Monday, Jun 1 2020 | Time 01:59 Hrs(IST)
National Share

ಮಾರಿಷಸ್ ಗೆ ಭಾರತದ ವೈದ್ಯಕೀಯ ತಂಡ : ಜುಗನ್ನಾಥ್ ಕೃತಜ್ಞತೆ ಸಲ್ಲಿಕೆ

ನವದೆಹಲಿ, ಮೇ 23 (ಯುಎನ್ಐ) ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗನ್ನಾಥ್ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ದೂರವಾಣಿ ಮೂಲಕ ಮಾತುಕತೆ ನಡೆಸಿ ಮಾರಿಷಸ್ ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಭಾರತ ಮತ್ತು ಮಾರಿಷಸ್ ಸಂಸ್ಕೃತಿ ಮತ್ತು ಮೌಲ್ಯಗಳ ವಿಶೇಷ ಬಂಧವನ್ನು ಹಂಚಿಕೊಳ್ಳುತ್ತದೆ. ಮಾರಿಷಸ್ ನ ಸಹೋದರ/ರಿಯ ಸಂಕಷ್ಟದ ಸಮಯದಲ್ಲಿ ಭಾರತೀಯರು ಅವರ ಜೊತೆ ನಿಲ್ಲಲಿದ್ದಾರೆ ಎಂದಿದ್ದಾರೆ.

ಮಾರಿಷಸ್ ಕೈಗೊಂಡಿರುವ ಕ್ರಮಗಳನ್ನು ವಿವರವಾಗಿ ಬರೆದು ಇತರ ದೇಶಗಳಿಗೆ ಅದರಲ್ಲೂ ದ್ವೀಪ ರಾಷ್ಟ್ರಗಳಿಗೆ ನೀಡಿದರೆ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸಹಕಾರಿಯಾಗಲಿದೆ ಎಂದು ಮೋದಿ ಸಲಹೆ ನೀಡಿದ್ದಾರೆ.

ಚಂಡಮಾರುತ ಅಂಫಾನ್ ನಿಂದ ಮೃತಪಟ್ಟವರಿಗೆ ಮಾರಿಷಸ್ ಪ್ರಧಾನಿ ಜುಗನ್ನಾತ್ ಸಂತಾಪ ಸೂಚಿಸಿದ್ದಾರೆ. ಆಪರೇಷನ್ ಸಾಗರ್ ಭಾಗವಾಗಿ ಐ ಎನ್ ಎಸ್ ಕೇಸರಿ ಮೂಲಕ ಮಾರಿಷಸ್ ಗೆ ಔಷಧಗಳು ಮತ್ತು 14 ಸದಸ್ಯರ ಭಾರತೀಯರ ವೈದ್ಯರ ತಂಡವನ್ನು ಕಳುಹಿಸಿಕೊಟ್ಟದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಜುಗನ್ನಾಥ್ ಧನ್ಯವಾದ ಅರ್ಪಿಸಿದ್ದಾರೆ.

ಯುಎನ್ಐ ಜಿಎಸ್ಆರ್ 2251
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..