Wednesday, Jan 29 2020 | Time 13:34 Hrs(IST)
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
 • ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
 • ಇರ್ಫಾನ್ ಪಠಾಣ್ ಮೊದಲ ಓವರ್ ಹ್ಯಾಟ್ರಿಕ್ ಸಾಧನೆಗೆ ಇದೀಗ 14 ವರ್ಷ
 • ನಿರ್ಭಯಾ ಪ್ರಕರಣ, ಅಪರಾಧಿ ಮುಖೇಶ್ ಮನವಿ ತಿರಸ್ಕೃತ
Sports Share

ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ದ್ವಿಶತಕಕ್ಕೆ ಎಂಟು ವರ್ಷ

ನವದೆಹಲಿ, ಡಿ 8 (ಯುಎನ್‌ಐ) ಭಾರತ ತಂಡದ ಮಾಜಿ ಆರಂಭಿಕ ವಿರೇಂದ್ರ ಸೆಹ್ವಾಗ್‌ ಅವರ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಇದೀಗ ಎಂಟು ವರ್ಷಗಳು ತುಂಬಿವೆ.

2011ರ ಡಿಸೆಂಬರ್ 8 ರಂದು ವಿರೇಂದ್ರ ಸೆಹ್ವಾಗ್‌ ಅವರು ಇಂಧೋರ್‌ನ ಹೋಲ್ಕರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 219 ರನ್ ಸಿಡಿಸಿದ್ದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಾಡಿದ್ದರು.

41ರ ಪ್ರಾಯದ ಸೆಹ್ವಾಗ್ ಅವರ ಅಂದಿನ ಐತಿಹಾಸಿಕ ಇನಿಂಗ್ಸ್ ನಲ್ಲಿ 25 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಒಳಗೊಂಡಿದ್ದವು. ಸೆಹ್ವಾಗ್ ದ್ವಿಶತಕದ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 418 ರನ್‌ ಗಳಿಸಿತ್ತು. ಅಂತಿಮವಾಗಿ ಭಾರತ 153 ರನ್‌ ಗಳಿಂದ ಜಯ ಸಾಧಿಸಿತ್ತು.

ಸ್ಫೋಟಕ ಬ್ಯಾಟ್ಸ್‌ಮನ್ ಸೆಹ್ವಾಗ್ ಅವರ ಸ್ಮರಣೀಯ ಇನಿಂಗ್ಸ್ ಅನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. “2011ರ ಇಂದಿನ ದಿನ ವಿರೇಂದ್ರ ಸೆಹ್ವಾಗ್‌ ಪುರುಷರ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ್ದರು. ಇವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ಅಂದು ವಿಂಡೀಸ್‌ ವಿರುದ್ಧ 418/5 ಗಳಿಸಿತ್ತು. ಅಂತಿಮವಾಗಿ ಭಾರತ 153 ರನ್‌ ಗಳಿಂದ ಜಯ ಸಾಧಿಸಿತ್ತು,” ಎಂದು ಐಸಿಸಿ ಟ್ವೀಟ್ ಮಾಡಿ ಸೆಹ್ವಾಗ್‌ ದಾಖಲೆಯ ಇನಿಂಗ್ಸ್ ನೆನಪಿಸಿದೆ.

ಕ್ರಿಕೆಟ್‌ ವೃತ್ತಿ ಜೀವನದ ಸೆಹ್ವಾಗ್ 251 ಏಕದಿನ ಹಾಗೂ 104 ಟೆಸ್ಟ್ ಪಂದ್ಯಗಳಿಂದ ಕ್ರಮವಾಗಿ 8,273 ಹಾಗೂ 8,586 ರನ್ ಗಳಿಸಿದ್ದಾರೆ. ದೆಹಲಿ ಮಾಜಿ ಆಟಗಾರ ಟೆಸ್ಟ್‌ ಕ್ರಿಕೆಟ್‌ನಲ್ಲೂ ತ್ರಿಶತಕ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಏಕದಿನ ಮಾದರಿಯಲ್ಲ ಒಟ್ಟು ಎಂಟು ದ್ವಿಶತಕ ದಾಖಲಾಗಿದೆ. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌. 2008ರಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿದ್ದರು. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ವೃತ್ತಿ ಜೀವನದಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಿಟ್ಮನ್‌ ಮೊದಲ ದ್ವಿಶತಕ ಬಾರಿಸಿದ್ದರು. ನಂತರ, 2014 ಮತ್ತು 2017 ರಲ್ಲಿ ಶ್ರೀಲಂಕಾ ವಿರುದ್ಧ ಇನ್ನುಳಿದ ದ್ವಿಶತಕಗಳನ್ನು ಬಾರಿಸಿದ್ದರು.

ಯುಎನ್‌ಐ ಆರ್‌ ಕೆ 1114