Monday, Jun 1 2020 | Time 00:30 Hrs(IST)
Karnataka Share

ಮೈಸೂರು ಮೃಗಾಲಯ ತೆರೆಯಲು ಸಿದ್ಧ; ಅನುಮತಿಯ ನಿರೀಕ್ಷೆ

ಮೈಸೂರು, ಮೇ 23 (ಯುಎನ್ಐ) ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಶತಮಾನದ ಹಿಂದಿನ ಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯ ಸಾರ್ವಜನಿಕರಿಗಾಗಿ ತೆರೆಯಲು ಸಿದ್ಧವಾಗಿದ್ದು, ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ರಾಜ್ಯದ 9 ಪ್ರಾಣಿ ಸಂಗ್ರಹಾಲಯಗಳನ್ನು ತೆರೆಯಲು ಅನುಮತಿ ಕೋರಿ ರಾಜ್ಯ ಸರ್ಕಾರ ಕರ್ನಾಟಕ ವನ್ಯಜೀವಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ.
ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ಮುಚ್ಚಲಾಗಿತ್ತು. ಬೇಸಿಗೆ ಕಾಲದಲ್ಲಿ ಮೃಗಾಲಯಗಳಿಗೆ ಬೀಗ ಹಾಕಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿತ್ತು.
ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಅಜಿತ್ ಎಂ ಕುಲಕರ್ಣಿ, "ನಾವು ಮೃಗಾಲಯವನ್ನು ಸಾರ್ವಜನಿಕರಿಗೆ ತೆರೆಯಲು ಸಿದ್ಧರಿದ್ದು, ಎಲ್ಲಾ ನಿಯಮಗಳ ಪಾಲನೆ ಮಾಡಲು ಯೋಜನೆ ರೂಪಿಸಲಾಗಿದೆ" ಎಂದಿದ್ದಾರೆ.
ಯುಎನ್ಐ ಎಸ್ಎಚ್ 2121