Monday, Jul 22 2019 | Time 07:15 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Karnataka Share

ಯೂತ್ ಕಾಂಗ್ರೆಸ್ ಸುಪ್ರೀಂ ಗೆ ಯಾವುದೇ ಆರ್ಜಿ ಸಲ್ಲಿಸಿಲ್ಲ;ದಿನೇಶ್ ಗುಂಡೂರಾವ್ ಸ್ಪಷ್ಟನೆ

ಯೂತ್   ಕಾಂಗ್ರೆಸ್ ಸುಪ್ರೀಂ ಗೆ  ಯಾವುದೇ ಆರ್ಜಿ ಸಲ್ಲಿಸಿಲ್ಲ;ದಿನೇಶ್ ಗುಂಡೂರಾವ್ ಸ್ಪಷ್ಟನೆ
ಯೂತ್ ಕಾಂಗ್ರೆಸ್ ಸುಪ್ರೀಂ ಗೆ ಯಾವುದೇ ಆರ್ಜಿ ಸಲ್ಲಿಸಿಲ್ಲ;ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು, ಜುಲೈ 12( ಯುಎನ್ಐ)- ಬಂಡಾಯ ಶಾಸಕರಿಗೆ ಸಂಬಂಧಿಸಿದಂತೆ ಯೂತ್ ಕಾಂಗ್ರೆಸ್ ಯಾವುದೇ ಆರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಯುವ ವಿಭಾಗ ಎಂಬ ಹೆಸರಿನ ಯಾವುದೇ ಸಂಘಟನೆ ಇಲ್ಲ. ಸುಪ್ರೀಂ ಕೋರ್ಟ್ ಗೆ ಆರ್ಜಿ ಸಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ, ಮಾಧ್ಯಮಗಳು ಈ ಸಂಬಂಧ ಯಾವುದೇ ವರದಿ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ದಿನೇಶ್ ಗುಂಡೂರಾವ್ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.

ಯುಎನ್ಐ ಕೆವಿಆರ್ ಎಎಚ್ 1306