Friday, Aug 7 2020 | Time 18:40 Hrs(IST)
 • ಗುರುಕುಲ ಶಿಕ್ಷಣ ನೆನಪಿಸುವ ವಿದ್ಯಾಗಮ : ಸಚಿವ ಸುರೇಶ್ ಕುಮಾರ್
 • ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್
 • ಕಾಂಗ್ರೆಸ್‌-ಚೀನಾ ಒಡಂಬಡಿಕೆ ವಿವಾದ; ವಿಚಾರಣೆ ನಡೆಸಲು ಸುಪ್ರೀಂ ನಕಾರ
 • ಅಮೆರಿಕಾ ವಾಣಿಜ್ಯೋದ್ಯಮಿಗಳ ಸಂಘಟನೆ ಪ್ರತಿನಿಧಿಗಳ ಜತೆ ಚೆರ್ಚೆ,ಚಿಕಿತ್ಸಾ ಅಧ್ಯಯನ ತರಬೇತಿಗೆ ಅಕಾಡೆಮಿ ಸ್ಥಾಪಿಸಿ : ಡಿಸಿಎಂ ಅಶ್ವತ್ಥ್ ನಾರಾಯಣ್
 • ಕೆಐಎಡಿಬಿಗೆ ಅಗತ್ಯ ಸರಕಾರಿ ಜಮೀನ ಹಸ್ತಾಂತರ ಕಾರ್ಯಕ್ಕೆ ವೇಗ ನೀಡಿ : ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌
 • ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಬಲ
 • ಲಾಕ್ ಡೌನ್ ಬಳಿಕ ಮೊದಲ ಬಾರಿ ಅಭ್ಯಾಸಕ್ಕಿಳಿದ ಸಿಂಧೂ
 • ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ರಾಜ್ಯದಲ್ಲಿ ವರುಣನ ಆರ್ಭಟ: ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ರೆಡ್ ಅಲರ್ಟ್ ಘೋಷಣೆ
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
National Share

ಮಾನವಕುಲಕ್ಕೆ ಯೋಗ ದೊಡ್ಡ ವರದಾನ- ಅರುಣಾಚಲ ಪ್ರದೇಶ ರಾಜ್ಯಪಾಲ ಮಿಶ್ರಾ

ಇಟಾನಗರ, ಜೂನ್ 20 (ಯುಎನ್‌ಐ) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮುನ್ನಾದಿನದಂದು ಜನರಿಗೆ ಶುಭಾಶಯ ಕೋರಿರುವ ಅರುಣಾಚಲ ಪ್ರದೇಶ ರಾಜ್ಯಪಾಲ ಬ್ರಿಗೇಡಿಯರ್ (ನಿವೃತ್ತ) ಬಿ ಡಿ ಮಿಶ್ರಾ, ಯೋಗಾಭ್ಯಾಸವು ಮಾನವಕುಲಕ್ಕೆ ದೊಡ್ಡ ವರದಾನವಾಗಿದೆ ಎಂದು ಹೇಳಿದ್ದಾರೆ.
‘ಯೋಗ ಮಾನವಕುಲಕ್ಕೆ ದೊಡ್ಡ ವರದಾನಗಳಲ್ಲೊಂದಾಗಿದೆ. ವಿವಿಧ ಯೋಗ ಭಂಗಿಗಳು ಮಾನವನ ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅಲ್ಲದೆ, ಅಂಗರಚನೆ ಮತ್ತು ಉತ್ತಮ ಶಾರೀರಿಕ ವ್ಯವಸ್ಥೆಗೆ ನೆರವಾಗುತ್ತದೆ. ಮಾತ್ರವಲ್ಲದೆ, ನೆಮ್ಮದಿಯ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.’ ಎಂದು ಅವರು ಜನರಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಅಧ್ಯಯನಗಳು ಮತ್ತು ಅನೇಕ ಯೋಗ ತಜ್ಞರ ಅನುಭವಗಳು ಜನರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸಿವೆ. ಅನೇಕ ದೈಹಿಕ ಮತ್ತು ದೀರ್ಘಕಾಲೀನ ಕಾಯಿಲೆಗಳನ್ನು ಪತ್ತೆ ಮಾಡಿ ಇದೀಗ ಯೋಗಾಭ್ಯಾಸಗಳಿಂದ ಗುಣಪಡಿಸಿರುವುದನ್ನು ತಜ್ಞರು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊವಿಡ್‍-19ರ ವಿರುದ್ಧ ಜಗತ್ತು ಹೋರಾಡುತ್ತಿರುವ ಸಮಯದಲ್ಲಿ 'ಸಂತೋಷದ ಜೀವನ' ನಡೆಸಲು ಯೋಗವು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಜನರು ಯೋಗಾಭ್ಯಾಸವನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಸಲಹೆ ಮಾಡಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 1742