Wednesday, Feb 26 2020 | Time 10:22 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Special Share

ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ 'ಸೂರ್ಯ ಸಿದ್ಧಾಂತ' ಆಧಾರ: ಕೇರಳ ರಾಜ್ಯಪಾಲ

ತಿರುವನಂತಪುರಂ, ಜ 24 (ಯುಎನ್ಐ) ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಶುಕ್ರವಾರ ತಿರುವನಂತಪುರಂನಲ್ಲಿ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಶ್ರೀ ಚಿತಿರಾ ತಿರುನಾಳ್ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು, ಸಾಂಪ್ರದಾಯಿಕ ಭಾರತೀಯ ವಿಜ್ಞಾನವನ್ನು ಪುರಾಣದ ರೂಪದಲ್ಲಿ ದೇಶವಾಸಿಗಳ ಮನಸ್ಸಿನಲ್ಲಿ ಇಳಿಸಲಾಗಿದ್ದು ಮೂಲ ವಿಜ್ಞಾನವನ್ನು ವಿದೇಶಿಯರು ಅರಿತು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಇತ್ತೀಚಿನ ವರ್ಷಗಳಲ್ಲಿ ನಮ್ಮ ಪ್ರಾಚೀನ ಜ್ಞಾನದ ಪರಿಚಯವಿಲ್ಲದಂತಿದ್ದೇವೆ. ಇದರ ಫಲವಾಗಿ ನಮ್ಮ ಪುಸ್ತಕಗಳಲ್ಲಿನ ವೈಜ್ಞಾನಿಕ ಉಲ್ಲೇಖಗಳು ಪುರಾಣಕಥೆಗಳಾಗಿ ಮಾರ್ಪಡಾಗಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
'ಸೂರ್ಯ ಸಿದ್ಧಾಂತ' ವನ್ನು ಬಾಗ್ದಾದ್‌ನ ಅಲ್-ಮನ್ಸೂರ್ ನ್ಯಾಯಾಲಯದ ಮುಂದೆ ಇಡಲಾಗಿತ್ತು. ಅಲ್ಲಿ ಎರಡನೇ ಅಬ್ಬಾಸಿಡ್ ಖಲೀಫನನ್ನು ಕನಕ್ ಎಂಬ ವ್ಯಕ್ತಿ ಕಂಡಿದ್ದನು. ನಂತರ ಖಲೀಫರು ಗಣಿತಜ್ಞ ಇಬ್ರಾಹಿಂ ಅಲ್-ಫಜಾರಿ ಗೆ ಈ ಗ್ರಂಥವನ್ನು ಅರೇಬಿಕ್‌ಗೆ ಭಾಷಾಂತರಿಸಲು ಹೇಳಿದರು. ಅದರ ನಂತರ, ಆಗಿನ ಸ್ಪೇನ್‌ನ ಆಡಳಿತಗಾರನು ಲೇಖಕನಿಗೆ ಭಾರಿ ಲಂಚ ನೀಡುವ ಮೂಲಕ ಪುಸ್ತಕದ ಪ್ರತಿಯನ್ನು ಪಡೆದನು. ಅಂತಿಮವಾಗಿ, ಈ ಪುಸ್ತಕವನ್ನು ಬಹುತೇಕ ಎಲ್ಲಾ ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲಾಯಿತು ಮತ್ತು ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಯಿತು ಎಂದು ರಾಜ್ಯಪಾಲರು ತಿಳಿಸಿದರು.

"ನಮ್ಮ ವಿಜ್ಞಾನಿಗಳಾದ ಡಾ. ಮಾಧವನ್ ನಾಯರ್ ಮತ್ತು ಡಾ. ಶಿವನ್ ಅವರುಗಳ ಅಪಾರ ಸಾಧನೆಗೆ ಮಾತ್ರವಲ್ಲದೇ ನಮ್ಮ ಸಂಪ್ರದಾಯಗಳು ಮತ್ತು ನೀತಿಗಳನ್ನು ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದ್ದು ನಾವು ಅವರಿಗೆ ಕೃತಜ್ಞರಾಗಿರುತ್ತೇವೆ" ಎಂದರು ಅವರು ಹರ್ಷ ವ್ಯಕ್ತಪಡಿಸಿದರು.
ಯುಎನ್ಐ ಜಿಎಸ್ಆರ್ 2240