Monday, Jun 1 2020 | Time 02:42 Hrs(IST)
Election Share

ಮಾಜಿ ಸಿಎಂ ಅಜಿತ್ ಜೋಗಿ ಗೆ ಹೃದಯಾಘಾತ

ರಾಯ್ಪುರ, ಮೇ 9(ಯುಎನ್ಐ) ಛತ್ತೀಸ್ ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರಿಗೆ ಹೃದಯಘಾತವಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. .
74 ವರ್ಷದ ಅಜಿತ್ ಜೋಗಿ ಅವರನ್ನು 2016 ರಲ್ಲಿ ಕಾಂಗ್ರೆಸ್ ನಿಂದ ವಜಾಗೊಳಿಸಿದ ನಂತರ ಅವರು ಸ್ಥಾಪಿಸಿದ ಜನತಾ ಕಾಂಗ್ರೆಸ್ ಛತ್ತೀಸ್ ಗಡದ (ಜೆಸಿಸಿ) ನೇತೃತ್ವ ವಹಿಸಿದ್ದಾರೆ. ಇದೀಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ರಾಯ್ಪುರದ ಶ್ರೀ ನಾರಾಯಣ ಆಸ್ಪತ್ರೆ ಮೂಲಗಳು ಹೇಳಿವೆ.
ಶನಿವಾರ ಬೆಳಗ್ಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್ ಈಗಾಗಲೇ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಯುಎನ್ಐ ಕೆಎಸ್ಆರ್ 2143
There is no row at position 0.