Wednesday, Feb 26 2020 | Time 10:42 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
Flash Share

ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ
ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

ಬೀಜಿಂಗ್, ಜ ೪( ಯುಎನ್‌ಐ) ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವನ್ನಪ್ಪಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಾರಕಸ್ತರಕ್ಕೇರಿದೆ.

ಈ ಹಿನ್ನಲೆಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಚೀನಾ ಮಹತ್ವದ ಸಲಹೆ ನೀಡಿದೆ. ಸೇನಾ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಹಿತ ವಚನ ನೀಡಿದೆ. ಇರಾನ್ ವಿದೇಶಾಂಗ ಸಚಿವರೊಂದಿಗೆ ಶನಿವಾರ ನಡೆಸಿದ ದೂರವಾಣಿ ಮಾತುಕತೆ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವರು ಈ ಸಲಹೆ ನೀಡಿದ್ದಾರೆ.

ಚರ್ಚೆ, ಸಂವಾದ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವರು ಅಮೆರಿಕಾಗೆ ಸೂಚನೆ ನೀಡಿದ್ದಾರೆ.

ಅಮೆರಿಕ ಕೈಗೊಂಡಿರುವ ಸೇನಾ ಕಾರ್ಯಚರಣೆ ಕ್ರಮ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ ಎಂದು ಚೈನಾ ಸಚಿವ ವಾಂಗ್ ಇರಾನ್ ಸಚಿವರೊಂದಿಗಿನ ಮಾತುಕತೆಯ ವೇಳೆ ಅಭಿಪ್ರಾಪಟ್ಟಿದ್ದಾರೆ ಎಂದು ಚೀನಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸೇನಾ ಶಕ್ತಿ ಬಳಕೆಗೆ ಯಾವುದೇ ಜಾಗವಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ. ಅಮೆರಿಕಾ ದಾಳಿಗೆ ಭೀಕರವಾದ ಪ್ರತೀಕಾರ ಕೈಗೊಳ್ಳುವುದಾಗಿ ಇರಾನ್ ಘೋಷಿಸಿರುವ ಹಿನ್ನೆಲೆಯಲ್ಲಿ ಚೀನಾ ಹೇಳಿಕೆ ಮಹತ್ವ ಪಡೆದುಕೊಂಡಿವೆ.

ಯುಎನ್‌ಐ ಕೆವಿಆರ್ ೨೦೫೧

More News
ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

ಮಿಲಿಟರಿ ಶಕ್ತಿ ದುರುಪಯೋಗ ಬೇಡ; ಅಮೆರಿಕಾಗೆ ಚೀನಾ ಸಲಹೆ

04 Jan 2020 | 10:12 PM

ಬೀಜಿಂಗ್, ಜ ೪( ಯುಎನ್‌ಐ) ಅಮೆರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಜನರಲ್ ಸಾವನ್ನಪ್ಪಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಾರಕಸ್ತರಕ್ಕೇರಿದೆ.

 Sharesee more..
ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ  !

ಅದೊಂದು ದಿನದಲ್ಲಿ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ !

03 Jan 2020 | 4:58 PM

ನ್ಯೂಯಾರ್ಕ್, ಜ 3(ಯುಎನ್‌ಐ) ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

 Sharesee more..
ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

ಆರ್ ಸಿಇಪಿ ಒಪ್ಪಂದಕ್ಕೆ ಒಳಪಡಲು ಭಾರತ ನಕಾರ, ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿರಿಸಿದ ಮೋದಿ

04 Nov 2019 | 8:00 PM

ಬ್ಯಾಂಕಾಕ್, ನ 4 (ಯುಎನ್ಐ) ಬ್ಯಾಂಕಾಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ , ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ ಸಿಇಪಿ) ಒಪ್ಪಂದಕ್ಕೆ ಒಳಪಡಲು ನಿರಾಕರಿಸಿದ್ದಾರೆ.

 Sharesee more..