Monday, Jun 1 2020 | Time 01:27 Hrs(IST)
Special Share

ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ

ಗಾಂಧಿನಗರ, ಮಾರ್ಚ್ 28 (ಯುಎನ್‌ಐ) ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನ ಸೋಂಕಿಗೆ ಮತ್ತೊಬ್ಬರು ಮೃತಪಟ್ಟಿದ್ದು ಈವರೆಗೆ ಮೃತರ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ, ಒಟ್ಟಾರೆ ಸೋಂಕಿತ ಪ್ರಕರಣಗಳು ಸಂಖ್ಯೆ ಈಗ 54 ಕ್ಕೆ ಮುಟ್ಟಿದೆ . .

ಅಧಿಕೃತ ಮೂಲಗಳ ಪ್ರಕಾರ, ಸರ್ಕಾರಿ ಎಸ್‌ವಿಪಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ.

ಸೋಂಕಿತರಲ್ಲಿ ಹೆಚ್ಚಿನವರು ವಿದೇಶದಿಂದ ಹಿಂದಿರುಗಿದವರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದವರೆ ಆಗಿದ್ದಾರೆ .

ಇಂದು ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ 19 ಡ್ಯಾಶ್‌ಬೋರ್ಡ್‌ನಿಂದ ಬಂದ ಮಾಹಿತಿಯ ಪ್ರಕಾರ ಒಟ್ಟು 1019 ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದ್ದು, ಈ ಪೈಕಿ 54 ಪ್ರಕರಣಗಳಲ್ಲಿ ಸೋಂಕು ಇರುವುದು ಖಚಿತವಾಗಿದೆ. ಈವರೆಗೆ , ನಾಲ್ಕು ಸಾವಿನ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಇನ್ನೂ 4 ಹೊಸ ಪ್ರಕರಣಗಳನ್ನು ಕಂಡ ಅಹಮದಾಬಾದ್‌ನಲ್ಲಿ ಗರಿಷ್ಠ 19 ಪ್ರಕರಣಗಳು ಖಚಿತವಾಗಿದೆ ಕಳೆದ 24 ಗಂಟೆಗಳಲ್ಲಿ ಸೂರತ್ ಯಾವುದೇ ಸುದ್ದಿ ಪ್ರಕರಣಗಳು ಗೋಚರವಾಗಿಲ್ಲ ರಾಜ್‌ಕೋಟ್ - 8 ವಡೋದರಾ - ಒಂದು ಹೊಸ ಪ್ರಕರಣದಾಖಲಾಗಿರುವುದೂ ಸೇರಿದಂತೆ ಒಟ್ಟು 9 ಪ್ರಕರಣಗಳು ವರದಿಯಾಗಿದೆ ರಾಜ್ಯಾದ್ಯಂತ ಒಟ್ಟು 19,340 ಜನರು 14 ದಿನಗಳ ಸಂಪರ್ಕತಡೆಗೆ ಒಳಪಡಿಸಲಾಗಿದೆ .
ಯುಎನ್ಐ ಕೆಎಸ್ಆರ್ 2149