Friday, Oct 30 2020 | Time 06:55 Hrs(IST)
Sports Share

ಮೇಲಿನ ಕ್ರಮಾಂಕದಲ್ಲಿ ನನ್ನನ್ನು ಆಡಿಸಿದ್ದು ಅಚ್ಚರಿ ತಂದಿತ್ತು: ಸ್ಯಾಮ್ ಕರ್ರನ್‌

ನವದೆಹಲಿ, ಸೆ 20 (ಯುಎನ್‌ಐ) ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ರಾತ್ರಿಯಲ್ಲಿ ಎರಡು ಮಾಜಿ ಚಾಂಪಿಯನ್‌ ತಂಡಗಳು ಅಬು ಧಾಬಿಯಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್, 163 ರನ್‌ಗಳನ್ನು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗುರಿ ನೀಡಿತ್ತು. ಅಂಬಾಟಿ ರಾಯುಡು ಹಾಗೂ ಫಾಫ್‌ ಡು'ಪ್ಲೆಸಿಸ್‌ ಅವರ ಬ್ಯಾಟಿಂಗ್‌ ನೆರವಿನಿಂದ ಸಿಎಸ್‌ಕೆ 5 ವಿಕೆಟ್‌ಗಳ ಜಯ ಸಾಧಿಸಿತ್ತು.
ಆದರೆ, ಚೆನ್ನೈ ಫ್ರಾಂಚೈಸಿ ಬ್ಯಾಟಿಂಗ್‌ ಮಾಡುವ ವೇಳೆ ಎಂಎಸ್‌ ಧೋನಿ ಹಲವು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಒಂದು ಹಂತದಲ್ಲಿ 17 ಎಸೆತಗಳಲ್ಲಿ 27 ರನ್‌ಗಳ ಅಗತ್ಯವಿದ್ದಾಗ ರವೀಂದ್ರ ಜಡೇಜಾ, ಕೃನಾಲ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಎಂಎಸ್‌ ಧೋನಿ ಅಥವಾ ಕೇದಾರ್ ಜಾಧವ್‌ ಕ್ರೀಸ್‌ಗೆ ಆಗಮಿಸಲಿದ್ದಾರೆಂದೇ ನಿರೀಕ್ಷಿಸಲಾಗಿತ್ತು.
ಆದರೆ, ನಾಯಕ ಎಂಎಸ್‌ ಧೋನಿ, ಇಂಗ್ಲೆಂಡ್‌ ಯುವ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ ಅವರನ್ನು ತಮ್ಮ ಬದಲಿಗೆ ಕಳುಹಿಸಿದ್ದರು. ಅದರಂತೆ ಕೇವಲ ಆರು ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 18 ರನ್‌ಗಳನ್ನು ಗಳಿಸುವ ಮೂಲಕ ಧೋನಿ ನಿರ್ಧಾರವನ್ನು ಕರ್ರನ್‌ ಸಮರ್ಥಿಸಿಕೊಂಡರು. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಗೆಲುವಿನ ಸಮೀಪ ತಂದರು.
ಜಸ್ಪ್ರಿತ್‌ ಬುಮ್ರಾ ಅವರ ಬೌಲಿಂಗ್‌ನಲ್ಲಿ ಎರಡನೇ ಕೊನೆಯ ಓವರ್‌ನಲ್ಲಿ ಸ್ಯಾಮ್‌ ಕರ್ರನ್‌ ಔಟ್‌ ಆದರು. ಆಗ ತಂಡಕ್ಕೆ 10 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿತ್ತು. ಎಂಎಸ್ ಧೋನಿ ಹಾಗೂ ಫಾಫ್‌ ಡುಪ್ಲೆಸಿಸ್‌ ಜೋಡಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆ ತಂಡವನ್ನು ಜಯದ ಗಡಿ ದಾಟಿಸಿತು. ಸ್ಯಾಮ್‌ ಕರ್ರನ್‌ ಅವರನ್ನು ತನ್ನ ಸ್ಥಾನದಲ್ಲಿ ಕಣಕ್ಕೆ ಇಳಿಸಲು ಎಂಎಸ್‌ ಧೋನಿಗೆ ಏನು ಪ್ರೇರೇಪಿಸಿತು? ನಾಯಕ ಎಂಎಸ್‌ ಧೋನಿಯ ನಿರ್ಧಾರದಿಂದ ಯುವ ಆಟಗಾರ ಆಶ್ಚರ್ಯಗೊಂಡಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
"ತುಂಬಾ ವಿಭಿನ್ನವಾಗಿತ್ತು. ಇಂಗ್ಲೆಂಡ್‌ ತಂಡದಲ್ಲಿ ನನ್ನನ್ನು ಬಬಲ್‌ ಮಾಡಲು ಬಳಸಲಾಗುತ್ತದೆ. ಆದರೆ ನೀವು ಐಪಿಎಲ್‌ನಲ್ಲಿ ದೊಡ್ಡ ಜನಸಂದಣಿಯನ್ನು ನೋಡುವ ಅಭ್ಯಾಸವನ್ನು ಹೊಂದಿದ್ದೀರಿ, ಆದರೆ ಈ ಬಾರಿ ಇದು ವಿಭಿನ್ನವಾಗಿತ್ತು. ಒಂದು ದಿನದ ಮೊದಲು ಇಲ್ಲಿಗೆ ಬಂದಿದ್ದರಿಂದ, ಸಾಕಷ್ಟು ಆಟಗಾರರನ್ನು ಮಾತನಾಡಿಸಲು ಆಗಲಿಲ್ಲ. ಸೆ.19 ರಂದು ನೇರವಾಗಿ ಬಸ್‌ಗೆ ಹತ್ತಿಕೊಂಡೆ. ಅದು ಒಳ್ಳೆಯ ಅಂಶ," ಎಂದು ಸ್ಯಾಮ್‌ ಕರ್ರನ್‌ ತಿಳಿಸಿದರು.
"ನಾನು ಆ ಕ್ರಮಾಂಕದಲ್ಲಿ ಆಡಲು ತೆರಳಿದ್ದು ತುಂಬಾ ಆಶ್ಚರ್ಯ ಉಂಟು ಮಾಡಿತ್ತು. ಎಂಎಸ್‌ ಧೋನಿ ಪ್ರತಿಭಾವಂತರಾಗಿದ್ದು, ನನ್ನನ್ನು ಇಳಿಸಲು ಏನೂ ಒಂದು ಯೋಚಿಸಿರುತ್ತಾರೆ. 18ನೇ ಓವರ್‌ ಅನ್ನು ನಾವು ಗುರಿ ಇಟ್ಟುಕೊಂಡಿದ್ದೆವು. ಕೆಲವೊಮ್ಮೆ ಇದು ಸಕಾರವಾಗುತ್ತದೆ, ಇಲ್ಲವಾದಲ್ಲಿ ಆಗುವುದಿಲ್ಲ," ಎಂದು ಪಂದ್ಯದ ಬಳಿಕ ಯುವ ಆಲ್‌ರೌಂಡರ್ ತಿಳಿಸಿದ್ದರು.
ಸ್ಯಾಮ್ ಕರ್ರನ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ತಂಡಕ್ಕೆ ಆಸರೆಯಾಗಿದ್ದರು. ನಾಲ್ಕು ಓವರ್‌ಗಳಲ್ಲಿ ಒಂದು ವಿಕೆಟ್‌ ಪಡೆದು 28 ರನ್‌ಗಳನ್ನು ನೀಡಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್ ಸೆ.22 ರಂದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆಡಲಿದೆ.
ಯುಎನ್‌ಐ ಆರ್‌ಕೆ 2157
More News

ಡಿಡಿಸಿಎ ಸಭೆ ಡಿಸೆಂಬರ್ ವರೆಗೆ ಮುಂದೂಡಿಕೆ

29 Oct 2020 | 10:50 PM

 Sharesee more..
ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

29 Oct 2020 | 9:06 PM

ಅಬುಧಾಬಿ, ಅ 29 (ಯುಎನ್‌ಐ) ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಸೋಲು ಅನುಭವಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬೌಲರ್‌ಗಳನ್ನು ಹೊಗಳಿದ್ದಾರೆ.

 Sharesee more..