Friday, Oct 30 2020 | Time 07:50 Hrs(IST)
National Share

ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿಸುತ್ತಿದ್ದಾರೆ; ರಾಹುಲ್

ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿಸುತ್ತಿದ್ದಾರೆ; ರಾಹುಲ್
ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿಸುತ್ತಿದ್ದಾರೆ; ರಾಹುಲ್

ನವದೆಹಲಿ, ಸೆ 20 (ಯುಎನ್ಐ) ಕೃಷಿ ಮಸೂದೆಗೆ ಸಂಬಂಧಿಸಿದ ಮಸೂದೆಗೆ ಅನುಮೋದನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರು ರೈತರನ್ನು ಉದ್ಯಮಿಗಳ ಸೇವಕಕರನ್ನಾಗಿಸಲು ಯತ್ನಿಸುತ್ತಿದ್ದಾರೆ. ಆದರೆ, ನಮ್ಮ ದೇಶ ಎಂದಿಗೂ ಅದಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರದ ಕಪ್ಪು ನೀತಿಯಿಂದ ಎಪಿಎಂಸಿ, ಕಿಸಾನ್‌ ಮಾರುಕಟ್ಟೆ ಅಂತ್ಯಗೊಂಡಾಗ ರೈತರು ಹೇಗೆ ಕನಿಷ್ಠ ಬೆಂಬಲ ದರ ಪಡೆಯುತ್ತಾರೆ? ಏಕೆ ಎಂಎಸ್‌ಪಿ ಖಾತರಿ ನೀಡುತ್ತಿಲ್ಲ? ಮೋದಿ ರೈತರನ್ನು ಉದ್ಯಮಿಗಳ ಸೇವಕರನ್ನಾಗಿ ಮಾಡುತ್ತಿದೆ. ಇದಕ್ಕೆ ದೇಶ ಎಂದಿಗೂ ಅವಕಾಶ ನೀಡಲಾಗದು ಎಂದಿದ್ದಾರೆ.

ಇದಕ್ಕೂ ಮುನ್ನ ರಾಹುಲ್, ರೈತರು ಮೋದಿ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿ ಅವರ ಹೇಳಿಕೆ ಮತ್ತು ಕ್ರಿಯೆಗಳು ಮೊದಲಿನಿಂದಲೂ ಭಿನ್ನವಾಗಿದೆ.ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ ಟಿ ನೀತಿ ಮತ್ತು ಡೀಸೆಲ್‌ ಮೇಲಿನ ತೆರಿಗೆಗಳು ಸಾಮಾನ್ಯ ಜನರಿಗೆ ಕಷ್ಟ ನೀಡಿದೆ. ಈ ಕಾಯ್ದೆ ಮೂಲಕ ಮೋದಿ ತಮ್ಮ ಸ್ನೇಹಿತರ ಕೃಷಿ ಆದಾಯವನ್ನು ಹೆಚ್ಚಿಸುತ್ತಾರೆ ಮತ್ತು ರರೈತರ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಾರೆ ಎಂದರು ರೈತರು ಅರಿತಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು.

ಯುಎನ್ಐ ಎಸ್ಎಚ್ 2011

More News
ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ನೀಡಬಲ್ಲದು; ರಾಹುಲ್‌

29 Oct 2020 | 8:43 PM

ನವದೆಹಲಿ, ಅ 29 (ಯುಎನ್ಐ) ಬಿಹಾರದ ಜನತೆಗೆ ಬದಲಾವಣೆ ಬೇಕು ಮತ್ತು ಮಹಾಮೈತ್ರಿ ಮಾತ್ರ ರಾಜ್ಯದ ಜನತೆಗೆ ಉತ್ತಮ ಭವಿಷ್ಯ ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ.

 Sharesee more..
ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣಕ್ಕಿದು ಸುಸಮಯ: ಉಪ ರಾಷ್ಟ್ರಪತಿ

29 Oct 2020 | 5:57 PM

ನವದೆಹಲಿ, ಅ 29 (ಯುಎನ್ಐ) ದೇಶದಲ್ಲಿ ಇನ್ನು ಮುಂದೆ ನಿರ್ಮಾಣವಾಗು ಹೊಸ ಕಟ್ಟಡಗಳನ್ನು ಕಡ್ಡಾಯವಾಗಿ ಹಸಿರು ಮತ್ತು ಪರಿಸರ ಸ್ನೇಹಿಯಾಗಿಸುವ ಸಮಯ ಬಂದಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

 Sharesee more..

ಒಂದು ಕೆಜಿ ಅಸ್ಸಾಂ ಚಹಾ 75,000 ರೂ ಗೆ ಮಾರಾಟ !

29 Oct 2020 | 5:51 PM

 Sharesee more..