Monday, Jun 24 2019 | Time 14:50 Hrs(IST)
 • ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರ ಸಾಧನೆ ಕೊಂಡಾಡಿದ ಸಾರಂಗಿ
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
 • ಹೊಸ ವಿಮಾನ ಸೇರ್ಪಡೆಯಾಗುವವರೆಗೆ ಎಎನ್ -32 ವಿಮಾನ ಮುಂದುವರಿಕೆ: ವಾಯು ಪಡೆ ಮುಖ್ಯಸ್ಥ ಧನೋವಾ
 • ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
Karnataka Share

ಮೊಹಮ್ಮದ್ ಮನ್ಸೂರ್ ಸಚಿವರ ಹೆಸರು ಬಹಿರಂಗಗೊಳಿಸಿದರೆ ಸರ್ಕಾರ ಪತನ

ಮೊಹಮ್ಮದ್ ಮನ್ಸೂರ್ ಸಚಿವರ ಹೆಸರು ಬಹಿರಂಗಗೊಳಿಸಿದರೆ ಸರ್ಕಾರ ಪತನ
ಮೊಹಮ್ಮದ್ ಮನ್ಸೂರ್ ಸಚಿವರ ಹೆಸರು ಬಹಿರಂಗಗೊಳಿಸಿದರೆ ಸರ್ಕಾರ ಪತನ

ಬೆಂಗಳೂರು, ಜೂ 12 (ಯುಎನ್‍ಐ) ಐಎಂಎ ಹಣಕಾಸು ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್, ಒಂದು ವೇಳೆ ಪ್ರಕರಣದಲ್ಲಿ ಕೇಳಿಬಂದಿರುವ ರಾಜ್ಯ ಸಚಿವ ಸಂಪುಟದ ಸಚಿವರ ಹೆಸರನ್ನು ಬಹಿರಂಗಗೊಳಿಸಿದ 24 ತಾಸುಗಳಲ್ಲಿಯೇ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಐಎಂಎ ವಂಚನೆ ಪ್ರಕರಣ ಸರ್ಕಾರದ ಮೂಗಿನಡಿಯಲ್ಲಿಯೇ ನಡೆದಿದೆ. ಹೀಗಾಗಿ ಆತಂಕಗೊಂಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಕರಣ ಸಂಬಂಧ ಯಾವುದೇ ನಿರ್ದಿಷ್ಟ ಕ್ರಮಕೈಗೊಳ್ಳುತ್ತಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳುವ ಭಯದಲ್ಲಿರುವ ಕುಮಾರಸ್ವಾಮಿ, ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುವ ಬದಲು ಕುಮಾರಸ್ವಾಮಿ, ಆರೋಪಿಯ ಬಂಧನಕ್ಕೆ ಕ್ರಮಕೈಗೊಳ್ಳಬೇಕು. ಆತನ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರ ವಕ್ಫ್ ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸದೆ ಅಲ್ಪಸಂಖ್ಯಾತರಿಗೆ ಅನ್ಯಾಯ‌ಮಾಡಿತ್ತು. ಈಗ ಐಎಂಎ ವಂಚನೆ ಪ್ರಕರಣದಲ್ಲಿ ಸರಿಯಾಗಿ ಕ್ರಮಕೈಗೊಳ್ಳದೇ ಅಲ್ಪಸಂಖ್ಯಾತರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕೋಟಾ ಆರೋಪಿಸಿದರು.

ಜಿಂದಾಲ್ ಸಂಸ್ಥೆಗೆ ಭೂಮಿ ಪರಬಾರೆ ಮಾಡುವ ಸರ್ಕಾರದ ಕ್ರಮವನ್ನು ಬಿಜೆಪಿ ವಿರೋಧಿಸಿದ್ದು, ಪಕ್ಷ ನೀಡಿದ ಎಚ್ಚರಿಕೆಯ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಚಿವ ಸಂಪುಟ ನಿರ್ಧಾರ ಮರುಪರಿಶೀಲಿಸಿ ಮತ್ತೊಂದು ಸಮಿತಿ ರಚನೆ ಮಾಡುವುದಾಗಿ ಹೇಳಿದೆ. ಆದರೆ ಸರ್ಕಾರ ತನ್ನ ಸಚಿವ ಸಂಪುಟದ ನಿರ್ಧಾರದಿಂದ ಹಿಂದೆ ಸರಿದು ಭೂಮಿ ಪರಬಾರೆ ಆದೇಶ ಹಿಂಪಡೆಯುವವರೆಗೂ ಬಿಜೆಪಿ ತನ್ನ ಹೋರಾಟ ನಿಲ್ಲಿಸುವುದಿಲ್ಲ. ಜಿಂದಾಲ್ ಸಂಸ್ಥೆ ಸಂಬಂಧ ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಸಮಿತಿ ಕೊಟ್ಟ ವರದಿ ಏನಾಯಿತು ? ಎಂದು ಪ್ರಶ್ನಿಸಿದರು.

ಚಾಮರಾಜನಗರದ ದಲಿತರನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಸಂತ್ರಸ್ತರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಕಳೆದ ಬಾರಿ ಪಶ್ಚಿಮಘಟ್ಟದಲ್ಲಿ ನಡೆದ ಮೇಘಸ್ಫೋಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರು , ಸಂಘ ಸಂಸ್ಥೆಗಳು‌ ನೀಡಿದ ದೇಣಿಗೆಯನ್ನೇ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಲ್ಲ. ಕೊಡಗು ಸಂತ್ರಸ್ಥರಿಗಾಗಿ ಸಾರ್ವಜನಿಕರು ಕಳುಹಿಸಿದ್ದ ಬಟ್ಟೆ, ದಿನಬಳಕೆ ವಸ್ತುಗಳೆಲ್ಲ ಕೊಡಗಿನ ಕಲ್ಯಾಣ ಮಂಟಪಗಳಲ್ಲಿ ಹಾಗೆಯೇ ಕೊಳೆಯುತ್ತಾ ಬಿದ್ದಿವೆ. ಪರಿಹಾರ, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಸರ್ಕಾರ, ಎಲ್ಲದಕ್ಕೂ ಕೇಂದ್ರ ಸರ್ಕಾರವೇ ಹೊಣೆ ಎಂದು ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪ್ರ‍ಶ್ನಿಸಿದರು.

ಯುಎನ್‍ಐ ಯುಎಲ್‍ ಎಹೆಚ್ 1700

More News
ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ: ಡಾ ಜಿ ಪರಮೇಶ್ವರ

ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ: ಡಾ ಜಿ ಪರಮೇಶ್ವರ

24 Jun 2019 | 1:38 PM

ಬೆಂಗಳೂರು, ಜೂ 24 [ಯುಎನ್ಐ] ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮೈಸೂರಿನಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ನಿರ್ಧರಿಸಿದ್ದು, ಇದಕ್ಕಾಗಿ 25 ಎಕರೆ ಭೂಮಿ ನೀಡಲು ಸುತ್ತೂರು ಮಠ ಮುಂದೆ ಬಂದಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ.

 Sharesee more..
ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ

ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ

24 Jun 2019 | 1:35 PM

ಬೆಂಗಳೂರು ಜೂನ್ 24(ಯುಎನ್ಐ) ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಗ್ರಾಮ ವಾಸ್ತವ್ಯ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿರುವ ವಿಧಾನಸಭೆಯ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿವಿಧ ವೈಫಲ್ಯಗಳನ್ನು ಒಳಗೊಂಡಿರುವ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ.

 Sharesee more..
ಮನ್ಸೂನ್‍ ಖಾನ್‍ನೊಂದಿಗೆ ಯಾವುದೇ ಸಂಬಂಧವಿಲ್ಲ: ರಹ್ಮಾನ್‍ ಖಾನ್ ಸ್ಪಷ್ಟನೆ

ಮನ್ಸೂನ್‍ ಖಾನ್‍ನೊಂದಿಗೆ ಯಾವುದೇ ಸಂಬಂಧವಿಲ್ಲ: ರಹ್ಮಾನ್‍ ಖಾನ್ ಸ್ಪಷ್ಟನೆ

24 Jun 2019 | 11:57 AM

ಬೆಂಗಳೂರು, ಜೂ 24 (ಯುಎನ್ಐ) ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಮಾಲೀಕ ಮನ್ಸೂರ್ ಖಾನ್‍ಗೂ ತಮಗೂ ಯಾವುದೇ ಸಂಬಂಧವಿಲ್ಲ.

 Sharesee more..
ಬರ ಪರಿಹಾರ ಕಾಮಗಾರಿ ಸಮರೋಪಾದಿಯಲ್ಲಿ ನಡೆಸಲು ಡಿಸಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

ಬರ ಪರಿಹಾರ ಕಾಮಗಾರಿ ಸಮರೋಪಾದಿಯಲ್ಲಿ ನಡೆಸಲು ಡಿಸಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

24 Jun 2019 | 11:18 AM

ಬೆಂಗಳೂರು, ಜೂ 24 (ಯುಎನ್ಐ) ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆ ಬರಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಸಮರೋಪಾದಿಯಲ್ಲಿ ಕೆಲಸ ಆರಂಭಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

 Sharesee more..