Sunday, Jul 5 2020 | Time 13:30 Hrs(IST)
 • ಶ್ರೀಲಂಕಾ ವಿಕೆಟ್ ಕೀಪರ್ ಕುಶಾಲ್ ಮೆಂಡಿಸ್ ಬಂಧನ
 • ಕಾನ್ಪುರ ಎನ್ ಕೌಂಟರ್ ; ವಿಕಾಸ್ ದುಬೆ ಪತ್ತೆಗೆ ಮಾಹಿತಿ ನೀಡಿದವರಿಗೆ ಬಹುಮಾನ ೧ ಲಕ್ಷ ರೂಗೆ ಹೆಚ್ಚಳ
 • ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ,ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ
 • ದೆಹಲಿಯಲ್ಲಿ ಸೋಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ; ಕೇಜ್ರವಾಲ್
 • ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ
 • ಭಾರತದಲ್ಲಿ 24,850 ಕೋವಿಡ್ ಪ್ರಕರಣಗಳು ವರದಿ, ಗುಣಮುಖರಾದವರ 4 ಲಕ್ಷಕ್ಕೇರಿಕೆ
 • ನ್ಯೂಜಿಲೆಂಡ್‌ನಲ್ಲಿ ಹೊಸದಾಗಿ ಮೂರು ಕೊರೊನಾ ಪ್ರಕರಣ ದೃಢ
 • ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿ: ಜನಜೀವನ ಸ್ತಬ್ಧ
 • ಕಂದಮಾಲ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ನಕ್ಸಲರು ಹತ
 • ಭಾರತದಲ್ಲಿ ಒಂದೇ ದಿನ ೨೪,೮೫೦ ಪ್ರಕರಣಗಳು, ೬೧೩ ಸಾವುಗಳು !
 • ಬ್ರೆಜಿಲ್‍ನಲ್ಲಿ ಒಂದೇ ದಿನ 38,000 ಹೊಸ ಕೊವಿಡ್‍ ಪ್ರಕರಣಗಳು ದೃಢ, 1,000ಕ್ಕೂ ಹೆಚ್ಚು ಸೋಂಕಿತರು ಸಾವು
 • ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ; ಡೊನಾಲ್ಡ್ ಟ್ರಂಪ್
 • ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
 • ಶ್ರೀನಗರ- ಪುಲ್ವಾಮ ರಸ್ತೆಯಲ್ಲಿ ಸ್ಫೋಟ, ಸಿಆರ್ಪಿಎಫ್ ಯೋಧನಿಗೆ ಗಾಯ
 • ಜಪಾನ್‍ ನಲ್ಲಿ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ-ಏಳು ಮಂದಿ ಸಾವು
Karnataka Share

ಮಾಜಿ ಸಚಿವರ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು

ನೆಲಮಂಗಲ, ನ 20 (ಯುಎನ್ಐ) ಮಾಜಿ ಸಚಿವ ಶಾಮನೂರು ಶಿವಶಂಕರಪ್ಪರ ಪುತ್ರ ಗಣೇಶ್ ಪ್ರಯಾಣಿಸುತ್ತಿದ್ದ ಕಾರು ದಾಬಸ್ ಪೇಟೆಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ್ದು, ಬೈಕ್ ಸವಾರ ಮೃತಪಟ್ಟಿದ್ದಾನೆ.
50 ವರ್ಷದ ಯೋಗಾನಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಈತ ಬೆಂಗಳೂರಿನ ಪ್ರಕಾಶ್ ನಗರದ ನಿವಾಸಿ ಎಂದು ತಿಳಿದು ಬಂದಿದೆ.
ಜಿಂದಾಲ್ ಕಾರ್ಖಾನೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಗಣೇಶ್, ವೀರೇಶ್ ಹಾಗೂ ಕಾರು ಚಾಲಕ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೆಲಮಂಗಲ ತಾಲೂಕಿನ ತುಮಕೂರು ಕಡೆಯಿಂದ ಬೆಂಗಳೂರಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಗಣೇಶ್ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಎನ್ಐ ಪಿಕೆ ವಿಎನ್ 1910