Friday, Dec 6 2019 | Time 01:10 Hrs(IST)
Special Share

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ತೀರ್ಮಾನದತ್ತ ಎಲ್ಲರ ಚಿತ್ತ

ಲಕ್ನೋ, ನ 11 (ಯುಎನ್ಐ) ಅಯೋಧ್ಯೆಯ ರಾಮ ಜನ್ಮ ಮಂದಿರ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಸಾಧಕ ಬಾಧಕಗಳನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಮ್ ಪಿ ಎಲ್ ಬಿ) ಇದೇ 17 ರಂದು ಸಭೆ ಸೇರಿ ಚರ್ಚಿಸಲಿದೆ.

ಮಂಡಳಿಯ ಸಭೆಯ ನ 17 ರಂದು ನಡೆಯುವುದು ಖಚಿತ ಎಂದು ಮಂಡಳಿಯ ಕಾರ್ಯಕಾರಿ ಸದಸ್ಯ ಮೌಲಾನಾ ಖಲೀದ್ ರಶೀದ್ ಫಿರಾಂಗಿ ಮಹಾಲಿ ಸೋಮವಾರ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಮಂಡಳಿಯ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲರು ಸಹ ಈ ಸಭೆಯಲ್ಲಿ ಭಾಗವಹಿಸಿ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಇದರ ಜೊತೆ ಎಐಎಮ್ಐಎಮ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಹಿರಿಯ ವಕೀಲರೂ ಆದ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕ ಝಪರ್ಯಾಬ್ ಜಿಲಾನಿ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೇ, ಬೇಡವೇ ? ಅದೇ ರೀತಿ ಉತ್ತರಪ್ರದೇಶದ ಸರ್ಕಾರದಿಂದ ಐದು ಎಕರೆ ಜಮೀನು ಪಡೆಯಬೇಕೇ, ಬೇಡವೇ ಎಂಬ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಿದೆ.
ಈಗಾಗಲೇ ಸುನ್ನಿ ವಕ್ಫ್ ಮಂಡಳಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟದೆ.

ಯುಎನ್ಐ ಜಿಎಸ್ಆರ್ 2050
More News
ಜಯಲಲಿತಾ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

ಜಯಲಲಿತಾ ಪುಣ್ಯತಿಥಿ: ಎಐಎಡಿಎಂಕೆ ಮೌನ ಮೆರವಣಿಗೆ

05 Dec 2019 | 9:29 PM

ಚೆನ್ನೈ, ಡಿ ೦೫ (ಯುಎನ್‌ಐ) ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಮೂರನೇ ವರ್ಷದ ಪುಣ್ಯತಿಥಿಯನ್ನು ಗುರುವಾರ ಆಚರಿಸಲಾಗಿದೆ

 Sharesee more..
ಈರುಳ್ಳಿ ಬೆಲೆ ಏರಿಕೆ ವಿರುದ್ದ  ಕಾಂಗ್ರೆಸ್ ಸಂಸದರ ಪ್ರತಿಭಟನೆಯಲ್ಲಿ  ಪಾಲ್ಗೊಂಡ  ಪಿ ಚಿದಂಬರಂ

ಈರುಳ್ಳಿ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಸಂಸದರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಿ ಚಿದಂಬರಂ

05 Dec 2019 | 9:22 PM

ನವದೆಹಲಿ, ಡಿ 5(ಯುಎನ್ಐ)- ದೇಶದಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಗಗನ ಮುಖಿಯಾಗಿರುವುದನ್ನು ಪ್ರತಿಭಟಿಸಿ ಸಂಸತ್ ಭವನದ ಆವರಣದಲ್ಲಿ ಗುರುವಾರ ಬೆಳಗ್ಗೆ ಅಧೀರ್ ರಂಜನ್ ಚೌಧರಿ, ಅಮರ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ, ರಾಜ್ಯಸಭಾ ಸದಸ್ಯ ಪಿ.

 Sharesee more..