Monday, Sep 21 2020 | Time 11:55 Hrs(IST)
  • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Sports Share

ಯಾಸೀರ್ ಮಾರಕ ದಾಳಿ, ಪಾಕ್ ಗೆ ಇನಿಂಗ್ಸ್ ಮುನ್ನಡೆ

ಮ್ಯಾಂಚೆಸ್ಟರ್, ಆಗಸ್ಟ್ 7 (ಯುಎನ್ಐ)
ಯಾಸೀರ್ ಶಾ (66ಕ್ಕೆ 4) ಅವರ ಮಾರಕ ದಾಳಿಯ ಫಲದಿಂದ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ 2 ವಿಕೆಟ್ ಗೆ 92 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಜೋ ರೂಟ್ ಬಳಗ 70.3 ಓವರ್ ಗಳಲ್ಲಿ 219 ರನ್ ಗಳಿಗೆ ಸರ್ವಪತನಗೊಂಡಿತು. ನಂತರ 107 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ, ಚಹಾ ವಿರಾಮದ ವೇಳೆಗೆ 9 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿತ್ತು.
ಇದಕ್ಕೂ ಮುನ್ನ ಪ್ರವಾಸಿ ತಂಡದ ಸಾಂಘಿಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಯಾವುದೇ ಹಂತದಲ್ಲೂ ಪುಟಿದೇಳುವ ಎದೆಗಾರಿಕೆ ಪ್ರದರ್ಶಿಸಲಿಲ್ಲ. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಒಲಿ ಪೋಪ್ ಆತಿಥೇಯರ ಪರ ಗರಿಷ್ಠ 62 ರನ್ ಗಳಿಸಿ ಹಿನ್ನಡೆಯನ್ನು ತಗ್ಗಿಸಿದರು. ಪಾಕಿಸ್ತಾನ ಪರ ಯಾಸೀರ್ ಅಲ್ಲದೆ ಮೊಹಮ್ಮದ್ ಅಬ್ಬಾಸ್ ಮತ್ತು ಶದಾಬ್ ಖಾನ್ ತಲಾ 2 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 326 ಮತ್ತು ದ್ವಿತೀಯ ಇನಿಂಗ್ಸ್ (ಚರಾ ವಿರಾಮಕ್ಕೆ) 9 ಓವರ್ ಗಳಲ್ಲಿ 1 ವಿಕೆಟ್ ಗೆ 20 ( ಅಬಿದ್ ಅಲಿ ಬ್ಯಾಟಿಂಗ್ 15; ಬ್ರಾಡ್ 2ಕ್ಕೆ 1).
ಇಂಗ್ಲೆಂಡ್ : ಮೊದಲ ಇನಿಂಗ್ಸ್ 70.3 ಓವರ್ ಗಳಲ್ಲಿ 219 (ಒಲಿ ಪೊಪ್ 62, ಬಟ್ಲರ್ 38, ಬ್ರಾಡ್ ಅಜೇಯ 29; ಯಾಸೀರ್ ಶಾ 66ಕ್ಕೆ 4, ಶದಾಬ್ ಖಾನ್ 13ಕ್ಕೆ 2).
ಯುಎನ್ಐಆರ್ ಕೆ 2106