Friday, Sep 25 2020 | Time 16:28 Hrs(IST)
 • ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯ ಆಸೆ ಇದೇ !
 • ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಹುನ್ನಾರ : ರಾಹುಲ್
 • ಎಸ್‌ಪಿಬಿ ನಮ್ಮ ಮನಸ್ಸಿನಲ್ಲಿಯೇ ಉಳಿಯಲಿದ್ದಾರೆ; ಅಮಿತ್‌ ಶಾ
 • ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
 • ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ
 • ಆರ್ಥಿಕ ಹೊಣೆಗಾರಿಕೆ ವಿಧೇಯಕದ ಮೇಲೆ ಮಾತನಾಡಲು ಅವಕಾಶ ಕೋರಿ ಜೆಡಿಎಸ್ ಶಾಸಕರಿಂದ ಧರಣಿ
 • ಡಾ ಎಸ್ ಪಿ ಬಾಲಸುಬ್ರಮಣ್ಯಂ ಬದುಕನ್ನೇ ಬದಲಿಸಿದ್ದ ‘ಶಂಕರಾಭರಣಂ’ !
 • ಪ್ರಿಯಾಂಕ ಖರ್ಗೆಗೆ ಕರೋನಾ ಬಗ್ಗೆ ಸಚಿವರ ಕಳವಳ : ವಿಧಾನ ಸಭೆಯಲ್ಲಿ ಪ್ರತಿಧ್ವನಿ
 • ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
 • ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ದಿವಾಳಿಯಾಗಿಸಬೇಡಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
 • ಪರಿಷತ್ ನಲ್ಲಿ ಹಾರಾಡಿದ ಪಕ್ಷಿಗಳ ಹೆಸರು ; ಕಡತದಿಂದ ಹೆಸರು ತೆಗೆಸಿ ಸಭಾಪತಿ ರೂಲಿಂಗ್
 • ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
 • ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
 • ಅನಿಲ್‌ ಕುಂಬ್ಳೆ ನೀಡಿದ್ದ ಬೆಂಬಲವನ್ನು ಸ್ಮರಿಸಿದ ಪಂಜಾಬ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌
 • ಕರೋನ ಲಸಿಕೆ, ಅಕ್ಟೋಬರ್ ನಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ
Entertainment Share

ಮಾಸ್ಟರ್ ಆನಂದ್ `ಹಗಲು ಕನಸು’. .ಅಶ್ವಿನ್ ಹಾಸನ್, ಸನಿಹಾ ಯಾದವ್ ಸೊಗಸು

ಮಾಸ್ಟರ್ ಆನಂದ್ `ಹಗಲು ಕನಸು’. .ಅಶ್ವಿನ್ ಹಾಸನ್, ಸನಿಹಾ ಯಾದವ್ ಸೊಗಸು
ಮಾಸ್ಟರ್ ಆನಂದ್ `ಹಗಲು ಕನಸು’. .ಅಶ್ವಿನ್ ಹಾಸನ್, ಸನಿಹಾ ಯಾದವ್ ಸೊಗಸು

ಬೆಂಗಳೂರು, ಡಿ ೦೬ (ಯುಎನ್‌ಐ) ಸದಭಿರುಚಿಯ ಚಿತ್ರಗಳಿಗಾಗಿ ಜನಪ್ರಿಯರಾಗಿರುವ ಖ್ಯಾತ ನಿರ್ದೇಶಕ ದಿನೇಶ್‌ಬಾಬು ಸಾರಥ್ಯದಲ್ಲಿ ’ಹಗಲು ಕನಸು’ ಚಿತ್ರ ಬಿಡುಗಡೆಯಾಗಿದೆ

ಯಾವುದೇ ಕೆಲಸವಿಲ್ಲದೆ ಮನೆಯಲ್ಲೇ ಕುಳಿತು ಹಗಲು ಕನಸು ಕಾಣುವ ಕೋಟ್ಯಧಿಪತಿಯ ಮಗ. . . ಇದ್ದಕ್ಕಿದ್ದಂತೆ ಆತನ ಮನೆಗೆ ಬರುವ ಹೆಣ್ಣು. . . ಆನಂತರ ನಡೆಯುವ ಘಟನೆಗಳು ಹಾಸ್ಯಭರಿತ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದಲ್ಲಿ ಸಾಗುತ್ತದೆ

ಚಿತ್ರದ ಪೂರ್ವ ಪ್ರದರ್ಶನದ ಸಂದರ್ಭದಲ್ಲಿ ಯುಎನ್‌ಐ ಕನ್ನಡ ಸುದ್ದಿಸಂಸ್ಥೆಯೊಂದಿಗೆ ’ಹಗಲು ಕನಸು’ ಚಿತ್ರದ ಕುರಿತು ಚಿತ್ರದ ನಾಯಕ ಮಾಸ್ಟರ್ ಆನಂದ್, ನಾಯಕಿ ಸನಿಹಾ ಯಾದವ್ ಹಾಗೂ ನಟ ಅಶ್ವಿನ್ ಹಾಸನ್ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ. . .

ಮಾಸ್ಟರ್ ಆನಂದ್, ಸ್ಯಾಂಡಲ್‌ವುಡ್‌ನ ಬೆಳ್ಳಿತೆರೆಯ ಮೆಲೆ ಬಹುದಿನಗಳ ನಂತರ ಒಂದೊಳ್ಳೆ ಕೌಟುಂಬಿಕ, ಹಾಸ್ಯಭರಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬಿಡುಗಡೆಯಾಗಿದೆ ಕುಟುಂಬದ ಎಲ್ಲ ಸದಸ್ಯರೂ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರ ಹಗಲು ಗನಸು ಪ್ರೀಮಿಯರ್ ಶೋ ವೀಕ್ಷಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ತಮ್ಮ ಪಾತ್ರದ ಬಗ್ಗೆ ವಿವರಿಸಿದ ಆನಂದ್, ಹಗಲು ಕನಸು’ ವೀಕೆಂಡ್‌ನಲ್ಲಿ ನಡೆಯುವ ಘಟನೆಯೊಂದನ್ನು ಆಧರಿಸಿದೆ ಮನೆಯವರೆಲ್ಲ ಫಂಕ್ಷನ್‌ಗೆ ಹೋದ ಸಂದರ್ಭದಲ್ಲಿ ಕಥಾನಾಯಕ ಒಬ್ಬನೇ ಮನೆಯಲ್ಲಿದ್ದಾಗ ಸುಂದರಿ ಯುವತಿಯೊಬ್ಬಳ ಎಂಟ್ರಿಯಾಗುತ್ತದೆ ಆಕೆ ಮನೆಗೆ ಬಂದಿದ್ದೇಕೆ ಎಂಬುದೇ ಚಿತ್ರದ ತಿರುಳು ಸಿನಿಮಾದಲ್ಲಿ ನನಗೊಂದು ಡ್ಯುಯೆಟ್ ಸಾಂಗ್ ಇದೆ ಎಂದು ಹೇಳಿದರು

ಅಚ್ಚಕನ್ನಡತಿ, ಬೆಂಗಳೂರು ಹುಡುಗಿ ಸನಿಹಾ ಯಾದವ್, "ಹಗಲು ಕನಸು ನನ್ನ ಮೊದಲ ಚಿತ್ರ ಕೋಟ್ಯಧಿಪತಿಯ ಮನೆಗೆ ಅಚಾನಕ್ಕಾಗಿ ಬಂದು ಮನೆಯ ಎಲ್ಲ ಸದಸ್ಯರನ್ನು ಹೇಗೆ ತನ್ನ ಮುಷ್ಟಿಯಲ್ಲಿಟ್ಟುಕೊಂಡು ಆಟವಾಡುವ ಯುವತಿಯ ಪಾತ್ರ" ಎಂದು ತಿಳಿಸಿದರು

ಫೇಸ್‌ಬುಕ್‌ನಲ್ಲಿ ದಿನೇಶ್ ಬಾಬು ಅವರಿಗೊಂದು ಮೆಸೇಜ್ ಕಳುಹಿಸಿದ್ದೆ ಅಚ್ಚರಿಯೆಂಬಂತೆ ಕಚೇರಿಗೆ ಬಂದು ಭೇಟಿ ಮಾಡುವಂತೆ ಪ್ರತಿಕ್ರಿಯೆ ಬಂತು.. . .ಕಥೆ ಇಷ್ಟವಾಯ್ತು . . . ಹೀಗೆ ಚಿತ್ರಕ್ಕೆ ಆಯ್ಕೆಯಾದೆ" ಎಂದರು.

ಚಿತ್ರ ಪ್ರಮುಖ ಪಾತ್ರಧಾರಿಗಳಲ್ಲೊಬ್ಬರಾದ ಅಶ್ವಿನ್ ಹಾಸನ್ ಕೋಟ್ಯಧಿಪತಿಯ ಎರಡನೆ ಅಳಿಯನ ಪಾತ್ರ ನನ್ನದು ಸದಾ ದುಡ್ಡಿಗೆ ಹಪಹಪಿಸುವ ವ್ಯಕ್ತಿ ನಾಯಕಿಯ ಕೈಯಲ್ಲಿ ಹೇಗೆ ಸಿಲುಕುತ್ತೇನೆ ಎಂಬುದು ಸಸ್ಪೆನ್ಸ್ ಎಂದು ವಿವರಿಸಿದರು

ದಿನೇಶ್ ಬಾಬು ಅನುಭವಿ ನಿರ್ದೇಶಕ ಇನ್ಫಮೇಟಿವ್ ಐನ್‌ಸೈಕ್ಲೋಪಿಡಿಯಾ ಇದ್ದಂತೆ ಇದರ ಜತೆಗೆ ಮಾಸ್ಟರ್ ಆನಂದ್ ನನ್ನ ಚೈಲ್ಡ್‌ಹುಡ್ ಐಕಾನ್, . . ಹೀಗಾಗಿ ಅವಕಾಶ ದೊರಕಿದ ತಕ್ಷಣ ಒಪ್ಪಿಕೊಂಡೆ ಎಂದರು

ಮಾಸ್ಟರ್ ಆನಂದ್ ಕಿರುತೆರೆಯ ಖಾಸಗಿ ಚಾನೆಲ್ ಒಂದರಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದುದ, ಬಿಸಿ ಷೆಡ್ಯೂಲ್ ನಡುವೆ ತಮಗಿಷ್ಟವಾದ ಕಥೆ ದೊರೆತಾಗ ಆಯ್ದ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ

ಇನ್ನು ನಾಯಕಿ ಸನಿಹಾ ಯಾದವ್ ಕೈಯಲ್ಲೂ ’ವಿಷ್ಣುಪ್ರಿಯಾ’ ಸೇರಿದಂತೆ ಹಲವು ಚಿತ್ರಗಳಿವೆ

ವಿಶಿಷ್ಟ ಧ್ವನಿ ಹೊಂದಿರುವ ಅಶ್ವಿನ್ ಹಾಸನ್ ನಾಯಕ ಹಾಗೂ ಸುಂದರ ಖಳನಾಯಕನಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ ಎನ್ನಬಹುದು.

ಯುಎನ್‌ಐ ಎಸ್‌ಎ ವಿಎನ್ ೧೭೫೪

More News
ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್

ಎಸ್‍ಪಿಬಿ ಹಾಡುಗಳು ನನಗೆ ಸ್ಪೆಷಲ್: ಸಲ್ಮಾನ್ ಖಾನ್

25 Sep 2020 | 3:36 PM

ಮುಂಬೈ, ಸೆ 25 (ಯುಎನ್‍ಐ) ಮೇರು ಗಾಯಕ ಎಸ್‍ ಪಿ ಬಾಲಸುಬ್ರಹ್ಮಣ್ಯ ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಹಾಡುಗಳ ಮೂಲಕ ಮೋಡಿ ಮಾಡಿದವರು.

 Sharesee more..
ಗಾನಗಂಧರ್ವ ಎಸ್ ಪಿ ಬಿ ಇನ್ನಿಲ್ಲ

ಗಾನಗಂಧರ್ವ ಎಸ್ ಪಿ ಬಿ ಇನ್ನಿಲ್ಲ

25 Sep 2020 | 2:26 PM

ಚೆನ್ನೈ, ಸೆ 25 (ಯುಎನ್ಐ) ಖ್ಯಾತ ಹಿನ್ನೆಲೆ ಗಾಯಕ, ಗಾನ ಗಾರುಡಿ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆ, ಕೊರೋನಾ ಸೋಂಕಿನಿಂದಾಗಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.

 Sharesee more..