Wednesday, Feb 19 2020 | Time 12:26 Hrs(IST)
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
Karnataka Share

ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ

ಬೆಂಗಳೂರು , ಆ 21 (ಯುಎನ್ಐ) ಮೀನುಗಾರರ ಯಾಂತ್ರೀಕೃತ ಬೋಟ್‍ಗಳಿಗೆ ಬಂದರಿನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ಡೀಸೆಲ್‍ನ ಪ್ರಮಾಣವನ್ನು 400 ಲೀಟರುಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರ ನೇತೃತ್ವದ ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.


ಕಳೆದ ಎರಡು ವರ್ಷಗಳಿಂದ ಡೀಸೆಲ್ ಬೆಲೆ ಏರಿಕೆ, ಮತ್ಸ್ಯ ಕ್ಷಾಮ ಹಾಗೂ ಮೀನಿಗೆ ಯೋಗ್ಯಧಾರಣೆ ಸಿಗದೇ ಮೀನುಗಾರರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಮೀನುಗಾರರಿಂದ ಮಾರಾಟ ತೆರಿಗೆ ಪಾವತಿಸಿಕೊಂಡು ಬಳಿಕ ಅವರ ಖಾತೆಗೆ ಈ ಮೊತ್ತವನ್ನು ಸರ್ಕಾರ ಜಮಾ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಪಾವತಿಯಾಗದ ಹಿನ್ನೆಲೆಯಲ್ಲಿ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹಿಂದಿನಂತೆ ಬಂದರುಕಟ್ಟೆಯಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ಡೀಸೆಲ್ ಪ್ರಮಾಣ ಹೆಚ್ಚಿಸುವಂತೆ ಸಚಿವರ ನಿಯೋಗ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದರು.


ನಿಯೋಗದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹಿಂದಿನ ಪದ್ಧತಿಯಂತೆ ಡೀಸೆಲ್ ಒದಗಿಸುವಂತೆ ಹಾಗೂ ಡೀಸೆಲ್ ಪ್ರಮಾಣ 400 ಲೀಟರುಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿಯಾಗಿ ಮಲ್ಪೆಯ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ದೋಣಿ ಮುಳುಗಿದ್ದು, ಸಮುದ್ರದಲ್ಲಿ ಅದರ ಅವಶೇಷ ಪತ್ತೆಯಾಗಿದೆ. ಈ ದೋಣಿಯಲ್ಲಿದ್ದ ಮೀನುಗಾರರು ಇನ್ನು ಪತ್ತೆಯಾಗಿಲ್ಲ, ಅವರ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮೀನುಗಾರರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.ಘಟನೆ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದ ರಕ್ಷಣಾ ಸಚಿವರಿಗೆ ಪತ್ರ ಬರೆದು ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.ಯುಎನ್ಐ ಎಸ್ಎಂಆರ್ ಎಎಚ್ 1745