Friday, Feb 28 2020 | Time 09:26 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಮುರಳಿ ಮನೋಹೋರ್ ಜೋಷಿ ಹುಟ್ಟುಹಬ್ಬ: ಪ್ರಧಾನಿ ಶುಭಾಶಯ

ಮುರಳಿ ಮನೋಹೋರ್ ಜೋಷಿ  ಹುಟ್ಟುಹಬ್ಬ:  ಪ್ರಧಾನಿ ಶುಭಾಶಯ
ಮುರಳಿ ಮನೋಹೋರ್ ಜೋಷಿ ಹುಟ್ಟುಹಬ್ಬ: ಪ್ರಧಾನಿ ಶುಭಾಶಯ

ನವದೆಹಲಿ, ಜನವರಿ 5 (ಯುಎನ್‌ಐ) ಬಿಜೆಪಿಯ ಹಿರಿಯ ಮುಖಂಡ ಡಾ.ಮುರಳಿ ಮನೋಹೋರ್ ಜೋಷಿ ಅವರ ಹುಟ್ಟುಹಬ್ದದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

"ಡಾ. ಜೋಷಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ ನನ್ನಂತೆಯೇ ಹಲವಾರು ಕಾರ್ಯಕರ್ತರು ಅವರಿಂದ ತುಂಬಾ ಕಲಿತಿದ್ದಾರೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರವು ಅತ್ಯಂತ ಮೌಲ್ಯಯುತವಾಗಿತ್ತು ಡಾ. ಜೋಶಿಯವರ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಜೋಷಿ ಅವರು ರಾಜಕೀಯ ಜೀವನದಲ್ಲಿ ,ಸುದೀರ್ಘ ವರ್ಷಗಳ ಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಾಗ ಮತ್ತು ರಾಷ್ಟ್ರದ ಪ್ರಗತಿ ಹೆಚ್ಚಿಸುವಲ್ಲಿ ಅವರ ಪಾತ್ರ ಅಗಾಧವಾಗಿದೆ ಎಂದಿದ್ದಾರೆ.

ಜನವರಿ 5, 1934 ರಂದು ಜನಿಸಿದ 86 ವರ್ಷದ ಹಿರಿಯ ಬಿಜೆಪಿ ನಾಯಕ ಜೋಷಿಯವರು ಕೆಲಕಾಲ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

1996 ರಲ್ಲಿ ವಾಜಪೇಯಿ ಸರ್ಕಾರ ಮತ್ತು ನಂತರ 1998 ಮತ್ತು 2004 ರ ನಡುವೆ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದರು.

ಡಾ. ಜೋಷಿಗೆ 2017 ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಲಾಯಿತು. ಅವರು 2009 ಮತ್ತು 2014 ರ ನಡುವೆ ವಾರಣಾಸಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮತ್ತು ನಂತರ ಪ್ರಧಾನಿ ಮೋದಿ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಯುಎನ್ಐ ಕೆಎಸ್ಆರ್ 1237