Friday, Dec 6 2019 | Time 01:10 Hrs(IST)
Karnataka Share

ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಿ: ಪೊಲೀಸ್ ಆಯುಕ್ತರ ಕಟ್ಟಾದೇಶ

ಬೆಂಗಳೂರು, ನ 20 (ಯುಎನ್ಐ) ನಗರದಲ್ಲಿ ಎಲ್ಲೆ‌ ಮೀರಿ ನಡೆಯುತ್ತಿರುವ ಗಾಂಜಾ, ಮತ್ತಿತರ ಮಾದಕ ವಸ್ತುಗಳ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ನಗರ ಪೊಲೀಸರು ಆಯುಕ್ತ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ.
ಮಂಗಳವಾರ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿ ಇಬ್ಬರು ಬಲಿಯಾದ ಪ್ರಕರಣ ಹಿನ್ನೆಲೆಯಲ್ಲಿ ಇಂದು ಕರೆದಿದ್ದ ತುರ್ತು ಸಭೆಯಲ್ಲಿ ಗಂಜಾ, ಮಾದಕ ವಸ್ತು ಮಾರಾಟ ಮಾಡುವವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವಂತೆ ಆಯುಕ್ತ ಭಾಸ್ಕರ್ ಸೂಚನೆ ನೀಡಿದ್ದಾರೆ.
ಈ ಸಭೆಯಲ್ಲಿ ಎನ್​ಸಿಬಿ (ನ್ಯಾರ್ಕೋಟಿಕ್ ಕಂಟ್ರೋಲ್ ಬ್ಯೂರೋ), ಡಿಆರ್​​ಇ (ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜಿನ್ಸ್), ಆರ್​ಪಿಎಫ್, ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್ ಮೆಂಟ್, ಎಫ್ಆರ್​ಒ ಎಲ್ಲಾ ಇಲಾಖೆಗಳ ಜೊತೆಗೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತರು, ನಗರದಲ್ಲಿ ಡ್ರಗ್ ಪೆಡ್ಲರ್​​ಗಳನ್ನು ಮಟ್ಟಹಾಕುವ, ಡ್ರಗ್ ದಂಧೆಯನ್ನು ತಡೆಗಟ್ಟುವ ಕುರಿತು ಕುರಿತು ಚರ್ಚಿಸಿದರು.
ಮಾದಕ ವಸ್ತು ಮಾರಾಟಗಾರರು ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಯುವಕರನ್ನು ಕೇಂದ್ರಿಕರಿಸಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಮಾದಕ ವಸ್ತು ಮಾರಾಟ ನಿಯಂತ್ರಿಸಲು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಿ. ಗುಪ್ತದಳ ವಿಭಾಗವನ್ನು ಮತ್ತಷ್ಟು ಬಲಪಡಿಸಿ, ಮಾರು ವೇಷದಲ್ಲಿ ಹೋಗಿ ವ್ಯವಹಾರ ಕುದುರಿಸಿ ದಂಧೆ ಕೋರರನ್ನು ಮಟ್ಟ ಹಾಕಿ ಎಂದು ಆದೇಶ ನೀಡಿದ್ದಾರೆ.
ಯುಎನ್ಐ ಪಿಕೆ ವಿಎನ್ 1900
More News
ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

05 Dec 2019 | 8:49 PM

ಬೆಂಗಳೂರು, ಡಿ 5 [ಯುಎನ್ಐ] ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.

 Sharesee more..