SportsPosted at: Jul 14 2019 7:19PM Shareಯು.ಎಸ್. ಓಪನ್: ಸೌರಭ್ ಗೆ ನಿರಾಸೆಫುಲ್ಲರ್ಟನ್ (ಅಮೆರಿಕ), ಜು 13 (ಯುಎನ್ಐ)- ಇಲ್ಲಿ ನಡೆದಿರುವ ಯು.ಎಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಭಾರತದ ಸೌರಭ್ ವರ್ಮಾ ನಿರಾಸೆ ಅನುಭವಿಸಿದ್ದಾರೆ. ಉಪಾಂತ್ಯ ಪಂದ್ಯದಲ್ಲಿ ಸೌರಭ್ 9-21, 18-21 ರಿಂದ ಥಾಯ್ಲೆಂಡ್ ನ ತೋಂಗಸ್ಕಾ ವಿರುದ್ಧ ನಿರಾಸೆ ಅನುಭವಿಸಿದರು. ಸೌರಭ್ ಅವರು ವಿಶ್ವ ಶ್ರೇಯಾಂಕದಲ್ಲಿ 43ನೇ ಸ್ಥಾನದಲ್ಲಿದ್ದು, ತಮಗಿಂತ ಕಡಿಮೆ ಶ್ರೇಯಾಂಕಿತ ಆಟಗಾರನ ವಿರುದ್ಧ ನಿರಾಸೆ ಅನುಭವಿಸಿದ್ದಾರೆ. 39 ನಿಮಿಷ ನಡೆದ ಕಾದಾಟದಲ್ಲಿ ಸೌರಭ್ ಸೋಲು ಕಂಡರು. ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ಸ್ ಗೆ ಅರ್ಹತೆ ಪಡೆದಿದ್ದ ಸೌರಭ್, ಮಹತ್ವದ ಪಂದ್ಯದಲ್ಲಿ ಅಂಕ ಗಳಿಸುವಲ್ಲಿ ವಿಫಲರಾದರು. ಎದುರಾಳಿ ಆಟಗಾರ ಮೊದಲ ಗೇಮ್ ನಲ್ಲಿ 13-3 ರ ಮುನ್ನಡೆ ಸಾಧಿಸಿದ್ದರು. ಬಳಿಕ ಸೌರಭ್ ಅಂಕ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಸೌರಭ್ ಎರಡನೇ ಗೇಮ್ ನಲ್ಲಿ 4-1 ರಿಂದ ಭರ್ಜರಿ ಆರಂಭ ಪಡೆದರು. ಬಳಿಕ 9-9 ರಿಂದ ಸಮಬಲ ಸಾಧಿಸಿದರೂ, ನಂತರ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾದರು. ಪರಿಣಾಮ ಪದಕದ ಆಸೆ ಕೈ ಚೆಲ್ಲಿದರು. ಯುಎನ್ಐ ವಿಎನ್ಎಲ್ ಎಸ್ಎಚ್ 1919