಞಾನ ವಿಭಾಗದ ಅಧ್ಯಕ್ಷ ಲೋರಿ ಗ್ಲೇಜ್ ತಿಳಿಸಿದ್ದಾರೆ.

ಮಂಗಳನ ಒಳಾಂಗಣವನ್ನು ಅನ್ವೇಷಿಸುವ ಎರಡು ವರ್ಷಗಳ ಕಾರ್ಯಾಚರಣೆಗಾಗಿ ಇನ್ ಸೈಟ್ ಕಳೆದ ವರ್ಷದ ನವೆಂಬರ್ 26ರಂದು ಮಂಗಳನ ಮೇಲೆ ಸುರಕ್ಷಿತವಾಗಿ ಇಳಿದಿತ್ತು.

ಯುಎನ್ಐ ಎಸ್ಎ ವಿಎನ್ 1344