Monday, Jul 22 2019 | Time 07:06 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ಯುಕೆ ತೈಲ ಟ್ಯಾಂಕರ್ ವಶಕ್ಕೆ ಇರಾನ್ ಯತ್ನ ಆರೋಪ : ಇರಾನ್ ವಿದೇಶಾಂಗ ಸಚಿವರ ನಿರಾಕರಣೆ

ತೆಹ್ರಾನ್, ಜುಲೈ 11 (ಯುಎನ್ಐ) ಪರ್ಷಿಯನ್ ಗಲ್ಫ್ ನಲ್ಲಿ ಯುಕೆ ತೈಲ ಟ್ಯಾಂಕರ್ ಅನ್ನು ಐದು ಇರಾನಿ ದೋಣಿಗಳು ವಶಕ್ಕೆ ಇರಾನ್ ಯತ್ನಿಸಿದೆ ಎಂಬ ವಾಷಿಂಗ್‌ಟನ್ ಆರೋಪವನ್ನು ಇರಾನ್ ವಿದೇಶಾಂಗ ಸಚಿವ ಮೊಹಮದ್ ಜವಾದ್ ಜ಼ರಿಫ್ ಗುರುವಾರ ನಿರಾಕರಿಸಿದ್ದಾರೆ.
ಇರಾನ್ ಇಸ್ಲಾಮಿಕ್ ಕ್ರಾಂತಿ ರಕ್ಷಣಾ ಪಡೆಯನ್ನು ಅಮೆರಿಕ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ್ದು, ಈ ದೋಣಿಗಳು ಯುಕೆ ದೋಣಿಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು.
ಈ ಹೇಳಿಕೆ ಪ್ರಸ್ತುತ ಇರುವ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಜರೀ಼ಫ್ ಪ್ರತಿಕ್ರಿಯೆ ನೀಡಿದ್ದಾರೆ.

ಯುಎನ್ಐ ಜಿಎಸ್‌ಆರ್ ಕೆಎಸ್ಆರ್ 1258