Tuesday, Aug 4 2020 | Time 00:05 Hrs(IST)
Sports Share

ಮೆಸ್ಸಿಗೆ ಶುಭಕೋರಿದ ದಂತಕಥೆ ಫುಟ್ಬಾಲ್ ಆಟಗಾರ ಪೀಲೆ

ನವದೆಹಲಿ, ಜುಲೈ 3 (ಯುಎನ್ಐ)- ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ತಮ್ಮ ವೃತ್ತಿ ಜೀವನದ 700 ಗೋಲು ದಾಖಲಿಸಿದಕ್ಕಾಗಿ ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಅಭಿನಂದಿಸಿದ್ದಾರೆ.

ಬಾರ್ಸಿಲೋನಾ ಫಾರ್ವರ್ಡ್ ಆಟಗಾರ ಈ ಮೈಲುಗಲ್ಲನ್ನು ಲಾ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮುಟ್ಟಿದರು. ಮಂಗಳವಾರ ಅಟ್ಲೆಟಿಕೊ ಮ್ಯಾಡ್ರಿಡ್‌ನೊಂದಿಗೆ ಕ್ಯಾಟಲಾನ್ ಕ್ಲಬ್‌ ಸಮಬಲ ಸಾಧಿಸಿತು. ಈ ಪಂದ್ಯದಲ್ಲಿ ಮೆಸ್ಸಿ ಒಂದು ಗೋಲು ದಾಖಲಿಸಿ ಮಿಂಚಿದರು. ಈ ಮೂಲಕ 862 ಪಂದ್ಯಗಳಲ್ಲಿ ಮೆಸ್ಸಿ ಈ ಸಾಧನೆ ಮಾಡಿದರು.

ಅದ್ಭುತ, ಅತ್ಯದ್ಭುತ. ನೀಮ್ಮ ಆಟವನ್ನು ಆಡುವುದನ್ನು ನೋಡಲು ಸಂತೋಷವಾಗುತ್ತದೆ. 700 ಗೋಲುಗಳ ಕ್ಲಬ್‌ಗೆ ಸುಸ್ವಾಗತ” ಎಂದು ಪೀಲೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿರುವ ಪೀಲೆ, 1,363 ಪಂದ್ಯಗಳಲ್ಲಿ 1,281 ಗೋಲು ಗಳಿಸಿದ ವೃತ್ತಿಜೀವನದ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ಮೆಸ್ಸಿಯವರು ಬಾರ್ಸಿಲೋನಾ ಪರ 724 ಪಂದ್ಯಗಳಲ್ಲಿ 630 ಮತ್ತು ಅರ್ಜೆಂಟೀನಾ ಪರ 138 ಪಂದ್ಯಗಳಲ್ಲಿ 70 ಗೋಲು ಬಾರಿಸಿದ್ದಾರೆ.

ಯುಎನ್ಐ ವಿಎನ್ಎಲ್ 0939